ಪುಟ:ಶ್ರೀಮದ್ಭಾಗವತವು ಪ್ರಥಮ ದ್ವಿತೀಯ ಸ್ಕಂಧಗಳು.djvu/೧೦೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅಧ್ಯಾ. ೫.] ಪ್ರಥಮಸ್ಕಂಧವು. w+ ನಾರದನು ತನ್ನ ಪೂರ್ವಜನ್ಮಚರಿತ್ರವನ್ನು ತಿಳಿಸಿದುದು +w ಎಲೈ ವ್ಯಾಸಮುನೀಂದ್ರಾ ! ನಾನು ನನ್ನ ಪೂರ್ವಜನ್ಮದಲ್ಲಿ ವೇ ದಾಧ್ಯಯನಶೀಲರಾದ ಬ್ರಾಹ್ಮಣರ ಮನೆಯಲ್ಲಿ ಕೆಲಸಮಾಡುತಿದ್ದ ಒಬ್ಬ ವಾಸಿಯ ಪುತ್ರನಾಗಿ ಹುಟ್ಟಿದೆನು.ನಾನು ಅಲ್ಲಿಯೇ ಬೆಳೆಯುತ್ತಿರುವಾಗ ಒ ಮೈ ಮಳೆಗಾಲವು ಸಮೀಪಿಸಿತು.ಕೆಲವುಸನ್ಯಾಸಿಗಳು ಚಾತುರ್ಮಾಸ್ಯದೀಕ್ಷೆ ಯನ್ನು ವಹಿಸಿ ಅಲ್ಲಿಂದಾಚೆಗೆ ನಾಲ್ಕು ತಿಂಗಳವರೆಗೆ ಆ ವೇದವಾದಿಗಳ ಮನೆ ಯಲ್ಲಿಯೇ ಇರಬೇಕೆಂದೆಣಿಸಿ ಅಲ್ಲಿಗೆ ಬಂದು ಸೇರಿದರು. ಆಗ ನಾನು ಇನ್ನೂ ಬಹಳಬಲನಾಗಿದ್ದನು.ವೇದವಾದಿಗಳು ನನ್ನನ್ನು ಆ ಸನ್ಯಾಸಿಗಳಿಗೆ ಶುಶ್ರ ಷೆಯನ್ನು ಮಾಡವುದಕ್ಕಾಗಿ ನೇಮಿಸಿದರು.ಅಥಿತಿಗಳಾಗಿ ಬಂದ ಆ ಸನ್ಯಾಸಿ ಗಳಾದರೋ ಎಲ್ಲರನ್ನೂ ಸಮದೃಷ್ಟಿಯಿಂದ ನೋಡತಕ್ಕೆ ಸ್ವಭಾವವುಳ್ಳವ ರು.ಆದುದರಿಂದ ಅವರು ನನ್ನ ನಡತೆಯನ್ನು ನೋಡಿ ನನ್ನ ಪ್ರೀತಿಯನ್ನು ತೋ ರಿಸುತಿದ್ದರು. ನಾನು ಇನ್ನೂ ಬಾಲ್ಯವಯಸ್ಸಿನವನಾದರೂ ಮನಶ್ಚಾಪಲ್ಯಗ ಳೆಲ್ಲವನ್ನೂ ಬಿಟ್ಟು ಜಿತೇಂದ್ರಿಯನಾಗಿ, ಆಟಪಾಟಗಳಲ್ಲಿಯೂ ಅಕ್ಕರೆಯಿಲ್ಲದೆ, ಹೆಚ್ಚು ಮಾತುಗಳಿಗೆ ಹೋಗದೆ, ಅವರು ಹೇಳಿದ ಕಾರ್ಯಗಳನ್ನು ನಡೆಸುತ ಬಂದೆನು.ಅವರಿಗೆ ನನ್ನ ಕ್ಲಿಪೂರ್ಣಾನುಗ್ರಹವುಂಟಾಯಿತು. ನನ್ನನ್ನು ಬಹಳಪ್ರೀ ತಿಯಿಂದ ಕಾಣುತಿದ್ದರು. ಅವರೆಲ್ಲರೂ ಭೋಜನಮಾಡಿದಮೇಲೆ ಮಿಕ್ಕುದ ನ್ನು ನನಗೆ ಕೊಡುತಿದ್ದರು.ಅದನ್ನೆ ನಾನು ಎಷ್ಟೇ ಪ್ರೀತಿ ಯಿಂದ ಸ್ವೀಕ ರಿಸಿ, ಒಂದೇಆವರ್ತಿಭೋಜನವನ್ನು ಮಾಡುತ್ತ ಅವರ ಶುಶೂಷೆಯನ್ನು ಮಾ ಡುತಿದ್ದೆನು. ಆಮಹಾತ್ಮರು ತಿಂದುಳಿಸಿದ ಉಚ್ಚಿಷ್ಯಭೋಜನದಿಂದಲೇ ನನ್ನ ಪಾಪಗಳೆಲ್ಲವೂ ನೀಗಿದುವು. ನನ್ನ ಮನಸ್ಸು ಶುದ್ಧವಾಗುತ್ತ ಬಂದಿತು.ಭಗವ ದೃಕ್ಕಿಯೊಂದರಲ್ಲಿಯೇ ನನ್ನ ಮನಸ್ಸಿಗೆ ಅಭಿರುಚಿ ಹೆಚ್ಚು ತಬಂದಿತು. ಇದಲ್ಲ ದೆ ಆ ಯೋಗಿಗಳು ಪ್ರತಿದಿನವೂ ಭಗವಂತನಾದ ಶ್ರೀಕೃಷ್ಣನ ಕಥೆಗಳನ್ನು ಗಾನಮಾಡುವಾಗ ನಾನೂ ಶ್ರದ್ಧೆಯಿಂದ ಕೇಳುತಿದ್ದನು. ಆ ಕಥೆಗಳೆಲ್ಲವೂ ನನಗೆ ಆ ಮಹಾತ್ಮರ ಅನುಗ್ರಹಬಲದಿಂದಲೇ ಕರ್ಣರಸಾಯನರೂಪಗಳಾಗಿ ಭಗವಂತನಲ್ಲಿ ಅನುರಾಗವನ್ನು ಹೆಚ್ಚಿಸುತ್ತ ಬಂದಿತು. ಈ ಅಭಿರುಚಿ ಹೆಚ್ಚಿದ