ಪುಟ:ಶ್ರೀಮದ್ಭಾಗವತವು ಪ್ರಥಮ ದ್ವಿತೀಯ ಸ್ಕಂಧಗಳು.djvu/೧೬೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅಧ್ಯಾ. ೧೨. ಪ್ರಥಮಸ್ಕಂಧವು. ಸದಿಂದ ನಷ್ಟವಾಗುತ್ತಿದ್ದ ಸಂದರ್ಭದಲ್ಲಿ, ಸತ್ವಸಮರ್ಥನಾದ ಶ್ರೀಮಹಾ ವಿಷ್ಟುವ ಉತ್ತರೆಯ ಗರ್ಭದಲ್ಲಿ ಪ್ರವತಿಸಿ, ವಾತ್ಸಲ್ಯದಿಂದ ಅದನ್ನು ರಕ್ಷಿಸಿ ರುವನು. ಗರ್ಭದಲ್ಲಿಯೇ ಈತನು ಆ ಮಹಾವಿಷ್ಣುವಿನ ಕೃಪಾಬಲದಿಂದ -ಕಿತನಾದುದರಿಂದ ಈತನಿಗೆ ಲೋಕದಲ್ಲಿ ಪಿಷ್ಟುರಾತನೆಂಬ ಹೆಸರೇ ಪ್ರಸಿದ್ಧವಾಗಲಿ! ಧರ್ಮರಾ ತಾ. ಇದನ್ನು ಸಾಮಾನ್ಯ ತಿಶುವೆಂದೆಣಿಸಬೇಡ ! ಈ ಬಾಲನು ಮಂದೆ ಪರಮಭಾಗವತೋತ್ತಮನೆಂದೆನಿಸಿ ಪೂಣ್ಯಕೀರ್ತಿಯನ್ನು ಹೊಂದುವನು” ಎಂದರು. ಆಗ ಸರ್ವರಾಜನು ಬ್ರಾಹ್ಮಣರನ್ನು ಕುರಿತು * » ವಿಪ್ರೋತ್ತಮರೆ! ಇದುವರೆಗೆ ನಮ್ಮ ವಂಶದಲ್ಲಿ ಹುಟ್ಟಿದವರೆಲ್ಲರೂ ಬಹಳ ಯಶಸ್ವಿಗಳಾಗಿ, ದೆಯಾ ಸಿಹಿಗಳಾಗಿ, ರಾಜರ್ಷಿಗಳೆಂದು ಪ್ರಸಿದ್ಧಿಯ ನ್ನು ಪಡೆದರು. ಅದರಂತೆಯೇ ಈ ಮೀಲನೂಕೂಡ ಮುಂದೆ ಖ್ಯಾತಿವಂತನಾ ಗಿ, ವಿಷ್ಣುಭಕ್ತನಾಗಿ,ಚಿರಜಿಪಿಯಾಗಿ ತನ್ನ ಹಿರಿಯರ ಕೀರ್ತಿಯನ್ನು ಮುಂ ದಕ್ಕೆ ತರುವನೇ, ಇಲ್ಲವೆ, ಎಂದನ್ನು ನೀವು ಚೆನ್ನಾಗಿ ಯೋಚಿಸಿ ತಿಳಿಸ ಬೇಕು.” ಎಂದನು, ಆಗ ಬ್ರಾಹ್ಮಣರ ಎಲೈ ರಾಜೇಂದ್ರನೆ! ಅದಕ್ಕೆ ಸಂದೇ ತವೇ? ೯; ೬Jಲನು ವೈವಸೂತಪುತ್ರನಾದ ಇಕ್ಷಾಕುವಂತೆ ಧರ್ಮದಿಂದ ಪ್ರಜೆಗಳನ್ನು ರಕ್ಷಿಸುವನು. ದಶರಥಪುತ್ರನಾದ ಶ್ರೀರಾಮನಂತೆ ಬ್ರಾಹ್ಮಣ ಭಕ್ತಿಯುಳ್ಳವನಾಗಿಯೂ, ಸತ್ಯಸಂಧನಾಗಿಯೂ ಇರುವನು. ಶಿಬಿಚಕ್ರ ವರ್ತಿಯಂತೆ ಆಿತರಕ್ಷಣದಲ್ಲಿಯೂ, ಔದರದಲ್ಲಿಯೂ ಖ್ಯಾತಿಹೊಂದು ವನು. ದುಷ್ಯಂತಪುತ್ರನಾದ ಭರತನಂತೆ ಯಾಗಶೀಲರ ಯಶಸ್ಸನ್ನು ಪ್ರಕಾಶಗೊಳಿಸುವನು. ಧನುರ್ವಿದ್ಯೆಯಲ್ಲಿ ಅರ್ಜುನನನ್ನೂ , ಕಾರ್ತವೀರಾ ರ್ಜುನನನ್ನೂ ಹೋಲುವನು. ಅಗ್ನಿ ಯಂತೆ ಶತ್ರುಗಳಿಂದ ಸಹಿಸಲಸಾಧ್ಯ ವಾದ ಪ್ರತಾಪವುಳ್ಳವನಾಗುವನು, ಅಪಾರಪಾರಾವಾರದಂತೆ ಗಂಭೀರ ಸ್ವಭಾವವುಳ್ಳವನಾಗಿಯೂ, ದುಸ್ತರವಾಗಿಯೂ ಇರುವನು. ಸಿಂಹದಂತೆ ಪರಾಕ್ರಮಶಾಲಿಯಾಗಿ ಹಿಮವಂತನಂತೆ ಸಕಲಾಶ್ರಯನಾಗಿಯೂ ಬೆಳಗು ವನು, ತಾಳ್ಮೆಯಲ್ಲಿ ಭೂದೇವಿಗೆ ಸಮಾನನೆನಿಸುವನು. ಇತರರ ತಪ್ಪನ್ನು ಮನ್ನಿಸುವುದರಲ್ಲಿ ಹೆತ್ತ ತಂದೆತಾಯಿಗಳಂತೆ ಸಹನಗುಣಗಳನ್ನು ತೋರಿಸು ವನು. ಬ್ರಹ್ಮನಂತೆ ಸರಭೂತಸಮನಾಗಿಯೂ, ರುದ್ರನಂತೆ ಆಿತರಕ್ಷಕ