ಪುಟ:ಶ್ರೀಮದ್ಭಾಗವತವು ಪ್ರಥಮ ದ್ವಿತೀಯ ಸ್ಕಂಧಗಳು.djvu/೧೫೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅಧ್ಯಾ, ೧೧ || ಪ್ರಥಮಸ್ಕಂಧವು. ೧೪೩ ನನ್ನಿ ದಿರುಗೊಳ್ಳುವುದಕ್ಕಾಗಿ ಹೊರಟರು. ಅನೇಕಬ್ರಾಹ್ಮಣರು ಮಂಗಳ ದ್ರವ್ಯಗಳನ್ನು ಕೈಯಲ್ಲಿ ಹಿಡಿದು ಸ್ವಸ್ತಿವಾಚನಗಳನ್ನು ಹೇಳುತ್ತ ಬಂದರು. ವೇದಘೋಷಗಳೂ, ಶಂಖತೂಾದಿಮಂಗಳವಾದ್ಯಧ್ವನಿಗಳೂ ಕಿವಿ ಗಿಂಪಾಗಿ ಕೇಳಿಸುತ್ತಿದ್ದುವು. ಇವರೆಲ್ಲರೂ ರಥದಲ್ಲಿ ಕುಳಿತು, ಸಂತೋಷ ದಿಂದಲೂ ಭಯಭಕ್ತಿಗಳಿಂದಲೂ ಕೂಡಿದವರಾಗಿ, ಪರಮಸಂತೋಷ ದಿಂದ ಕೃಷ್ಣನಿಗಿದಿರಾಗಿ ಬಂದರು. ನೂರಾರುಮಂದಿ ಗಣಿಕಾಸ್ಸಿಯರು, ಕೆನ್ನೆಗಳಲ್ಲಿಯೂ, ಮುಖಗಳಲ್ಲಿಯೂ ಶೋಭಿಸುತ್ತಿರುವ ಕುಂಡಲಕಾಂತಿ ಯುಳ್ಳವರಾಗಿ, ಶ್ರೀಕೃಷ್ಣ ದರ್ಶನಾಸಕ್ತಿಯಿಂದ ವಾಹನಗಳನ್ನೇರಿ ಹೊರಟರು. ಇದಲ್ಲದೆ ನಟನರ್ತಕರೂ, ಗಾಯಕರೂ, ಹೊಗಳುಭಟರೂ, ವಂಶಾವಳಿಯನ್ನು ಕೀರ್ತಿಸತಕ್ಕ ಮಾಗಧರೂ, ಪುಣ್ಯಶ್ಲೋಕನಾದ ಶ್ರೀ ಕೃಷ್ಣನ ದಿವ್ಯಚರಿತ್ರೆಗಳನ್ನು ಗಾನಮಾಡುತ್ತ ಬಂದರು. ಆಗ ಶ್ರೀಕೃಷ್ಣನು, ಪರಮಸಂತೋಷದಿಂದ ಬರುತ್ತಿರುವ ಈ ಬಂಧು ವರ್ಗಗಳನ್ನೂ, ಪುರವಾಸಿಗಳನ್ನೂ ನೋಡಿದೊಡನೆ, ಅವರೆಲ್ಲರನ್ನೂ ಯಥೋಚಿತವಾಗಿ ಮನ್ನಿಸಿದನು. ವೈದ್ಯರಾದ ಕೆಲವರನ್ನು ನಮಸ್ಕಾರಗಳಿಂ ದ ಗೌರವಿಸಿದರು. ಕೆಲವರನ್ನು ಪ್ರೇಮದಿಂದಾಲಂಗಿಸಿಕೊಂಡನು. ಕೆಲವರ ನ್ನು ಮಂದಹಾಸದಿಂದ ಮನ್ನಿಸಿದನು!ಹಾಗೆಯೇ ಕೆಲವರನ್ನು ಕರಸ್ಪರ್ಶದಿಂ ದಲೂ, ಕೆಲವರನ್ನು ತನ್ನ ಕಟಾಕ್ಷವೀಕ್ಷಣಗಳಿಂದಲೂ ಮನ್ನಿಸಿ, ಎಲ್ಲರನ್ನೂ ಕುಶಲಪ್ರಶ್ನೆ ಮಾಡಿದನು. ವಸುದೇವಾಡಿಗಳು ಮೊದಲುಗೊಂಡು ಚಂ ಡಾಲಪರಂತವಾಗಿ ಅಲ್ಲಿಗೆ ಬಂದವರೆಲ್ಲರನ್ನೂ ಕೃಷ್ಣನು ಹೀಗೆ ಕುಶಲಪ್ಪ ಶಾದಿಗಳಿಂದ ಗೌರವಿಸಿದಮೇಲೆ,ತಾನೂಕೂಡ್ರಗುರುಗಳಿಂದಲೂ, ಬ್ರಾಹ್ಮ ಣರಿಂದಲೂ, ವಯೋವೃದ್ಧರಿಂದಲೂ,ವಂಜನಗಳಿಂದಲೂ ಆಶೀರ್ವದಿಸಲ್ಪ ಟ್ಯವನಾಗಿ, ರಾಜಮಾರ್ಗದಿಂದಲೇ ಹೊರಟು, ಅಂತಃಪುರದಕಡೆಗೆ ಬರುತಿ ಹೃನು. ಈ ಕೃಷ್ಟಾಗಮನವೃತ್ತಾಂತವನ್ನು ಕೇಳಿದೊಡನೆ, ಆ ದ್ವಾರಕೆಯಲ್ಲಿ ಆ ಸ್ತ್ರೀಯರೆಲ್ಲರೂ ತಮ್ಮ ತಮ್ಮ ಉಪ್ಪರಿಗೆಗಳನ್ನೆ 4ರಿ ನೋಡುತಿದ್ದರು. ಶನಕಾ!ಲಕ್ಷ್ಮೀ ನಿವಾಸನಾದ ಆ ಶ್ರೀಕೃಷ್ಣನನ್ನು ಪ್ರತಿದಿನವೂ ನೋಡು ತಿದ್ದರೂ, ದ್ವಾರಕಾವಾಸಿಗಳ ಕಣ್ಣುಗಳಿಗೆ ತೃಪ್ತಿಯೆಂಬುದೇ ಇಲ್ಲ