ಪುಟ:ಶ್ರೀಮದ್ಭಾಗವತವು ಪ್ರಥಮ ದ್ವಿತೀಯ ಸ್ಕಂಧಗಳು.djvu/೧೪೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅಧ್ಯಾ. ೯.] ಪ್ರಥಮಸ್ಕಂಧವು ೧೬೧ ಬಿಂದುಗಳು ! ಇವುಗಳಿಂದಲಂಕೃತನಾಗಿ ರಣಾಗ್ರದಲ್ಲಿ ನಿಂತಿದ್ದ ಆ ಶ್ರೀ ಕೃಷ್ಣನಲ್ಲಿ ನನ್ನ ಮನಸ್ಸು ರಮಿಸಲಿ ! ಶ್ಲೋllತಪದಿ ಸಖಿವಯೋ ನಿಶಮ್ಮ ಮಧ್ಯೆ ನಿಜಪರರ್ಬಲಯೋ ರಥಂ ನಿವೇಶ್ಯ | ಸ್ಥಿತವತಿ ಪರಸೈನಿಕಾಯುರಕ್ಷಾ ಹೃತವತಿ ಪಾರ್ಥಸ ರತಿರ್ಮಮಾಸ್ತು||೪|| ಯುದ್ಧಾರಂಭದಲ್ಲಿ ಮಿತ್ರನಾದ ಅರ್ಜುನನ ಪ್ರಾರ್ಥನೆಯನ್ನು ಕೇಳಿ, ಎರಡುಸೈನ್ಯಗಳ ನಡುವೆ ರಥವನ್ನು ತಂದು ನಿಲ್ಲಿಸಿ, ತನ್ನ ನೋಟದಿಂ ದಲೇ ಶತ್ರುಸೈನ್ಯಗಳ ಆಯುಸ್ಸನ್ನು ಅಪಹರಿಸಿದ ಪಾರ್ಥಸಖನಾದ ಶ್ರೀ ಕೃಷ್ಣನಲ್ಲಿ ನನ್ನ ಬುದ್ಧಿಯು ಸ್ಥಿರವಾಗಿ ನೆಲೆಗೊಳ್ಳಲಿ ! ಶ್ಲೋವ್ಯ ವಹಿತದೃತನಾಮುಖಂ ನಿರೀಕ್ಷ ಸ್ವಜನವಧಾದ್ವಿಮುಖಸ್ಯ ದೂಷಬುದ್ದಾಗಿ ಕುಮತಿಮಹರವಾತ್ಮ ವಿದ್ಯಯಾ ಯಶ್ಚರಸರತಿ: ಪರಮಸ್ಯ ತಸ್ಯ ಮೇಸ್ತು || ೫ll ಅರ್ಜುನನು ರಣಾಗ್ರಕ್ಕೆ ಬಂದಮೇಲೆ, ಮುಂದಿದ್ದ ಶತ್ರುಸೈನ್ಯವನ್ನು ನೋಡಿ ಸ್ವಜನವನ್ನು ಕೊಲ್ಲುವುದಕ್ಕೆ ಹಿಂಜರಿದಾಗ, ಅವನ ಆಜ್ಞಾನವನ್ನು ನೀಗಿಸುವುದಕ್ಕಾಗಿ ಯಾವನು ಗೀತೆಯನ್ನು ಪದೇಶಿಸಿದನೋ, ಆ ಪರಮ ಪುರುಷನಾದ ಕೃಷ್ಣನ ಪಾದಗಳಲ್ಲಿ ನನ್ನ ಭಕ್ತಿಯು ನಿಶ್ಚಲವಾಗಿ ನೆಲೆ ಗೊಳ್ಳಲಿ ! 11ನಿಗಮಮಪಹಾಯ ಮತ್ತಿ ಜ್ಞಾವ್ರತಮಧಿಕರ್ತುಮವನ್ನು ತೋ ರಥಸ್ಯ ಧೃತರಥಚರಣಬ್ಯಾಚ್ಚಲು ರ್ಹರಿರಿವರನ್ನು ಮಿಭಂಗತೋತ್ತರೀಯಃ | ಶಿತವಿಶಿಖಹತೋ ವಿಶೀರ್ಣದಂಶ: ಕೃತಜಪರಿಷ್ಕೃತ ಆತತಾಯಿನೋ ಮೇ! ಪ್ರಸಭಮಭಿ ರಸಾರಮಧ್ಯಧಾರ್ಥಕ ಸಭವತು ಮೇಭಗರ್ವಾಗತಿರ್ಮುಕುಂದ: ಭಾರತಯುದ್ಧದಲ್ಲಿ ತಾನು ಶಸ್ತ್ರವನ್ನು ಹಿಡಿಯುವುದಿಲ್ಲವೆಂದು ಪ್ರ ತಿಜ್ಞೆ ಮಾಡಿದ್ದರೂ, ಅದಕ್ಕೆ ವಿರುದ್ಧವಾಗಿ ನಾನು ಪ್ರತಿಜ್ಞೆ ಮಾಡಿರುವು ದನ್ನು ತಿಳಿದು, ತಾನು ಮಾತಿಗೆ ತಪ್ಪಿದರೂ ತನಗೆ ಭಕ್ತನಾದ ನನ್ನ ಪ್ರತಿ ಜ್ಞೆಯನ್ನು ಕೆಡಿಸಬಾರದೆಂಬ ವಾತ್ಸಲ್ಯದಿಂದ, ತನ್ನ ಚಕ್ರಾಯುಧವನ್ನು ಕೈಗೆ ತಿಕೊಂಡು ರಥದಿಂದಿಳಿದು, ಮೈಮೇಲಿನ ಬಟ್ಟೆಯು ಜಾರಿದುದನ್ನೂ ತಿಳಿ ಯದೆ,ಹರಿದ ಕವಚದಿಂದಲೂ,ರಕ್ತದಿಂದ ತೊಯ್ದ ಮೈಯಿಂದಲೂ ಕೂಡಿದ ವನಾಗಿ, ಆನೆಯಮೇಲೆ ಬಿಳುವ ಸಿಂಹದಂತೆ ನನ್ನನ್ನು ಕೊಲ್ಲಬೇಕೆಂಬ ಆತು ರದಿಂದ ಯಾವನು ಮುಂದೆ ಬಂದನೋ, ಆಕೃಷ್ಣನು ನನಗೆ ಗತಿಯಾಗಲಿ!