ಪುಟ:ಶ್ರೀಮದ್ಭಾಗವತವು ಪ್ರಥಮ ದ್ವಿತೀಯ ಸ್ಕಂಧಗಳು.djvu/೧೩೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅಧ್ಯಾ. ೮. | ಪ್ರಥಮಸ್ಕಂಧವು. ೧೧೭ ಯಾರಿಗೂ ಸಾಧ್ಯವಲ್ಲ. ಈ ಕಾರಕ್ಕೆ ನೀನೊಬ್ಬನೇ ಸಮರ್ಥನು!ಆದುದರಿಂದ ಎಲೈ ಲೋಕನಾಥನೆ! ನನ್ನನ್ನು ರಕ್ಷಿಸು ರಕ್ಷಿಸು! ಇದೋ ಅಗ್ನಿ ಜ್ವಾಲೆಯಿಂ ದುರಿಯುತ್ತಿರುವ ಉಕ್ಕಿನ ಬಾಣವೊಂದು, ನನಗಿದಿರಾಗಿ ಬರುತ್ತಿರುವುದು. ಕೃಷ್ಣಾ ! ಈ ಬಾಣದಿಂದ ನಾನು ಸಾಯುವೆನೆಂಬ ಭಯವು ನನಗಿಲ್ಲ. ಈಬಾ ಣವು ನನ್ನನ್ನು ಕೊಂದರೂ ಚಿಂತೆಯಿಲ್ಲ! ನನ್ನ ಗರ್ಭದಲ್ಲಿರುವ ಶಿಶುವಿಗೆ ಆ ಪಾಯವಿಲ್ಲದಂತೆ ರಕ್ಷಿಸುವ ಭಾರವು ನಿನ್ನದು !” ಎಂದು ಕಣ್ಣೀರು ಬಿಟ್ಟು ಮೊರೆಯಿಡುತಿದ್ದಳು!ಇದನ್ನು ಕೇಳಿ 'ಭಕ್ತವತ್ಸಲನಾದ ಶ್ರೀಕೃಷ್ಣನು ತನ್ನಲ್ಲಿ ತಾನು,ಆಹಾ ! ಆ ಅಶ್ವತ್ಥಾಮನು ಪಾಂಡವಕುಲವನ್ನು ನಿರ್ಮೂ ಲಮಾಡಬೇಕೆಂದು ಬ್ರಹ್ಮಾಸ್ತ್ರವನ್ನು ಪ್ರಯೋಗಿಸಿರುವನು.” ಎಂದು ನಿಶ್ಚಯಿಸಿಕೊಂಡನು. ಇಷ್ಟರಲ್ಲಿ ಇತ್ತಲಾಗಿ ಪಾಂಡವರು ತಮಗಿದಿ ರಾಗಿ ಐದುಬಾಣಗಳು ಜಾಜ್ವಲ್ಯಮಾನವಾಗಿ ಬರುತ್ತಿರುವುದನ್ನು ನೋಡಿ, ಅವುಗಳನ್ನ ಡಗಿಸುವುದಕ್ಕಾಗಿ ಪ್ರತ್ಯಗಳನ್ನು ಪ್ರಯೋಗಿಸುತ್ತಬಂದರು. ಇವರ ಪ್ರಯತ್ನ ವೊಂದೂ ಸಾಗದೆ ಹೋಯಿತು. ಆಗ ಶ್ರೀಕೃಷ್ಣನು ಬೇರೆ ರಕ್ಷಕರಿಲ್ಲದೆ ತನ್ನನ್ನೇ ನಂಬಿರುವ ಪಾಂಡವರ ದುಃಖವನ್ನು ನೋಡಿ, ತನ್ನ ಚಕ್ರಾಯುಧದಿಂದ ಆ ಅಸ್ತ್ರಗಳನ್ನು ತಡೆದು ಪಾಂಡವರನ್ನು ರಕ್ಷಿಸಿದನು. ಅದರಿಂದಾಚೆಗೆ ಆ ಅಸ್ತ್ರಜ್ವಾಲೆಯು ಉತ್ತರೆಯ ಗರ್ಭವನ್ನು ವ್ಯಾಪಿಸಿತು. ಸರಾಂತರಾಮಿಯಾಗಿಯೂ, ಸಮಸ್ತ ಜಗತ್ತಿಗೂ ಧಾರಕನಾಗಿಯೂ, ಸೂ ಕ್ಷದರ್ಶಿಯಾಗಿಯೂ ಇರುವ ಶ್ರೀಕೃಷ್ಣನು ಈ ಸಂಗತಿಯನ್ನು ತಿಳಿದು, ಕುರುವಂಶಾಭಿವೃಷ್ಟಿಗೆ ಭಂಗವು ಬಾರದಂತೆ ರಕ್ಷಿಸುವುದಕ್ಕಾಗಿ, ಉತ್ತರೆಯ ಗರ್ಭದಲ್ಲಿರುವ ಶಿಶುವು ಬ್ರಹ್ಮಾಸ್ತ್ರದಿಂದ ಅಪಾಯಕ್ಕೆ ಸಿಕ್ಕದಂತೆ, ತನ್ನ ಮಾ ಯೆಯಿಂದ ಅದನ್ನಾವರಿಸಿಕೊಂಡನು. ತನ್ನ ಸುದರ್ಶನಚಕ್ರದಿಂದ ಆ ಬ್ರಹ್ಮಾಸದ ಶಕ್ತಿಯನ್ನಡಗಿಸುತ್ತ ಬಂದನು ಎಲೈ ಶೌನಕಾದಿಗಳೇ ! ವಾಸ್ತವವನ್ನು ವಿಚಾರಿಸಿದರೆ,ಬ್ರಹ್ಮಶಿರೋನಾಮಕವಾದ ಆ ಮಹಾಸ್ತ್ರಕ್ಕೆ ಯಾವ ವಿಧದಿಂದಲೂ ಪ್ರತೀಕಾರವಿಲ್ಲ. ಬೇರೆ ಯಾವ ಉಪಾಯದಿಂದ ಲೂ ಅದರ ಶಕ್ತಿಯನ್ನಡಗಿಸುವುದು ಸಾಧ್ಯವಲ್ಲ. ಹಾಗಿದ್ದರೂ ವಿಷ್ಣುವೇ ಜೆರೂಪವಾದ ಚಕ್ರಾಯುಧದಮುಂದೆಮಾತ್ರ,ಅದರ ಶಕ್ತಿಯು ಸಾಗದೆ