ಪುಟ:ಶ್ರೀಮದ್ಭಾಗವತವು ದಶಮಸ್ಕಂದದ ಉತ್ತರಾರ್ಧವು.djvu/೨೭೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೩೩೫ ಅಥ್ಯಾ, ಲ೪.] ದಶಮಸ್ಕಂಧವು. ಡು ಹೀಗೆಂದು ಹೇಳುವನು. ಓ ಬ್ರಾಹ್ಮಣೋತ್ತಮರೆ! ಈ ವಸುದೇವನು ತನಗೆ ಶ್ರೇಯಸ್ಸಾಧಕವಾದ ಈ ವಿಷಯವನ್ನು ಕುರಿತು ನಮ್ಮನ್ನು ಪ್ರಶ್ನೆ ಮಾಡುವುದೇನೂ ಆಶ್ರವಲ್ಲ ! ಏಕೆಂದರೆ, ಈತನು ಕೃಷ್ಣನನ್ನು ತನ್ನ ಮ ಗನನ್ನಾಗಿಯೇ ಭ್ರವಿಸಿರುವನು. ಅತಿಪರಿಚಯವು ಅನಾದರಕ್ಕೆ ಕಾರಣವೆಂಬುದನ್ನು ನೀವು ಕೇಳಿಲ್ಲವೆ? ಮನುಷ್ಯರಿಗೆ ಯಾವಾಗಲೂ ತಮ್ಮ ಸಮೀಪದಲ್ಲಿಯೇ ಇರತಕ್ಕೆ ವಸ್ತುಗಳಲ್ಲಿ ಅನಾದರವು ಹುಟ್ಟುವುದು ಸಹ ಜವೇ! ಪರಮಪಾವನವಾದ ಗಂಗಾತೀರದಲ್ಲಿ ವಾಸಮಾಡತಕ್ಕವರು,ತಮ್ಮ ಶುದ್ದಿಗಾಗಿ ಮತ್ತೊಂದು ಪುಣ್ಯ ತೀರ್ಥವನ್ನು ಹುಡುಕುತ್ತ ಹೋಗುವರ ಲ್ಲವೆ ? ಈ ವಸುದೇವನ ಸ್ಥಿತಿಯೂ ಹಾಗೆಯೇ ಇರುವುದು, ಇವನ ಪುತ್ರನೆನಿಸಿದ ಶ್ರೀಕೃಷ್ಣನಾದರೋ, ತಾನೇ ಜ್ಞಾನಸ್ವರೂಪನಾಗಿರು ವನು, ಅವನ ಜ್ಞಾನವು ಸಾಮಾನ್ಯಜೀವರ ಜ್ಞಾನದಂತೆ ಕಾಲದಿಂದಾ ಗಲಿ, ಪ್ರಾಪಂಚಿಕಗಳಾದ : ಉತ್ಪತ್ತಿವಿನಾಶಾದಿವಿಕಾರಗಳಿಂದಾಗಲಿ, ತನ್ನಿಂದ ತಾನಾಗಲಿ, ಮತ್ತೊಬ್ಬರಿಂದಾಗಲಿ, ಸತ್ಯಾದಿಗುಣಗಳಿಂದಾಗಲಿ, ಬೇರೆ ಯಾವವಿಧದಿಂದಾಗಲಿ ನಶಿಸಲಾರದು, ಆ ಕೃಷ್ಣನು ದೇಹಕೇಶ ದಿಂದಾಗಲಿ, ಪುಣ್ಯಪಾಪಕರ್ಮಗಳಿಂದಾಗಲಿ, ಅವುಗಳ ಫಲರೂಪವಾದ ಸುಖದುಃಖಗಳಿಂದಾಗಲಿ, ಸತ್ಯಾದಿಗುಣಗಳ ಮೇಲುಮೇಲಿನ ಪ್ರವಾಹದಿಂ ದಲಾಗಲಿ,ತನ್ನ ಮಹಿಮೆ ಯಲ್ಲಿ ಕುಂದತಕ್ಕವನಲ್ಲ. ಮತ್ತು ಆತನು ಸರಸ್ವತಂತ್ರನು! ಅದ್ವಿತೀಯನು, ಅಂತವನನ್ನು , ಅಜ್ಞನಾದವನು,ತನ್ನಂತೆ ಯೇ ಪ್ರಾಣೇಂದ್ರಿಯಾದಿಗಳಿಂದ ಕೂಡಿದವನನ್ನಾಗಿ ಭ್ರಮಿಸುವರು. ಸೂರ್ನು ಯಾವಾಗಲೂ ತನ್ನ ಪ್ರಕಾಶಕ್ಕೆ ಕಂದುಕುಂದಿಲ್ಲದೆ ಬೆಳಗುತಿದ್ದ ರೂ, ಮಂಜು, ಮೆ'ಫು, ರಾಹು ಮೊದಲಾದುವುಗಳು ಅಡ್ಡಬಂದಾಗ, ಅವು ಗಳಿಂದ ಆ ಸೂರಿನ ಕಾಂತಿಗೇ ಕುಂದಕವುಂಟಾದಂತೆ ಭಾವಿಸುವುದು ಹೇಗೆ ಅಜ್ಞತೆಯೆನಿಸುವುದೋ, ಹಾಗೆಯೇ ಆಭಗವಂತನ ಮಹಿಮೆಗೆ ಈ ಮನುಷ್ಯ ನವನಗಳಿಂದ ಕುಂದುಂಟಾದಂತೆ ಭಾವಿಸುವುದು! ಮಢವು?” ಎಂದನು. ಆಗ ಮಹರ್ಷಿಗಳು ವಸುದೇವನನ್ನು ಕರೆದು, ಸಮಸ್ತರಾಜರೂ, ಬಲರಾಮ ಕೃಷ್ಟಗೊ ಕೇಳುತ್ತಿರುವಹಾಗೆಯೇ ಹೀಗೆಂದು ಹೇಳುವರು. <<ಓ ಯದೂ