ಪುಟ:ಶ್ರೀಮದ್ಭಾಗವತವು ಪ್ರಥಮ ದ್ವಿತೀಯ ಸ್ಕಂಧಗಳು.djvu/೧೪೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೧೩೪ ಶ್ರೀಮದ್ಭಾಗವತವು [ಅಧ್ಯಾ, ೧೦ ರು. ಆಕಾಶದಿಂದ ಪುಷ್ಪವೃಷ್ಟಿಯು ಸುರಿಯಿತು. ಆಮೇಲೆ ಧರ್ಮರಾಜನು, ವ್ಯಾಸಾದಿಗಳ ಅನುಮತಿಯಿಂದ ಭೀಷ್ಮನಿಗೆ ಅಪರಸಂಸ್ಕಾರಗಳನ್ನು ನಡೆಸಿ, ಕುಲಪಿತಾಮಹನಾದ ಆತನ ಮರಣಕ್ಕಾಗಿ ಸ್ವಲ್ಪ ಹೊತ್ತಿನವರೆಗೆ ದುಃಖಿತ ನಾಗಿದ್ದನು. ಅಲ್ಲಿ ಸೇರಿದ್ದ ಋಷಿಗಳೆಲ್ಲರೂ ಶ್ರೀಕೃಷ್ಣ ಪರಮಾತ್ಮನನ್ನು ವೇದೋಕ್ಯನಾಮಗಳಿಂದ ಸಂತೋಷಪೂರ್ವಕವಾಗಿ ಸ್ತುತಿಸುತ್ತ, ಆ ಕೃಷ್ಣನನ್ನು ತಮ್ಮ ಹೃದಯದಲ್ಲಿ ಧೃಢವಾಗಿಟ್ಟುಕೊಂಡು, ಆತನಾಜ್ಞೆ ಯನ್ನು ಪಡೆದು, ತಮ್ಮ ತಮ್ಮ ಆಶ್ರಮಗಳಿಗೆ ಬಂದು ಸೇರಿದರು. ಆಮೇಲೆ ಧರ್ಮರಾಜನು ತನ್ನ ತಮ್ಮಂದಿರಾದ ಭೀಮಾದಿಗಳೊಡನೆಯೂ, ಶ್ರೀಕೃಷ್ಣ ನೊಡನೆಯೂ ಸೇರಿ ಹಸ್ತಿನಾಪುರಕ್ಕೆ ಬಂದು, ಇತ್ತಲಾಗಿ ಪುತ್ರಶೋಕದಿಂದ ದುಃಖಿಸುತಿದ್ದ ತನ್ನ ತಾಯಿತಂದೆಗಳಾದ ಗಾಂಧಾರೀಧೃತರಾಷ್ಟ್ರರನ್ನು ತಾನೇ ಸಮಾಧಾನಪಡಿಸಿದನು. ಆಮೇಲೆ ತನ್ನ ತಂದೆಯಾದ ದೃತರಾ ಹೃನ, ಮತ್ತು ಶ್ರೀಕೃಷ್ಣನ ಆಜ್ಞಾನುಸಾರವಾಗಿ, ತನ್ನ ಕುಲಕ್ರಮಾ ಗತವಾದ ರಾಜ್ಯದಲ್ಲಿ ಪಟ್ಟಾಭಿಷಿಕ್ತನಾಗಿ, ಧರ್ಮದಿಂದ ರಾಜ್ಯವನ್ನು ಪರಿ ಪಾಲಿಸುತ್ತ ಸಂತೋಷದಿಂದಿದ್ದನು. ಇಲ್ಲಿಗೆ ಒಂಬತ್ತನೆಯ ಅಧ್ಯಾಯವು. -


3 ಶ್ರೀ ಕೃಷ್ಣನು ಧರರಾಜನನ್ನು ರಾಜ್ಯಭಾರಕ್ಕಾಗಿ ) ನಿಯಮಿಸಿ, ತಾನು ದ್ವಾರಕೆಗೆ ಹೊರಟುದು, ಆಮೇಲೆ ಶೌನಕನು ಸೂತನನ್ನು ಕುರಿತು 'ಎಲೈ ಸೂತನೆ ! ಧರ ರಾಜನು, ತನ್ನ ರಾಜ್ಯಭಾಗವನ್ನ ಪಹರಿಸಿ ತನ್ನನ್ನು ಕೆಡಿಸಬೇಕೆಂದುದ್ದೇಶಿಸಿದ ನೀಚನಾದ ದುರೊಧನನನ್ನೂ , ಅವನ ತಮ್ಮಂದಿರವನ್ನೂ ಕೊಂದು ರ ಜ್ಯವನ್ನು ಕೈಕೊಂಡಮೇಲೆ, ಅವನು ತನ್ನ ತಮ್ಮಂದಿರೊಡಗೂಡಿ ರಾಜ್ಯರ ಕ್ಷಣೆಯನ್ನು ಮಾಡಿದ ಕ್ರಮವೇನು ? ಅವನು ತನ್ನ ರಾಜ್ಯಭಾರದಲ್ಲಿ ಮಾಡಿ ದ ಬೇರೆ ಕಾರಗಳೇನು ? ” ಎಂದನು. ಅದಕ್ಕಾ ಸೂತನು ಶೌನಕಾ ! ಕೆ ಳು! ಬಿದಿರುಮೆಳೆಗಳ ಸಂಘರ್ಷಣದಿಂದ ಹುಟ್ಟಿದ ಬೆಂಕಿಯೇ ಕಾಡನ್ನು ಸುಡುವಂತೆ, ಕುಲದಲ್ಲಿ ಹುಟ್ಟಿದ ಕಲಹದಿಂದ ಕುರುವಂಶವು ನಿರ್ಮೂಲವಾ ಗುತಿದ್ದಾಗ, ಶ್ರೀಕೃಷ್ಣನು ಪರೀಕ್ಷಿದ್ರಾಜನನ್ನು ರಕ್ಷಿಸಿ, ಕುರುವಂಶಕ್ಕೆ ಆ