ಪುಟ:ಶ್ರೀಮದ್ಭಾಗವತವು ಪ್ರಥಮ ದ್ವಿತೀಯ ಸ್ಕಂಧಗಳು.djvu/೧೩೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೧೧೮ ಶ್ರೀಮದ್ಭಾಗವತವು [ಅಧ್ಯಾ, ೮, ಹೋಯಿತು. ಅಪ್ರತಿಹತವಾದ ಅಬ್ರಹ್ಮಾಸದ ಶಕ್ತಿಯನ್ನಡಗಿಸುವುದಕ್ಕೆ ವಿಷ್ಣು ಚಕ್ರವುಮಾತ್ರ ಹೇಗೆ ಸಮರ್ಥವಾಯಿತೆಂದು ನೀವು ಆಶ್ಚಯ್ಯಪಡಬೇ ಕಾದುದಿಲ್ಲ! ವಿಷ್ಣುವಿನ ಮಹಿಮೆಯು ಸಾಮಾನ್ಯವಾದುದಲ್ಲ. ಆತನು ಸಯ್ಯಾ ಶಲ್ಯಮಯನು! ಆ ಭಗವಂತನ ಕರ್ಮಾಥೀನವಾದ ಶರೀರವಿಲ್ಲದವನಾಗಿ, ತನ್ನ ಆಶ್ಚರಶಕ್ತಿಯಿಂದಲೇ ಚಿದಚಿದಾತ್ಮಕವಾದ ಈ ಪ್ರಪಂಚವೆಲ್ಲವನ್ನೂ ಸೃಷ್ಟಿಸುವನು. ತಾನೇ ಅದನ್ನು ರಕ್ಷಿಸುವನು!ತಾನೇ ಅದನ್ನು ನಾಶಹೊಂದಿ ಸುವನು. ಈ ಮೂರುಕಾರಗಳನ್ನೂ ಆತನು ತನಗಧೀನವಾಗಿಯೇ ಇಟ್ಟು ಕೊಂಡಿರುವುದರಿಂದ, ಅವನಿಗೆ ಇದೊಂದು ಘನವಾದ ಕಾರವಲ್ಲ. ಈ ವಿ ಚಾರವು ಹಾಗಿರಲಿ ! ಇತ್ತಲಾಗಿ ಕುಂತೀದೇವಿಯು ಬ್ರಹ್ಮಾಸ್ತಬಾಧೆ ಯಿಂದ ತಪ್ಪಿಸಿಕೊಂಡ ತನ್ನ ಪುತ್ರರೊಡನೆಯೂ, ದೌಪದಿಯೊಡನೆಯೂ ಸೇರಿಬಂದು, ಪ್ರಯಾಣಾಭಿಮುಖನಾದ ಶ್ರೀಕೃಷ್ಣನನ್ನು ನೋಡಿ ವಿಜ್ಞಾಪಿ ಸುವಳು, “ಎಲೈ ದೇವದೇವನೆ! ನೀನು ಸಕಲಜಗತ್ಕಾರಣನು!ಪ್ರಕೃತಿಗಿಂತ ಲೂ ಬೇರೆಯಾದವನು ! ಸತ್ವಲೋಕೇಶ್ವರನು ! ಸಮಸ್ತಭೂತಗಳ ಹೊರಗೂ, ಒಳಗೂ ವರ್ತಿಸತಕ್ಕವನಾದರೂ, ಪ್ರಕೃತಿಯಂತೆ ದೃಷ್ಟಿಗೋ ಚರನಾಗುವವನಲ್ಲ. ದೇವಾ! ನೀನು ಮಾಯೆಯಂಬ ತೆರೆಯಲ್ಲಿ ಮರೆಸಿಕೊಂ ಡವನಾದುದರಿಂದ, ಉಪಾಸಕರಲ್ಲದವರ ಇಂದ್ರಿಯಗಳಿಗೆ ಕಾಣುವವನಲ್ಲ. ವೇಷಧಾರಿಯಾದ ನಟನ ನಿಜರೂಪವನ್ನು ತಿಳಿಯುವುದು ಮಂದಬುದ್ಧಿ ಯುಳ್ಳವರಿಗೆ ಹೇಗೆ ಸಾಧ್ಯವಲ್ಲವೋ,ಹಾಗೆ ಯೋಗಸಿದ್ಧಿಯಿಲ್ಲದವರ ಕಣ್ಣಿಗೆ ನೀನು ಕಾಣಿಸಲಾರೆ, ಕೃಷ್ಣಾ ! ಅಂತಹ ಪರಾತ್ಪರನಾದ ನಿನ್ನ ಪಾದಗಳಿಗೆ ನಮಸ್ಕಾರವು. ಎಲೈ ದೇವದೇವನೆ! ಯಾವಾಗಲೂ ನಿನ್ನ ಸ್ವರೂಪವನ್ನು ಮನನಮಾಡುತ್ತ, ಶುದ್ಧಾತ್ಮರಾಗಿ, ಪರಮಹಂಸರೆನಿಸಿಕೊಂಡ ಮಹರ್ಷಿಗಳ ಭಕ್ತಿಯೋಗಕ್ಕೆ ಮಾತ್ರವೇ ವಿಷಯನಾಗತಕ್ಕ ನಿನ್ನನ್ನು , ಮೂಢಸೀಯರಾ ದ ನಾವು ಹೇಗೆತಾನೇ ತಿಳಿಯಬಲ್ಲೆವು?ನಟನು ಪಾತ್ರಗಳಿಗೆ ತಕ್ಕ ವೇಷಭಾಷೆ ಗಳನ್ನು ತೋರಿಸುವಾಗ, ಆಯಾ ನಾಮರೂಪಗಳಿಂದಲೇ ಹೊರಕ್ಕೆ ಕಾಣು ವಂತೆ, ನೀನೂ ಅವತಾರಗಳನ್ನೆತ್ತಿದಾಗ, ನಿನಗಿರುವ ಕೃಷ್ಣವಾಸುದೇವಾದಿ ನಾಮಗಳನ್ನು ಮಾತ್ರ ನಾವು ತಿಳಿಯಬಲ್ಲೆವು. ಆದುದರಿಂದ ಆ ಹೆಸರು