ಪುಟ:ಶ್ರೀಮದ್ಭಾಗವತವು ಪ್ರಥಮ ದ್ವಿತೀಯ ಸ್ಕಂಧಗಳು.djvu/೧೬೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೧೫೪ ಶ್ರೀಮದ್ಭಾಗವತವು [ಅಧ್ಯಾ. ೧೩, ಲವು ಸಮೀಪಿಸಿರುವುದನ್ನು ಸೂಚಿಸಿ, ಮುಂದೆ ಅವನು ಹಿಡಿಯಬೇಕಾದ ಮೋಕ್ಷಪಾಯವನ್ನೂ ತಿಳಿಸುತ್ತಿದ್ದನು. ಶಿವಕಾ | ಶೂದ್ರನಿ ಯಲ್ಲಿ ಹುಟ್ಟಿದ ವಿದುರನಿಗೆ ಧೃತರಾಷ್ಟ್ರನ ಮರಣಕಾಲವನ್ನು ತಿಳಿಯು ವ ಶಕ್ತಿಯು ಹೇಗೆಂದು ನೀನು ಶಂಕಿಸಬಹುದು. ಮುನೀಂದ್ರಾ.? ವಿದುರನ ವಿಷಯದಲ್ಲಿ ಮಾತ್ರ ಈ ವಿಧವಾದ ಶಂಕೆಗೆ ಅವಕಾಶವಿಲ್ಲ. ಆ ವಿದುರನನ್ನು ಯಾರೆಂದು ತಿಳಿದಿರುವೆ! ಸಮಸ್ತಪ್ರಾಣಿಗಳ ಮೃತ್ಯು ಕಾಲವನ್ನೂ ತಿಳಿದಿರು ವ ಸಾಕ್ಷಾತ್ ಯಮಧರ್ಮರಾಜನೇ ಆತನೆಂದು ತಿಳಿ! ಈತನು ಪೂರ್ವದಲ್ಲಿ ಮಾಂಡವ್ಯನ ಶಾಪದಿಂದ ನೂರುವರ್ಷಗಳವರೆಗೆ ಶೂದ್ರಜನ್ಮದಲ್ಲಿರಬೇಕಾಗಿ ಬಂದಿತು. ಆಗ ತನ್ನ ಅಧಿಕಾರವನ್ನು ಸೂರೆಸಿಗೆಕೊಟ್ಟು, ಹೀಗೆ ಏದುರನಾಗಿ ಹುಟ್ಟಿದನು. ಆದುದರಿಂದ ಈತನಿಗೆ ಧೃತರಾಷ್ಟ್ರನ ಮರಣಕಾಲವತಿಳಿದು ದೇನೂ ಆತ್ಮ ವ್ಯವಲ್ಲ.ಅದು ಹಾಗಿರಲಿ!ಇತ್ತಲಾಗಿ ಧರ್ಮರಾಜನುರಾಜ್ಯವನ್ನು ನಡೆಸುತ್ತ, ವಂಶೋಬಾರಕನಾದ ಮುಮ್ಮಗನನ್ನು ಪಡೆದಮೇಲೆ ರಾಜ್ಯವ ನ್ನು ವಿಶೇಷವಾಗಿ ವಿಸ್ತರಿಸಿ, ಲೋಕಪಾಲರಿಗೆ ಸಮಾನಾದ ತಮ್ಮಂದಿರೊ ಡಗೂಡಿ ಸಾಮ್ರಾಜ್ಯಲಕ್ಷ್ಮಿ ವಿಶಿಷ್ಟನಾಗಿ ಸಂತೋಷದಿಂದ ರಾಜ್ಯವನ್ನಾ ಳುತಿದ್ದನು. ಶೌನಕಾ: ಲೋಕದಲ್ಲಿ ಸಂಸಾರಸುಖವನ್ನ ಪೇಕ್ಷಿಸಿ, ಅದರಿಂದ ಮೈತಿಳಿಯದೆ ಮತ್ತರಾದವರಿಗೆ, ಕಾಲವೆಂಬುದು ತಿಳಿಯದಹಾಗೆಯೇ ಮೇಲೆ ಬಂದು ಬೀಳುವುದು. ಆಹಾ! ಆ ಕಾಲವನ್ನು ಮೀರುವುದು ಯಾರಿಗೆತಾನೇ ಸಾಧ್ಯವು? ದುರ್ಲಂಫ್ಯವಾದ ಈ ಕಾಲವು ಧೃತರಾಷ್ಟ್ರನನ್ನು ಸಮೀಪಿಸಿ ದಾಗ, ವಿದುರನೊಬ್ಬಸಿಗೆಕೊರತು ಬೇರೆ ಯಾರಿಗೆತಾನೇ ಅದರ ನಿಜಸ್ಥಿತಿ ಯನ್ನು ಕಂಡುಕೊಳ್ಳಲು ಸಾಧ್ಯವಾಯಿತು ? ವಿದುರನು ಕಾಲಜ್ಞನಾದುದ ರಿಂದ, ಈಸಂಗತಿಯನ್ನು ಮೊದಲೇ ತಿಳಿದು, ಧೃತರಾಷ್ಟ್ರನನ್ನು ಕುರಿತು ಹೇಳುವನು.ರಾಜಾ!ಇನ್ನು ತಡಮಾಡದೆ, ಈಗಲೇ ನೀವು ಈ ಪಟ್ಟಣವನ್ನು ಬಿಟ್ಟು, ಅಡವಿಗೆ ಹೋಗಿ ತಪಸ್ಸಿನಲ್ಲಿರುವುದುಚಿತವು. ಇದೋ : ಈಗ ನ ಮ್ಮ ಮೇಲೆ ಕವಿದುಬರುತ್ತಿರುವ ಮಹಾಭಯವನ್ನು ನೋಡು! «« ಇಷ್ಟೆ ದು ಸಾಮ್ರಾಜ್ಯಭೋಗಗಳೆಲ್ಲವನ್ನೂ ಒಮ್ಮೆಯೇ ತೊರೆದು ಹೋಗುವುದು ಹೇಗೆ”ಎಂದು ಸೀನು ಶಂಕಿಸಬಹುದು'ಕೌರವೇಂದ್ರಾ? ಹಾಗೆಣಿಸಬೇಡ! ಎಲ್ಲಿ