ಪುಟ:ಶ್ರೀಮದ್ಭಾಗವತವು ಪ್ರಥಮ ದ್ವಿತೀಯ ಸ್ಕಂಧಗಳು.djvu/೧೦೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಶ್ರೀಮದ್ಭಾಗವತವು, [ಅಧ್ಯಾ. ೪. ನು, ಭಾರತವೆಂಬ ಬೇರೆ ಹೆಸರಿನಿಂದ ವೇದಾರ್ಥಗಳನ್ನೂ ವಿಶದೀಕರಿಸಿ ದೆನು. ಇದರಿಂದ,ಶೂದ್ರಾದಿಗಳೂಕೂಡ ತಮತಮಗನುರೂಪವಾದ ಧ ರ್ಮಗಳನ್ನು ತಿಳಿದುಕೊಳ್ಳುವುದಕ್ಕೆ ಅವಕಾಶವನ್ನುಂಟುಮಾಡಿದೆನು. ಅಯ್ಯೋ ! ಇಷ್ಟಾದರೂ ನನ್ನ ದೇಹದಲ್ಲಿರುವ ಆತ್ಮವು, ಸಮಾಧಾನವಿ ಲ್ಲದೆ ತನಗೆ ತಾನೇ ಕಳವಳಿಸುತ್ತಿರುವುದು! ಬ್ರಹ್ಮ ವರ್ಚಸ್ಸಿನಿಂದ ಶುದ್ಧವಾಗಿ ದ್ದರೂ ಏನೋ ಒಂದುವಿಧವಾದ ನ್ಯೂನತೆಯಿದ್ದಂತೆ ಕುದಿಯುತ್ತಿ ರುವುದಲ್ಲಾ ! ಇದಕ್ಕೆ ಕಾರಣವೇನು? ಆಹಾ ! ಇದೇ ಕಾರಣವಿರಬಹುದು. ಅಂತರಾತ್ಮನಾದ ಭಗವಂತನನ್ನು ತೃಪ್ತಿಪಡಿಸಿದ ಮೇಲಲ್ಲವೇ ತದಧೀನವಾದ ಮನಸ್ಸಿಗೆ ಆನಂದವು ಪ್ರಾಪ್ತವಾಗುವುದು ! ಆ ಭಗವಂತನೂಕೂಡ ತನ್ನ ಭಕ್ತರು ಸಂತುಷ್ಟರಾಗಿದ್ದ ಪಕ್ಷದಲ್ಲಿಯೇ ಸಂತೋಷವನ್ನು ಹೊಂದುವನು. ಭಗವದ್ಭಕ್ತರಿಗೆ ಸಂತೋಷಕರವಾದ ಭಾಗವತಧರ್ಮಗಳನ್ನು ವಿವರಿಸಿದ ಕ್ಷದಲ್ಲಿ ಅವರು ಸಂತುಷ್ಟರಾಗುವರು. ಅದರಿಂದ ಭಗವಂತನೂ ಸಂತು ಏನಾಗುವನು. ಆ ಧರ್ಮಗಳನ್ನು ಇದುವರೆಗೆ ನಾನು ಸಂಪೂರ್ಣವಾಗಿ ವಿವರಿಸದೆ ಹೋದುದರಿಂದಲೇ ನನ್ನ ಮನಸಿಗ್ನ 'ಶಾಂತಿಯಿಲ್ಲದಿರುವುದು.ಇದೇ ಧರ್ಮಗಳನ್ನು ನಾನು ಭಾರತದಲ್ಲಿ ಸೂಕ್ಷ್ಮವಾಗಿ ವಿವರಿಸಿದ್ದರೂ, ವಿಶೇಷವಾ ಗಿ ವಿಸ್ತರಿಸದೆ ಹೋದನು. ಆ ಕಾರ್ಯವನ್ನು ಪೂರ್ತಿಗೊಳಿಸಿದಹೊರತು ನನ್ನ ಮನಸ್ಸಿಗೆ ಶಾಂತಿಯುಂಟಾಗದು. ಇದಕ್ಕೇನುಮಾಡಲಿ”ಎಂದು ಚಿಂತಿಸುತ್ತ ಕುಳಿತಿದ್ದನು. ಹೀಗೆ ಆ ವ್ಯಾಸಮಹಾಮುನಿಯು ತನ್ನನ್ನು ಕೃತಕೃತ್ಯನಲ್ಲದಂ ತೆ ಭಾವಿಸಿ ದುಃಖಿಸುತ್ತಿರುವ ಸಮಯದಲ್ಲಿಯೇ ನಾರದಮಹರ್ಷಿಯು ಆ ಪುಣ್ಯಾಶ್ರಮಸ್ಥಳಕ್ಕೆ ಬಂದನು. ಸಮಸ್ತ ದೇವತೆಗಳಿಂದಲೂ ಪೂಜಿತನಾದ ನಾರದನು ಬಂದುದನ್ನು ನೋಡಿ, ವ್ಯಾಸಮುನಿಯು ಸಂಭ್ರಮದಿಂದೆದ್ದು ಬಂದು, ವಿಧ್ಯುಕ್ತವಾಗಿ ಅವನನ್ನು ಸತ್ಕರಿಸಿದನು. ಇದು ನಾಲ್ಕನೆಯ ಆಧ್ಯಾಯವು