ಪುಟ:ಶ್ರೀಮತಿ ಪರಿಣಯಂ.djvu/೯೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೬೪ ಶ್ರೀಮಪರಿಣಯಂ ರ್ಥಿಸಿದಂತಿದೆ. ರಾಜನು ನಮ್ಮಿಬ್ಬರಲ್ಲಿ ಯಾರನ್ನೂ ತಿರಸ್ಕರಿಸ ಲಾರದೆ, ನಾಳೆ ನಮ್ಮಿಬ್ಬರಿಗಾಗಿಯೇ ಸ್ವಯಂವರವನ್ನೇರ್ಪಡಿ ಸಿರುವನು. ಇದಕ್ಕಾಗಿ ಈಗ ನಾನು ನಿನ್ನಲ್ಲಿ ಪ್ರಾರ್ಥಿಸುವುದೇ ನೆಂದರೆ, ಆ ಸ್ವಯಂವರಕಾಲದಲ್ಲಿ ನಾರದನ ಮುಖವು, ಆಕನ್ಯಕೆಗೆ ಕರಡಿಯಂತೆ ಕಾಣಬೇಕು, ಇದೇ ನನ್ನ ಕೋರಿಕೆ ? ವಿಷ್ಣು -ಮುನೀಂದ್ರಾ ! ಪರಮಭಕ್ತನಾದ ನಿನಗೆ ಈ ಅಲ್ಪಕಾರವನ್ನು ನಡೆಸಿಕೊಡುವುದೊಂದು ದೊಡ್ಡದೆ ! ನಿನ್ನ ಇಷ್ಟದಂತೆಯೇ ಆಗಲಿ ! ನನ್ನಲ್ಲಿ ಬಂದು ಮರೆಹೊಕ್ಕವರೊಬ್ಬರೂ ವಿಫಲಪ್ರ ಯತ್ನರಾಗಿ ಹೋಗಬಾರದು. ಆದರೆ ನಾರದನೂ ಇದೇ ಉದ್ದೇ ಶದಿಂದ ಬಂದು ನನ್ನಲ್ಲಿ ಪ್ರಾರ್ಥಿಸಿದರೆ, ಆಗ ನಾನು ಮಾಡಬೇ ಕಾದುದೇನೆಂದು ಯೋಚಿಸುವೆನು. ಪರ್ವತಂ-ದೇವಾ ! ಆ ಚಿಂತೆಯು ನಿನಗೇಕೆ ? ಮೊದಲು ನಾರದನಿಗೆ ಈ ಯುಕ್ತಿಯೇ ತೋರಲಾರದು. ಆದನ್ನು ನಾನು ಬಲ್ಲೆನು. ವಿಷ್ಣು ಹಾಗಿದ್ದರೆ ಸರಿ ! ಇನ್ನು ನೀನು ಹೋಗಿ ಬಾ ! ಪರ್ವತಂ-ಧನ್ಫೋಸ್ಮಿ ! ನಿನಗೆ ಜಯವಾಗಲಿ ! (ಹೋಗುವನು) ವಿಷ್ಣು -- (ನಗುತ್ತ) ದೇವಿ ! ಈ ವಿನೋದಗಳನ್ನು ನೋಡಿದೆಯಲ್ಲವೆ? ಈ ನಾರದಪರೈತರಿಬ್ಬರ ಕಲಹದಲ್ಲಿ ಇವರಿಬ್ಬರ ಉದ್ದೇಶವೂ ಈ ಡೇರುವಹಾಗಿಲ್ಲ, ಇದರ ಫಲವನ್ನು ಪಡೆಯತಕ್ಕವನು ಮೂರ ನೆಯವನೊಬ್ಬನಿರುವನು, ಅದು ಮುಂದೆ ತಿಳಿಯುವುದು. ಲಕ್ಷ - ದೇವಾ ! ವೇದಾಂತಿಗಳು ನಿನ್ನ ಇಲ್ಲವೇ ಸರೈಫಲಭಾಗಿಯೆಂ ದು ಹೇಳುವರು. ಆ ಫಲವನ್ನನುಭವಿಸತಕ್ಕ ಮೂರನೆಯವನು ನೀನೇ ಆಗಿರಬಾರದೇನು ? ವಿಷ್ಣು- ದೇವಿ ! ದೈವೇಚ್ಛೆಯಿದ್ದಂತೆ ನಡೆಯುವುದು, ಈಗ ನಮಗೆ ಆ ವಿಚಾರವೇಕೆ ? (ತೆರೆಯು ಬಿಳುವುದು.) 5