ಪುಟ:ಶ್ರೀಮತಿ ಪರಿಣಯಂ.djvu/೯೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶ್ರೀಮತೀಪರಿಣಯಂ ಹ್ಯವುಂಟಾಗುವಂತೆ ವರವನ್ನು ಪಡೆದುಬರುವೆನು. ಈ ಸಂದರ್ಭ ದಲ್ಲಿಸ್ವಕಾರಸಾಧನೆಯೊಡನೆ ಆ ನಾರದನಿಗೆ ದೊಡ್ಡ ಅವಮಾನ ವನ್ನೂ ಉಂಟುಮಾಡದಿದ್ದರೆ ನಾನು ಪಕ್ವತನೆ? ಇನ್ನು ಕಾಲ ವಿಳಂಬವು ಸಾಕು ! (ಹೋಗುವನು.) ಆಸ್ಥಾನ 'ಕ್ಷೀರಾಬ್ಬಿ. ಮಹಾವಿಷ್ಣುವು ಶೇಷಶಯನದಲ್ಲಿ ಲಕ್ಷ್ಮಿದೇವಿಯೊಡನೆ ಪಗಡೆಯಾಡುತ್ತಿರುವನು.) ರಾಗ - ತಾಳ. ನೋಡು ನೋಡೆಲೆ | ನೀರಜಾಕ್ಷ ನಾ | ನಾಡುವಾಟವ|| ನೀಗಲೆ 11 ಕಾಂತೆಯೆನ್ನೊಳ | ಗಿಂತು ಪಂಥವ | ನಾಂತು ನೀ ಜೈಸುವ / ಚಿಂತೆಯ ಬಿಡುಬಿಡು || ನೋಡಲೇಕೆ 1 ಬಲ್ಲೆ ನಿನ್ನ | ಗಾಡಿತನವನು | ಕಾಂತಕೇಳ | ಕಾಲಸೂತ್ರದ 1 ಜಾಲದಿಂ ಭುವ ನಾಳಿಯನಾಡಿಸ | ಲೀಲೆಯಿದಲ್ಲವು || ವಿಷ್ಣು- ಸುಂದರೀಮಣಿ | ಮುಂದೆ ನೋಡಿದೊ ! ಕೊಂದೆನು ಕಾಯ್ದಳ | ಹಿಂದಕೆ ತೆಗೆತೆಗೆ 11 ಲಕ್ಷ್ಮಿ - ಎಲ್ಲ ಲೋಕವ | ಕೊಲ್ಲುವ ಸಾಸವು! ಸಲ್ಲದೀ ಯಾದೊಳಕೆ | ಬಲ್ಲೆನಾಂ ಬಿಡುಬಿಡು|| (ಶ್ರೀವಿಷ್ಣುವಿನ ಮುಖದಲ್ಲಿ ಅಕಾರಣಹಾಸ್ಯವನ್ನು ನೋಡಿ ಲಕ್ಷ್ಮಿಯು ಆಟವನ್ನು ನಿಲ್ಲಿಸಿ.) ಲಕ್ಷ- ನಾಥಾ ! ಇದೇನು ? ನಿಷ್ಕಾರಣವಾಗಿ ನಗುವುದೇಕೆ ? ವಿಷ್ಣು- ನಗುವುದಕ್ಕೆ ಕಾರಣವುಂಟು. ಲಕ-ಏನದು ? ಅದನ್ನು ನನಗೂ ತಿಳಿಸಬಾರದೆ ? ವಿಷ್ಣು ಮುಂದೆ ನಿನಗೆ ಆ ವಿಚಾರವು ತಾನಾಗಿಯೇ ಗೊತ್ತಾಗುವುದು. ಅದೊಂದ ಸಂಗತಿ ! ಲಕ್ಷ್ಮಿ