ಪುಟ:ಶ್ರೀಮದ್ಭಾಗವತವು ದಶಮಸ್ಕಂದದ ಉತ್ತರಾರ್ಧವು.djvu/೨೪೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಧ್ಯಾ, ೮೧.] ದಶಮಸ್ಕಂಧವು. ೨೩೦೯ ಬ ಮಾತ್ರದಿಂದಲ್ಲವೇ,ಆತನು ನನ್ನನ್ನು ಹಾಗೆ ಕೈನೀಡಿ ಆಲಿಂಗಿಸಿಕೊಂಡನು. ಇಷ್ಟು ಮಾತ್ರವಲ್ಲದೆ ನನ್ನ ನ್ನು ಬಡಹುಟ್ಟಿದವನಂತೆ ಭಾವಿಸಿ, ತನ್ನ ಪ್ರಿಯೆ ಯಾದ ರುಕ್ಷ್ಮಿಣಿಯು ಕುಳಿತಿದ್ದ ಮಂಚದಮೇಲೆ ಕರೆತಂದು ಕುಳ್ಳಿರಿಸಿದನು! ನನ್ನ ಆಯಾಸಪರಿಹಾರಾರ್ಥವಾಗಿ ಅವನ ಪಟ್ಟಮಹಿಷಿಯಾದ ರುಕ್ಕಿ ಣಿಯೇ ತನ್ನ ಕೈಯಿಂದ ಚಾಮರವನ್ನು ಬೀಸಲಿಲ್ಲವೆ ? ಇಷ್ಟೇ ಅಲ್ಲ ! ಆ ಭಗವಂತನು ದೇವತೆಗಳಿಗೂ ತಾನು ದೇವನಾಗಿದ್ದರೂ, ಸಮಸ್ತವಿಪ್ರ ಕುಲಕ್ಕೂ ತಾನೇ ನಾಥನಾಗಿದ್ದರೂ, ನನ್ನ ಕಾಲನ್ನು ಹಿಡಿದು ಒತ್ತುತ್ಯ, ನನ್ನನ್ನೇ ದೈವದಂತೆ ಗೌರವಿಸಿ ಶುಕ್ರೂಷೆಮಾಡಿದನು. ಸ್ವರ್ಗಮರ್ತ್ಯ ಪಾತಾಳಗಳಲ್ಲಿರುವ ಸಮಸ್ಯಸಂಪತ್ತುಗಳಿಗೂ, ಆಣಿಮಾದ್ಯಷ್ಮೆಶ್ವರಗ. ಳಿಗೂ, ಸ್ವರ್ಗಮೋಕ್ಷಗಳಿಗೂ ಆ ಭಗವಂತನ ಪಾದಸೇವೆಯ ಮೂಲಾಧಾರವು. ಆತನು ಸಾಭೀಷ್ಟಗಳನ್ನೂ ಕೊಡತಕ್ಕವನಾಗಿದ್ದರೂ, ದ್ರವ್ಯಾರ್ಜನೆಗಾಗಿ ಹೋದ ನನ್ನ ಉದ್ದೇಶವನ್ನು ಈಡೇರಿಸಿದೆ ಹೋದುದ ಕೈ, ಅವನಿಗೆ ನನ್ನಲ್ಲಿರುವ ಪೂರ್ಣಾನುಗ್ರಹವೇ ಕಾರಣವೆಂದು ತೋರುವುದು. ಬಡವನಾದ ನನಗೆ ಧನವನ್ನು ಕೊಟ್ಟು ನನ್ನನ್ನು ಧನವಂತನನ್ನಾಗಿ ಮಾಡಿ ಬಿಟ್ಟರೆ, ಆ ಹಣದ ಹೆಮ್ಮೆಯಿಂದ ನಾನು ತನ್ನನ್ನು ಮರೆತುಬಿಡಬಹುದೆಂ ದೆಣಿಸಿ, ಕಾರುಣಿಕನಾದ ಆತನು, ನನಗೆ ಬೇಕಾದ ಹಣವನ್ನು ಕೊಡದೆ ಕಳುಹಿಸಿಬಿಟ್ಟಿರಬೇಕು ! ಆತನು ನನ್ನಲ್ಲಿ ಅನುಗ್ರಹಬುದ್ಧಿಯಿಂದಲೇ ನನ್ನನ್ನು ಈ ಸ್ಥಿತಿಯಲ್ಲಿರಿಸಿರುವುದರಿಂದ, ನಾನು ಸಂತೋಷಪಡಬೇಕೇ ಹೊರತು ದುಖಿಸಬೇಕಾದುದಿಲ್ಲ” ಎಂದು ಸಮಾಧಾನವನ್ನು ಮಾಡಿ ಕೊಂಡು, ತನ್ನ ಮನೆಯ ಬಾಗಿಲಿಗೆ ಬಂದು ಸೇರಿದನು.ಅಲ್ಲಿ ಬಂದು ನೋಡು ವಾಗ, ಅವನ ಆಶ್ಚಠ್ಯವನ್ನು ಕೇಳಬೇಕೆ ? ಹಿಂದಿನ ಸ್ಥಿತಿಯೊಂದೂ ಅವನಿಗೆ ಕಾಣಿಸಲಿಲ್ಲ. ತಾನು ವಾಸಮಾಡುತ್ತಿದ್ದ ಆ ಸಣ್ಣ ಜೋಪಡಿಯಿದ್ದ ಸ್ಥಳ ದಲ್ಲಿ, ಸೂರಚಂದ್ರಾಗ್ನಿಗಳಿಗೆ ಸಮಾನವಾದ ದಿವ್ಯಕಾಂತಿಯುಳ್ಳ ವಿಮಾನ ಗಳು ಸುತ್ತಲೂ ಆವರಿಸಿರುವುವು. ಆ ಮನೆಯಸುತ್ತಲೂ, ವಿಚಿತ್ರವಾದ ಉಪವನಗಳೂ, ಉದ್ಯಾನಗಳೂ ಕಂಗೊಳಿಸುವುವು. ಆ ತೋಟಗಳಲ್ಲಿ ವನ ಪಕ್ಷಿಗಳು ಕಿವಿಗಿಂಪಾಗಿ ಕೂಗುತ್ತಿರುವುವು, ನಡುನಡುವೆ ಅರಳಿದ ಕಮಲ