ಪುಟ:ಶ್ರೀಮದ್ಭಾಗವತವು ಪ್ರಥಮ ದ್ವಿತೀಯ ಸ್ಕಂಧಗಳು.djvu/೧೫೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅಧ್ಯಾ, ೧೦.] ಪ್ರಥಮಸ್ಕಂಧವು. ೧೩೪ ನಗಳನ್ನೂ ಎಷ್ಟೋಹೋಮಗಳನ್ನೂ ನಡೆಸಿರಬೇಕು ! ಹಾಗಿಲ್ಲದಿದ್ದರೆ ಆ ವರಿಗೆ ಈ ಭಾಗ್ಯವೆಲ್ಲಿಯದು? ಮತ್ತು ಹಿಂದೆ ಗತ್ವದಿಂದ ಕೊಬ್ಬಿದ ಶಿಶುಪಾ ಲಾದಿಗಳನ್ನು ನಿಗ್ರಹಿಸಿ, ಸ್ವಯಂವರದಲ್ಲಿ ವೀರಶುಲ್ಕವಾಗಿಸಾಧಿಸಿತಂದ ರುಕ್ಕಿಣಿ, ಜಾಂಬವತಿ, ಮೊದಲಾದ ನಾರೀಮಣಿಯರೂ, ನರಕಾಸುರನನ್ನು ನಿಗ್ರಹಿಸಿ ತಂದ ಹದಿನಾರು ಸಾವಿರ ಮಂದಿ ಸ್ತ್ರೀಯರೂ, ಈ ಶ್ರೀ ಕೃಷ್ಣ ನನ್ನು ತಮ್ಮ ಮನೆಯಲ್ಲಿ ನಿತ್ಯವಾಗಿ ನಿಲ್ಲಿಸಿಕೊಳ್ಳುವುದರಿಂದ, ಆಶುಚಿ ಯಾಗಿಯೂ, ಕ್ರೂರವಾಗಿಯೂ ಇರುವ ಜಾತಿಗೇ ಒಂದು ವಿಧವಾದ ಮೇಲೆಯನ್ನುಂಟುಮಾಡಿದರಲ್ಲವೆ ? ಈ ಮಹಾನುಭಾವನು ಆಗಾಗ ಹೆಸರು ಹಿಡಿದು ಕರೆಯುವುದರಿಂದ ಯಾವ ಸ್ತ್ರೀಯರ ಮನಸ್ಸನ್ನು ಮೋಹಗೊಳಿಸ ತಿರುವನೋ, ಆಹಾ! ಆವರಭಾಗ್ಯವೇ ಭಾಗ್ಯವು” ಹೀಗೆಂದು ಸಂಭಾಷಿಸುತ್ತಿ ರುವ ಆ ಪರಸ್ತ್ರೀಯರ ವಾಕ್ಯವನ್ನು ಕೇಳಿ,ಶ್ರೀಕೃಷ್ಣನು, ಮಂದಹಾಸವಿ ಶಿಷ್ಟವಾದ ನೋಟದಿಂದ ಅವರನ್ನು ಮತ್ತಷ್ಟು ಆನಂದಪಡಿಸುತ್ತ, ಹಸ್ತಿ ನಾ ಪುರದ ಬೀದಿಗಳನ್ನು ದಾಟಿಬರುತಿದ್ದರು, ಆಗ ಧರ್ಮರಾಜನ ಕೈ ಹೈನಲ್ಲಿ ತನಗಿದ್ದ ಮಿತಿಮೀರಿದ ಪ್ರೇಮದಿಂದ, ಆತನಿಗೆ ಶತ್ರುಗಳಿಂದೇ ನಾದರೂ ಅಪಾಯವುಂಟಾಗುವುದೋ ಎಂದು ಹೆದರಿ, ಆ ಕೃಷ್ಣನ ಬೆಂಗಾವಲಿಗಾಗಿ ಒಂದು ದೊಡ್ಡ ಚತುರಂಗಸೈನ್ಯವನ್ನು ಕಳುಹಿಸಿಕೊಟ್ಟ ನು. ತನ್ನ ತಮ್ಮಂದಿರೊಡನೆ ತಾನೂ ಬಹಳದೂರದವರೆಗೆ ಹಿಂಬಾಲಿಸಿದನು. ಹೀಗೆ ಪಾಂಡವರು ತನ್ನ ನ್ನು ಬಿಟ್ಟಿರಲಾರದೆ ಬಹುದೂರದವರೆಗೆ ಹಿಂಬಾಲಿ ಸಿಬಂದುದನ್ನು ನೋಡಿ, ಕೃಷ್ಣನು,ಇಂಪಾದಮೃದುವಾಕ್ಯಗಳಿಂದ ಅವರನ್ನು ಹಿಂತಿರುಗಿಸಿ, ತನ್ನ ಪ್ರಿಯಜನದೊಡನೆ ಬ್ಯಾರಕಾಭಿಮುಖನಾಗಿ ಹೊರಟನು. ದಾರಿಯಲ್ಲಿ ಕ್ರಮವಾಗಿ,ಕುರಜಾಂಗಲ, ಪಾಂಚಾಲ,ಶೂರಸೇನಾದಿ ದೇಶಗಳ ನ್ಯೂ ,ಯಮುನಾತೀರಪ್ರಾಂತಗಳನ್ನೂ,ಬ್ರಹ್ಮಾವರ್ತ,ಕುರುಕ್ಷೇತ್ರಗಳನ್ನೂ ಮ ದೇಶವನ್ನೂ, ಸರಸ್ವತೀನದಿಯ ತೀರದೇಶಗಳನ್ನೂ, ಇನ್ನೂ ಅಲ್ಲಲ್ಲಿ ತೃಣಜಲರಹಿತಗಳಾದ ಬಯಲುಗಳನ್ನೂ ದಾಟಿ ಬಂದನು, ಅದರಿಂದಾಚೆಗೆ ಸೌವೀರಾಡಿದೇಶಗಳಮೇಲೆ ಹೊರಟು, ದ್ವಾರಕೆಗೆ ಸೇರಿದಂತಿದ್ದ ಅನರ್ತ ದೇಶವನ್ನು ಸಮೀಪಿಸುವಷ್ಟರಲ್ಲಿ, ಆತನ ರಥದ ಕುದುರೆಗಳು ಸ್ವಲ್ಪವಾಗಿ