ಪುಟ:ಶ್ರೀಮದ್ಭಾಗವತವು ಪ್ರಥಮ ದ್ವಿತೀಯ ಸ್ಕಂಧಗಳು.djvu/೧೦೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಶ್ರೀಮದ್ಭಾಗವತವು. [ಅಧ್ಯಾ. ೫, ಮೇಲೆ ನನ್ನ ಬುದ್ಧಿಯು ಆ ಪರಮಾತ್ಮನೊಬ್ಬನಲ್ಲಿಯೇ ಸ್ಥಿರವಾಗಿ ನೆಲೆಸಿತು. ಇದರಮೇಲೆ ಜೀವಸ್ವರೂಪವೇನೆಂಬುದು ವ್ಯಕ್ತವಾಯಿತು. ಚಕ್ರದಬಳೆಗೆ ಅರಿ, ಅದಕ್ಕೆನಾಭಿಯೂ ಆಧಾರವಾದಂತೆ, ಕಾಠ್ಯಕಾರಣಾತ್ಮಕವಾದಜಗ ತಿಗೆ ಈ ಜೀವಾತ್ಮನೂ ಆ ಜೀವಾತ್ಮನಿಗೆ ಪರಬ್ರಹ್ಮನೂ ಆಧಾರವಾಗಿರುವು ದೆಂಬ ಜ್ಞಾನವು ಹುಟ್ಟಿತು. ಹೀಗೆ ಕಾರ್ ಕಾರಣಾತ್ಮಕವಾದ ಜಗತ್ತನ್ನು ನಾನು ಧರಿಸಿರುವುದೂ ನನ್ನನ್ನು ಸಂಬಂಧಿಸಿದ ಪ್ರಕೃತಿಯಿಂದುಂಟಾದು ದೇಹೊರತು ಸ್ವತಸ್ಸಿದ್ದವಲ್ಲವೆಂಬುದನ್ನೂ ಕಂಡುಕೊಂಡೆನು. ಹೀಗೆ ವ ರ್ಷಾಕಾಲ ಶರತ್ಕಾಲಗಳೆಂಬ ನಾಲ್ಕು ತಿಂಗಳು ಕಳೆಯುವವರೆಗೂನಾನು ಪ್ರ ತಿದಿನವೂ ಹರಿಕೀರ್ತನೆಯನ್ನು ಕೇಳುತ್ತಿರಲು, ಆಗ ನನ್ನಲ್ಲಿ ರಜಸ್ತಮೋಗುಣ ಗಳನ್ನು ನೀಗಿಸತಕ್ಕ ಭಕ್ತಿಯು ಸ್ಥಿರವಾಗಿ ನೆಲೆಗೊಂಡಿತು ನಾನು ಕೇವಲಬಾ ಲನಾಗಿದ್ದರೂ, ಈಭಕ್ತಿಯು ಹಟ್ಟಿದಮೇಲೆ ಬಹಳವಿನೀತನಾಗಿಯೂ, ಯುಳ್ಳವನಾಗಿಯೂ,ಜೀತೇಂದ್ರಿಯನಾಗಿಯೂ, ಆ ಸನ್ಯಾಸಿಗಳನ್ನನುವರ್ತಿ ಸುತಿದ್ದೆನು.ನನ್ನ ಪಾಪಗಳೆಲ್ಲವೂಸಿಗಿದುವು.ಆಯೋಗಿಗಳು ದಯಾಸ್ವಭಾವ ವುಳ್ಳವರಾದುದರಿಂದ,ಚಾತುರಾಸ್ಯವನ್ನು ಮುಗಿಸಿಕೊಂಡು ಆಸ್ಥಳವನ್ನು ಬಿ ಟ್ಟು ಹೋಗುವಾಗ,ಅನುಗ್ರಹಪೂರ್ವಕವಾಗಿ ನನ್ನನ್ನು ಕರೆದು, ಭಗವಂತನು ತಾನಾಗಿಯೇ ಉಪದೇಶಿಸಿದಅತಿರಹಸ್ಯವಾದ ಜ್ಞಾನವನ್ನು ನನಗೂಉಪದೇ ಶಿಸಿದರು. * ಅಜ್ಞಾನದಿಂದ ನಾನು ಸೃಷ್ಟಿಕರ್ತನಾದ ಭಗವಂತನಿಗುಣ ತ್ಮಕವಾದ ಪ್ರಕೃತಿಮಹಿಮೆಯನ್ನು ತಿಳಿದುಕೊಂಡೆನು ಎಲೈ ಮಹರ್ಷಿಯೆ! ಈ ವಿಧವಾದ ಜ್ಞಾನದಿಂದಲೇ ಜ್ಞಾನಿಗಳು ಭಗವಾನ್ನಿಧ್ಯವನ್ನು ಹೋಂ ದುವರು. ನನಗೆ ಆ ವಿಧವಾದ ಭಕ್ತಿಯು ಹುಟ್ಟುವುದಕ್ಕೆ ಹರಿಕೀರ್ತನತ್ರವ ಇವೂ,ಆ ಮಹಾತ್ಮರ ಸೇವೆಯೂ ಕಾರಣಗಳಾದುವು. ಭಗವಂತನ ಗುಣಗಳ ನ್ನು ಕೇಳುವುದರಿಂದ ಭಕ್ತಿಯ ಹುಟ್ಟುವುದರಲ್ಲಿ ಯಾವ ಸಂದೇಹವೂ ಇಲ್ಲ.

  • ಇಲ್ಲಿ ಅರ್ಥಪಂಚಕಜ್ಞಾನವೇ ಅವರಿಂದುಪದಿಷ್ಟವಾದ ಜ್ಞಾನವೆಂದು ಗ್ರಾ ಹವು. ಮುಮುಕ್ಷುಗಳು ತಿಳಿಯಬೇಕಾದ ಸ್ವಸ್ವರೂಪ, ಪರಸ್ಪರೂಪ, ಉಪಾಯ ಸ್ವರೂಪ, ವಿರೋಧಿಸ್ವರೂಪ, ಫಲಸ್ವರೂಪವೆಂಬಿವುಗಳ ಜ್ಞಾನವೇ ಅರ್ಥಪಂಚಕ ಜ್ಞಾನವ.