ಪುಟ:ಶ್ರೀಮದ್ಭಾಗವತವು ಪ್ರಥಮ ದ್ವಿತೀಯ ಸ್ಕಂಧಗಳು.djvu/೧೧೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೧೦೩ ಶ್ರೀಮದ್ಭಾಗವತವು [ಅಧ್ಯಾ. ೭, ಗಳೆಲ್ಲವನ್ನೂ ಆ ಗ್ರಂಥದಲ್ಲಿ ಕ್ರಮವಾಗಿ ವಿವರಿಸಿ, ಮೊದಲು ತನ್ನ ಕು ಮಾರನಾದ ಶುಕಮುನಿಗೆ ಉಪದೇಶಿಸಿದನು. ಆ ಶುಕಮುನಿಯಾದರೆ ಸಾಂಸಾರಿಕಧರ್ಮವನ್ನು ವಿಶೇಷವಾಗಿ ಬಿಟ್ಟವನು. ಸ್ಥಿರಮನಸ್ಸುಳ್ಳವನು. ಯಾವಾಗಲೂ ಬ್ರಹ್ಮಧ್ಯಾನದಲ್ಲಿಯೇ ನಿರತನಾದವನು” ಎಂದನು. ಇದನ್ನು ಕೇಳಿ ತಿರುಗಿ ಶೌನಕನು 'ಎಲೈ ಮಹಾತ್ಮನಾದ ಸೂತನೆ ! ಆ ಕುಕಮುನಿ ಯು ಯಾವಾಗಲೂ ನಿವೃತ್ತಿ ಮಾರ್ಗದಲ್ಲಿ ನೆಲೆಗೊಂಡವನು, ಶ್ರವ ಣಾಧ್ಯಯನಗಳೊಂದರಲ್ಲಿಯೂ ಆದರವಿಲ್ಲದವನು. ಯಾವಾಗಲೂ ಪರ ಬ್ರಹ್ಮವೊಂದರಲ್ಲಿಯೇ ನಟ್ಟ ಮನಸ್ಸುಳ್ಳವನು. ಇಂತಹ ಮಹಾತ್ಮನಿಗೆ ಭಗ ವದ್ಯಾನಕ್ಕೆ ಪ್ರತಿಬಂಧಕವಾದ ಈ ಭಾಗವತಸಂಹಿತೆಯನ್ನು ಅಭ್ಯಸಿಸಬೇ ಕೆಂಬ ಉದ್ದೇಶವು ಹೇಗೆ ಹುಟ್ಟಿತು?"ಎಂದನು. ಅದಕ್ಕಾಸೂತನು ಇನ್ನಷ್ಟು ಈ ಭಾಗವತವೆಂಬುದೂಕೂಡ ಭಗವಂತನ ಗುಣವರ್ಣ ನವೇ ಆದುದyಂದ ಭಗವದ್ಯಾನಕ್ಕೆ ಸಿರೋಧಕವಾದುದ್ದಲ್ಲ ! ನೀನು ಹೇಳಿದಂತೆ ಸ ಾತ್ಮಸಿ ಷ್ಟರಾದ ಯೋಗಿಗಳು, ೮ ಕಿಕಾರ್ಥವುಳ್ಳ ಪ್ರಬಂಧದಲ್ಲಿ ”” ಪಕ್ಷೆಯಿಲ್ಲದ ರುವುದೇನೋ ನಿಜವು ! ಹಾಗಿದ್ದರೂ ಅವರು ಭಗವಂತನಲ್ಲಿ ಅನನ್ಯ ಯೋಜನವಾದ ಭಕ್ತಿಯುಳ್ಳವರಾಗಿರುವರು : ಭಕ್ತಿಗೆ ವಿಷಯನಾದ ವನು ಕಲ್ಯಾಣಗುಣಪರಿಪೂರ್ಣನಾದ ಆ ಶ್ರೀಹರಿಯಲ್ಲವೆ ? ವಾದುದರಿಂದ ಅವನ ಗುಣವರ್ಣನಗಳನ್ನೊಳಕೊಂಡ ಗ್ರಂಥಗಳನ್ನು ಕೇಳುವುದರಲ್ಲಿ ಅವ ರಿಗೆ ಆಸಕ್ತಿಯಿದ್ದೇ ಇರಬೇಕು. ಅದಕ್ಕಾಗಿಯೇ ಶುಕನು ಪರಮಾತ್ಮ ಧ್ಯಾನ ವೊಂದರಲ್ಲಿಯೇ ನೆಲಸಿದವನಾಗಿದ್ದರೂ, ಆ ಹರಿಯ ಗುಣಗಳಲ್ಲಿ ಪರವಶವಾ ದ ಬುದ್ಧಿಯುಳ್ಳವನಾದುದರಿಂದಲೂ, ವಿಷ್ಣುಭಕ್ತರಲ್ಲಿ ವಿಶೇಷಪ್ರೇಮವುಳ್ಳ ವನಾದುದರಿಂದಲೂ, ಭಗವದ್ದು ಣಾನುವರ್ಣನರೂಪವಾದ ಭಾಗವತವನ್ನು ಪಠಿಸಿದನು. ತಾನೇ ಅದನ್ನು ಭಾಗವತೋತ್ತಮನಾದ ಪರೀಕ್ಷಿದ್ರಾಜನಿಗೂ ಉಪದೇಶಿಸಿದನು. ಎಲೈ ಮಹರ್ಷಿಗಳೆ ! ಇನ್ನು ಆ ಪರೀಕ್ಷಿದ್ರಾಜನ ಜನ್ಮ ಕರ್ಮಾದಿಗಳನ್ನು ಹೇಳುವೆನು ಕೇಳಿರಿ ! ಆ ರಾಜನ ಚರಿತ್ರಕ್ಕೆ ಉಪೋದ್ಯಾ ತವಾಗಿ ಮೊದಲು ಪಾಂಡವರ ಚರಿತ್ರವನ್ನು ತಿಳಿಸಬೇಕಾಗಿರುವುದು. ಆ ಪಾಂಡವರ ಚರಿತ್ರವೂಕೂಡ ಶ್ರೀಕೃಷ್ಣಚರಿತ್ರದೊಡಗೂಡಿರುವುದರಿಂದ,