ಪುಟ:ಶ್ರೀಮದ್ಭಾಗವತವು ಪ್ರಥಮ ದ್ವಿತೀಯ ಸ್ಕಂಧಗಳು.djvu/೧೫೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೧&& ಶ್ರೀಮದ್ಭಾಗವತವು (ಆಧ್ಯಾ, ೧೦, ಮಾದಿಗಳನ್ನಾಲಿಂಗಿಸಿಕೊಂಡು, ಅಲ್ಲಿದ್ದ ಸಮಸ್ತಜನಗಳಿಂದಲೂ ನಮಸ್ಕರಿ ಲ್ಪಟ್ಟವನಾಗಿ ಪ್ರಯಾಣಕ್ಕಾಗಿ ರಥವನ್ನೇರಿ ಕುಳಿತನು. ಹೀಗೆ ಕೃಷ್ಣನು ರಥಾರೂಢನಾಗಿ ಪಟ್ಟಣಕ್ಕೆ ಹೊರಡುವಸಮಯದಲ್ಲಿ, ಆತನ ವಿಯೋಗ ದುಃಖವನ್ನು ಸಹಿಸಲಾರದೆ, ಕುಂತಿ, ಸುಭದ್ರೆ,ಉತ್ತರೆ, ಗಾಂಧಾರಿ, ಮೊದ ಲಾದ ಸ್ತ್ರೀಯರೂ, ಧರ್ಮರಾಜ, ಭೀಮ, ನಕುಲ ಸಹದೇವರೂ, ಧೃತರಾ ಹ್ಯಾದಿಗಳೂ, ದೌಮ್ಯರೇ ಮೊದಲಾದ ಮಹರ್ಷಿಗಳೂ, ಆತನ ರಥವನ್ನು ಹಿಂಬಾಲಿಸಿ ಹೊರಟರು. ಶೌನಕಾ! ಲೋಕದಲ್ಲಿ ಮನುಷ್ಯರು ಸತ್ಪುರುಷರ ಸಹವಾಸದಿಂದ ದುಸ್ಸಂಗವನ್ನು ಬಿಟ್ಟು, ಸಜ್ಜನರಿಗೆ ಸೇವ್ಯವಾದ ಶ್ರೀಕೃ ಷ್ಣನ ಕೀರ್ತಿಯನ್ನೊಂದಾವರ್ತಿ ಕೇಳಿದಮಾತ್ರದಿಂದಲೇ, ಅದನ್ನು ಎಂ ದೆಂದಿಗೂ ಬಿಟ್ಟಿರಲಾರರು. ಹೀಗಿರುವಾಗ ಸ್ವಲ್ಪ ಕಾಲದಲ್ಲಿಯೂ, ಶ್ರೀಕೃ ಷ್ಣನೊಡನೆಯೇ ನಿದ್ರಾಹಾರಗಳನ್ನು ನಡೆಸುತ್ತ, ಅವನ ಸಂಗಡಲೇ ಕುಳಿತು ಸಂಭಾಷಣಗಳನ್ನು ನಡೆಸುತ್ತಿದ್ದ ಪಾಂಡವರು, ಹೇಗೆತಾನೇ ಆ ಮ ಹಾತ್ಮನ ವಿರಹವನ್ನು ಸಹಿಸಬಲ್ಲರು ? ಹೀಗೆ ಧರ್ಮರಾಜಾದಿಗಳೂ, ಕುಂತಿ ಮೊದಲಾದ ಸ್ತ್ರೀಯರೂ ಕೃಷ್ಣನಲ್ಲಿರುವ ಸ್ನೇಹದಿಂದ, ಆತನನ್ನಗಲಿರ ಲಾರದೆ, ಮನಸ್ಸನ್ನು ಆವನಲ್ಲಿಯೇ ನೆಲೆಗೊಳಿಸಿ, ಎವೆಮುಚ್ಚದೆ ಆತನನ್ನೇ ನೋಡುತ್ತಬಹಳ ಚಿಂತಾಪರರಾಗಿ ಅಲ್ಲಲ್ಲಿ ತಿರುಗುತಿದ್ದರು. ಜನವೆಲ್ಲವೂ ಕೃಷ್ಣನ ಪ್ರಯಾಣ ಕಾಲದಲ್ಲಿ ಕಣ್ಣೀರನ್ನು ಬಿಡುವುದು ಅಮಂಗಳಸೂಚ ಕವೆಂದೆಣಿಸಿ, ಅವನ ವಿರಹದುಖದಿಂದ ತುಂಬಿ ಕುಳುಕುತ್ತಿರುವ ಬಾಷ್ಪಜಲ ವನ್ನು ಎಷ್ಟೋ ಪ್ರಯತ್ನದಿಂದ ತಡೆದಿಟ್ಟುಕೊಳ್ಳುತಿದ್ದರು. ಶಂಖ” ಭೇರಿ, ಮೃದಂಗ, ವೀಣೆ, ಪಣವ, ಗೋಮುಖ, ದುಂಧುಭಿ, ಫುಂಟೆ,ಕರತಾಳಮೊದ ಲಾದ ಶುಭವಾದ್ಯಗಳೆಲ್ಲವೂ ಗಂಭೀರವಾಗಿ ನುಡಿಸಲ್ಪಡುತ್ತಿದ್ದುವು. ಹಸ್ತಿನಾ ಪುರದಲ್ಲಿದ್ದ ಸ್ತ್ರೀಯರೆಲ್ಲರೂ ಆ ಕೃಷ್ಣನ ಪ್ರಯಾಣೋತ್ಸವವನ್ನು ನೋಡ ಬೇಕೆಂಬ ಆಸೆಯಿಂದ ಉಪ್ಪರಿಗೆಗಳನ್ನೇರಿ, ಪ್ರೀತಿಯನ್ನೂ , ಲಜ್ಜೆಯನ್ನೂ, ಮಂದಹಾಸವನ್ನೂ ಸೂಚಿಸತಕ್ಕ ನೋಟಗಳಿಂದ ಆತನನ್ನೇ ನೋ ಡುತ್ತ, ಶ್ರೀಕೃಷ್ಣನ ಮೇಲೆ ಪುಷ್ಪವರ್ಷವನ್ನು ಸುರಿಸುತಿದ್ದರು. ಶ್ರೀಕೃಷ್ಣನಿಗೆ ಪರಮಪ್ರಿಯನಾದ ಅರ್ಜುನನು, ಆತನ ಪ್ರಯಾಣ