ಪುಟ:ಶ್ರೀಮದ್ಭಾಗವತವು ಪ್ರಥಮ ದ್ವಿತೀಯ ಸ್ಕಂಧಗಳು.djvu/೧೬೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೧೫೨ ಶ್ರೀಮದ್ಭಾಗವತವು (ಅಧ್ಯಾ, ೧೩, ಮಾತ್ರ ಮೈತ್ರೇಯನು ಪ್ರತ್ಯುತ್ತರವನ್ನು ಕೊಡುವಷ್ಟರಲ್ಲಿಯೇ ವಿದುರನಿ ಗೆ ಭಗವಂತನಲ್ಲಿ ಅನನ್ಯ ಪ್ರಯೋಜನನಾದ ಭಕ್ತಿಯು ಹುಟ್ಟಿತು. ಉಳಿದ ಪ್ರಶ್ನೆಗಳಿಗೆ ಉತ್ತರವನ್ನು ಕೇಳಬೇಕಾದ ಅವಶ್ಯವೇ ಇಲ್ಲವೆಂದು ವಿದುರನು ಅಷ್ಟರಲ್ಲಿಯೇ ಸುಮ್ಮನಾದನು ಆತ್ಮಜ್ಞಾನದಿಂದ ಕೃತಕೃತ್ಯನಾದ ವಿದು ರನು ಬರುವ ಸಂಗತಿಯನ್ನು ತಿಳಿದು, ಧರ್ಮರಾಜನು ತನ್ನ ತಮ್ಮಂದಿರೊಡನೆ ಅವನು ಹಿರುಗೊಂಡು ಹೋದನು. ಹಾಗೆಯೇ ಮೃತರಾಷ್ಟ್ರನೂ, ಯು ಯುತ್ತುವೂ, ಸಂಜಯನೂ, ಕೃಷ್ಣನೂ, ಕುಂತಿ, ಗಾಂಧಾರಿ, ದೌಪದಿ, ಸುಭದ್ರೆ, ಉತ್ತರೆ ಕೃಷಿ, ಮೊದಲಾದ ಸ್ತ್ರೀಯರೂ, ಇನ್ನ ಪಾಂಡುರಾಜನ ಇತರಬಂಧಗಳಕೊಡ ಪರಮಸಂತೋಷಭರಿತರಾಗಿ, ಹೋದ ಗ್ರಾಣವು ತಿರುಗಿ ಬಂತೆಂದು ಭಾವಿಸಿ, ಅವನ ಏರುಗೊಂಡು ಹೋದರು. ಇವರೆಲ್ಲ ರೂ ತಮ್ಮ ತಮ್ಮ ಪ್ರೀತಿಗೌರವಗಳಿಗೆ ತಕ್ಕಂತೆ ಆಲಿಂಗನಗಳಿಂದಲೂ, ನಮ ಸ್ವರಗಳಿಂದಲೂ, ಅವನನ್ನು ಯಥೋಚಿತವಾಗಿ ಮನ್ನಿಸಿ, ಆನಂದಬಾಷ್ಪ ಗುಂದ ತಮ್ಮ ಮಾತಿಶಯವನ್ನು ಹೊರಪಡಿಸಿದರು. ಆಮೇಲೆ ಧರ್ಮ ರಾಜನು ವಿದುರನನ್ನು ತನ್ನ ಅರಮನೆಗೆ ಕರೆದುಕೊಂಡು ಹೋಗಿ, ಆತನನ್ನು ಯಥಾವಿಧಿ ಯಾಗಿ ಸತ್ಕರಿಸಿ, ಉಚಿತಾಸನವನ್ನು ಕೊಟ್ಟು, ಷಡ್ರಸೋಪೇತಗ ಳಾದ ಭೋಜನಗಳಿಂದ ತೃಪ್ತಿ ಪಡಿಸಿದನು. ವಿದುರನು ಸಿಂತಿಯನ್ನು ತೆಗೆ ದುಕೊಂಡು ಸುಖಾಸೀನನಾಗಿ ಕಳಿತಮೇಲೆ, ಧರ್ಮರಾಜನು ಅವನನ್ನು ಕುರಿತು ಪ್ರಶ್ನೆ ಮಾಡುವನು. 'ಎಲೈ ಪುರುಷ ಶ್ರೇಷ್ಟನೆ!ನೀನು ನಮ್ಮನ್ನೂ , ನಮ್ಮ ತಾಯಿಯಾದ ಕುಂತಿಯನ್ನೂ, ಶತ್ರುಗಳಿಂದ ಪ್ರಯೋಗಿಸಲ್ಪಟ್ಟ ವಿಷಾಗ್ನಿ ಮೊದಲಾದ ವಿಪತ್ತುಗಳಿಂದ ತಪ್ಪಿಸಿ, ನಿಮ್ಮ ಮನೆಯಲ್ಲಿಟ್ಟು ಇದು ವರೆಗೆ ಪೋಷಿಸಿದೆ. ನಿನ್ನಿಂದ ರಕ್ಷಿತರಾದ ನಮ್ಮನ್ನು ಚಿರಕಾಲಕ್ಕೆ ಒಂದಾ ವರ್ತಿಯಾದರೂ ಸ್ಮರಿಸುತ್ತಿರುವೆಯಲ್ಲವೆ? ಎಲೈಮಹಾತ್ಮನೆ!ತೀರ್ಥಯಾತ್ರೆ ಗಾಗಿ ನೀನು ಭೂಮಿಯನ್ನು ಸಂಚರಿಸುತ್ತಿರುವಾಗ,ಯಾವಯಾವ ಕ್ರಮದಿಂ ದನೀನು ಆ ಯಾತ್ರೆಯನ್ನು ನಡೆಸುತಿದ್ದೆ? ಈ ಭೂತಲದಲ್ಲಿರುವ ಭಗವತ್‌ಕ್ಷೇ ತ್ರಗಳಲ್ಲಿ ಮುಖ್ಯವಾದುವಾವುವು? ಇದುವರೆಗೆ ನೀನು ಸೇವಿಸಿಬಂದ ತೀರ್ಥಗ ಳೆಷ್ಟು? ಎಲೈ ಪ್ರಭುಶ್ರೇಷ್ಠನೆ? ನಿನ್ನಂತಹ ಭಗವದ್ಭಕ್ತರು ಸಹಜವಾಗಿಯೇ