ಪುಟ:ಶ್ರೀಮದ್ಭಾಗವತವು ಪ್ರಥಮ ದ್ವಿತೀಯ ಸ್ಕಂಧಗಳು.djvu/೧೩೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅಧ್ಯಾ. ೮.] ಪ್ರಥಮಸ್ಕಂಧವು. ೧೨೩ ಕುಂತಿಯು ಮೃದುಮಧುರವಚನಗಳಿಂದ ಸ್ತುತಿಸುವುದನ್ನು ನೋಡಿಕೃಷ್ಣನು ತನ್ನ ಮಾಯೆಯಿಂದ ಅವಳನ್ನು ಮೋಹಗೊಳಿಸುವಂತೆ ಮುಕುಳಗೆಯಿಂದನ ಗುತ್ತ “ಅಮ್ಮಾ! ನಿನ್ನಿಷ್ಟದಂತೆಯೇ ನಡೆಸುವೆನು” ಎಂದು ಹೇಳಿಧರ್ಮರಾಜ ನ ಪ್ರಾರ್ಥನೆಯನ್ನೂ ನಿರಾಕರಿಸಲಾರದೆ, ತನ್ನ ಪ್ರಯಾಣಸನ್ನಾಹವನ್ನು ನಿಲ್ಲಿಸಿ ಹಿಂತಿರುಗಿದನು. ಹಾಗೆಯೇ ಕುಂತೀದೇವಿಯನ್ನೂ, ಸುಭದ್ರೆ ಮೊದ ಲಾದ ಇತರಯರನ್ನೂ ಸಮಾಧಾನಪಡಿಸುತ್ತ, ತಿರುಗಿ ಹಸ್ತಿನಾಪು ಕ್ಕೆ ಪ್ರವೇತಿಸಿದನು. ಇಷ್ಟರಲ್ಲಿ ಧರ್ಮರಾಜನು ತಾನು ಹಿಂದಿನ ಯುದ್ಧದ ಕ್ಲಿ ನಡೆಸಿದ ಬಂಧುವಧಾಗಿ ಬಹಳಚಿಂತಾಕುಲನಾಗಿರುವುದನ್ನು ನೋಡಿ, ವ್ಯಾಸಮಹರ್ಷಿಗಳೂ, ಅದ್ಭುತ ಪ್ರಭಾವವುಳ, ಶ್ರೀಕೃಷ್ಣನೋ, ಎಷೆ ಷೋ ಇತಿಹಾಸಗಳನ್ನು ಹೇಳಿ ತಿಳಿಸಿ, ಆಗಾಗ ಅವನನ್ನು ಸಮಾಧಾನಪಡಿ ಸುತಿದ್ದರು. ಇಷ್ಟಾದರೂಧರ್ಮರಾಜನ ಮನಸ್ಸಿಗೆ ದುಃಖಶಾಂತಿಯುಂಟಾಗ ಲಿಲ್ಲ. ಆಗಾಗ ತನ್ನ ಬಂಧನವನ್ನು ನೆನೆಸಿಕೊಂಡು ಮೋಹಪಾಶದಿಂದ ಪರವಶನಾಗಿ, ಆಜನಬಂದ ಕವಿದ ಮನಸ್ಸುಳ್ಳವನಾಗಿ (ಆಯೋ! ಕೇ ವಲದುರಾತ್ಮನಾದ ನನ್ನ ಆಜ್ಞತೆಯನ್ನೆ ನೆಂದು ಹೇಳಲಿ!ನಾಯಿನರಿಗಳಿಗೆ ಆ ಹಾರಯೋಗ್ಯವಾಗಿ, ಕೇವತುಚ್ಛವಾದ ಈ ಶರೀರಕ್ಕೆ ಸೌಖ್ಯವನ್ನುಂಟು ಮಾಡಬೇಕೆಂಬ ದುರಾಸೆಯಿಂದ, ಎಷೆ ಪ್ರಾಣಿಗಳನ್ನು ಕೊಲ್ಲಿಸಿದೆನು. ಲೋಕದಲ್ಲಿ ಇಂತಹ ಅವಿವೇಕಿಯೂ ಬೇರೊಬ್ಬನುಂಟ? ಮಕ್ಕಳೆಂದೂ, ಮು ದುಕರೆಂದೂ, ಬ್ರಾಹ್ಮಣರೆಂದೂ, ಗುರುಗಳೆಂದೂ, ಮಿತ್ರರೆಂದೂ, ಅಣ್ಣ ತಮ್ಮಂದಿರೆಂದೂ ನೋಡದೆ, ಸಿರ್ದಯವಾಗಿ ಅಂತಹ ಮಹಾವೀರರೆಲ್ಲರನ್ನೂ ಕೊಲ್ಲಿಸಿದ ನಾನು, ಇನ್ನು ಹತ್ತೆಂಟುಜನ್ಮಗಳನ್ನೆತಿದರೂ ಆ ಮಹಾಪಾತ ಕದಿಂದ ತಪ್ಪಿಸಿಕೊಳ್ಳಲಾರೆನು, ಥರ್ಮಯುದ್ಧದಲ್ಲಿ ಶತ್ರುಗಳನ್ನು ಕೊಲ್ಲು ವುದರಿಂದಪಾಪವಿಲ್ಲವೆಂದು ಹೇಳುವುದುಂಟು!ಇದಕ್ಕೆ ನಾನಮಾತ್ರಸಮ್ಮ ತಿಸಲಾರೆನು. ದೇಶದ ಪ್ರಜೆಗಳಿಗೆ ಕಷ್ಟವನ್ನುಂಟುಮಾಡಿ, ಅವರನ್ನು ಬಾಧಿ ಸತಕ್ಕ ಶತ್ರುರಾಜರನ್ನು ಕೊಂದರೂ ಕೊಲ್ಲಬಹುದು. ಅದರಿಂದ ಪಾಪ ವುಂಟಾಗದು. ನಾನು ನಡೆಸಿದ ಕೃತ್ಯವಾದರೋ ಆಂತದಲ್ಲ. ನನ್ನ ತಮ್ಮ ನಾದ ದುರೊಧನನು ಎಷ್ಟೋ ಸುಖದಿಂದ ರಾಜ್ಯವನ್ನು ಪರಿಪಾಲಿಸುತಿದ್ದ