ಪುಟ:ಶ್ರೀಮತಿ ಪರಿಣಯಂ.djvu/೯೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೭o ಶ್ರೀಮತೀಪರಿಷಯಂ ಸ್ಥಿತಿಯು ಲೋಕದಲ್ಲಿ ಕೇವಲ ಹಾಸ್ಯಾಸ್ಪದವಾಗುವುದೆಂಬು ದನ್ನೂ ನೀನು, ಇನ್ನು ಸ್ವಲ್ಪ ಕಾಲದೊಳಗಾಗಿ, ಈ ನಾರದ ಪರ್ವತರ ದೃಷ್ಟಾಂತದಿಂದಲೇ ತಿಳಿಯಬಹುದು. ಲಕ್ಷ್ಮಿ (ನಗುತ್ತ ಸ್ತ್ರೀಯರು ಅನರ್ಥಹೇತುಗಳೆಂಬುದು ಹಾಗಿರಲಿ ಪುರುಷೋತ್ತಮನೆನಿಸಿಕೊಂಡ ನೀನು, ಈಗ ನಿನ್ನ ಭಕ್ತರಾದ ನಾರದಪರೈತರನ್ನೇ ಹೀಗೆ ಮಾಯಾಪಾಶದಲ್ಲಿ ಕಟ್ಟೆ, ಅಪಹಾ ಸ್ಯಕ್ಕೆ ಗುರಿಮಾಡಿದಮೇಲೆ ಪುರುಷರನ್ನು ಹೇಗೆ ನಂಬಬಹುದು? ವಿಷ್ಣು- ದೇವಿ ! ಹಾಗಿಲ್ಲ ! ಮನುಷ್ಯನಲ್ಲಿ ಎಷ್ಟೇ ಗುಣಗಳಿದ್ದರೂ, ಆದ ರಿಂದ ಅವನ ಮನಸ್ಸಿನಲ್ಲಿ ಹೆಮ್ಮೆಯುಂಟಾದಾಗ,ಅದನ್ನಡಗಿಸಿ, ಅವನನ್ನು ಸನ್ಮಾರ್ಗದಲ್ಲಿರಿಸಬೇಕಾದುದು ನನ್ನ ಸಂಕಲ್ಪವು. ಅದರಂತೆಯೇ ಈಗ ನಾರದಪರ್ವತರಿಗೆ ತಾವೇ ಪರಮವಿರಕ್ಕೆ ರೆಂಬ ಹೆಮ್ಮೆಯು ಅಂಕುರಿಸುತ್ತಿರುವುದನ್ನು ನೋಡಿ, ಅದನ್ನಡ ಗಿಸುವುದಕ್ಕಾಗಿ ನಾನು ಹೀಗೆ ಮಾಡಬೇಕಾಯಿತೇ ಹೊರತು ಬೇರೆಯಲ್ಲ ! ಇದಲ್ಲದೆ ಮುಂದೆ ಇದರಿಂದ ಲೋಕಕ್ಷೇಮಕರ ವಾದ ಮತ್ತೊಂದುಕಾರವೂ ನಡೆಯಬೇಕಾಗಿರುವುದು. (ತೆರೆಯಲ್ಲಿ ಗಾನಧ್ವನಿ) (ನಾರದನು ಗಾನನರ್ತನಗಳೊಡನೆ ಸ್ತುತಿಸುತ್ತ ಬರುವನು.) ರಾಗ - ತಾಳ. ನಾರಾಯಕ | ನಿಖಿಲಲೋಕ | ಕಾರಣ ಕರು | ಹಾಕರ | ನೀರೇರುಹದಳಲೋಚನ | ನಿರವಧಿಗುಣೆ ಭೂಷಣ || ದೇವಾದಿದೇವ ಹರೀ | ಶ್ರೀವರ ಶ್ರೀ | ಪಾವನ ಗುಣ ( ಪಾಪಹಾರೀ 1 ಕಾವುಬೈ ಮುರಾರೀ | ವಂದಾರುಜ! ನಾನಂದನ | ಚಂದ್ರಸರಲೋಚನ | ಕುಂದಕುಸುಮರುಚಿಸಮಾನ ( ಮಂದಹಾಸವದನ | ನಾರದಂ-ದೇವಾ ! ವಂದಿಸುವೆನು.