ಪುಟ:ಶ್ರೀಮದ್ಭಾಗವತವು ಪ್ರಥಮ ದ್ವಿತೀಯ ಸ್ಕಂಧಗಳು.djvu/೧೮೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೧೭9 ಶ್ರೀಮದ್ಭಾಗವತವು (ಅಧ್ಯಾ. ೧೫, ಇವೆಲ್ಲಕ್ಕೂ ಆ ಶ್ರೀಕೃಷ್ಣನ ಸಹಾಯಬಲವೇ ಕಾರಣವು. ಅಂತಹ ಕೃಷ್ಣ ನು ಈಗ ನನ್ನ ಹೃದಯವನ್ನೆಳೆದುಕೊಂಡು ನನ್ನ ನ್ನಗಲಿ ಹೋದನು.ಹಿಂದಿನ ಯುದ್ಧದಲ್ಲಿ ಮಹಾರಥರಾದ ಅನೇಕವೀರಕ್ಷತ್ರಿಯರ ರಥಗಳಿಂದಲಂಕೃತವಾ ಗಿದ್ದ, ಭೀಷ್ಮ, ದ್ರೋಣ, ಕರ್ಣ, ಶಲ್ಯಾಣ ಮಹಾವೀರರ ಸೈನ್ಯಗಳಲ್ಲಿ ಯಾ ನ ಮಹಾತ್ಮನು ನನಗೆ ಮುಂದಾಗಿ ನಿಂತು, ನಾನು ಬಾಣಪ್ರಯೋಗವನ್ನು ಮಾಡುವುದಕ್ಕೆ ಮೊದಲು ತನ್ನ ದೃಷ್ಟಿಯಿಂದಲೇ ಆ ಶತ್ರುಪೀರರೆ ಮನಸ್ಸ ನ್ಯೂ, ತೇಜಸ್ಸನ್ನೂ, ಆವರ ಆಯುಸ್ಸನ್ನೂ ಅಪಹರಿಸಿ, ಮೃತಪ್ರಾಯರ ನ್ನಾಗಿ ಮಾಡುತಿದ್ದನೋ, ಆ ಕೃಷ್ಣನು ಈಗ ನನ್ನ ಹೃದಯವನ್ನ ಪಹರಿಸಿ ಕೊಂಡುಹೋದನು. ಹಿಂದಿನ ಯುದ್ಧದಲ್ಲಿ ಭೀಷ್ಮ, ದ್ರೋಣ, ಕರ್ಣ, ಅಶ್ವತ್ಥಾಮ, ಶಲ್ಯ, ಸೈಂಧವ, ತ್ರಿಗರ್ತ, ಬಾಘೀ ಕಾದಿ ಕುರುಪೀರರು, ನನ್ನ ಮೇಲೆ ಪ್ರಯೋಗಿಸಿದ ಮಹಾಪ್ರಭಾವವುಳ್ಳ ಬಾಣಗಳೆಲ್ಲವೂ, ಹಿರಣ್ಯಕ ಶಿಪುವಿನ ಶಸ್ತಫಾತಗಳು ನೃಸಿಂಹಭಕ್ತನಾದ ಪ್ರಹ್ಲಾದನನ್ನು ಮುಟ್ಟ ದಂತೆ, ಯಾವ ಮಹಾತ್ಮನ ಭುಜಾಶ್ರಯದಿಂದಲೇ ನನ್ನನ್ನು ಸ್ಪರ್ಶಿಸಲಾ ರದೆ ಹೋದುವೋ, ಆ ಕೃಷ್ಣನು ಈಗ ನನ್ನ ಹೃದಯವನ್ನೂ ಎಳೆದುಕೊಂಡು ನನ್ನ ನ್ನು ಬಿಟ್ಟುಹೋದನು. ಸಾಧುಗಳು ಮೋಕ್ಷಾಪೇಕ್ಷೆಯಿಂದ ಯಾವನ ಪಾದಕಮಲಗಳನ್ನು ಭಜಿಸುತ್ತಿರುವರೋ, ಯಾವನು ಆಶ್ರಿತರಿಗಾಗಿ ತ ನನ್ನೇ ಒಪ್ಪಿಬಿಡುವಷ್ಟು ಮಹೋಬಾರಸ್ವಭಾವವುಳ್ಳವನೋ, ಅಂತಹ ಮ ಹ ನನ್ನು ಕುಟ್ಟಿ ತಬುದ್ದಿಯಾದ ನಾನು ನನಗೆ ಬಂಡಿಯಾಳನ್ನಾಗಿ ಸಿಯ ಮಿಸಿದೆನು ಈ ನನ್ನ ಮಹಾಪರಾಧವನ್ನೂ ಮನಸ್ಸಿಗೆ ತಂದುಕೊಳ್ಳದೆ, ಯಾವಪುರುಷೋತ್ತಮನು, ಹಿಂದಿನ ಯುದ್ಧ ಕಾಲದಲ್ಲಿ ನನ್ನ ರಥಾಶ್ವಗಳು ಬಳಲಿ ನಾನು ನೆಲದಮೇಲೆ ನಿಂತಾಗ, ಶತ್ರುವೀರರು ನನ್ನನ್ನು ಹೊಡೆಯದ ಹಾಗೆ ಅವರ ಮನಸ್ಸಿಗೆ ಮೋಹವನ್ನು ಕವಿಸಿ, ನನ್ನನ್ನು ರಕ್ಷಿಸಿದನೋ, ಆಿ ಕೃಷ್ಣನು ಈಗ ನನ್ನ ಹೃದಯವನ್ನ ಪಹರಿಸಿದನು. ಅಣ್ಣಾ! ಪುಣ್ಯಶ್ಲೋಕ ನಾದ ಆ ಶ್ರೀಕೃಷ್ಣನು, ಆಗಾಗ ಮಂದಹಾಸವಿಶಿಷ್ಟಗಳಾದ ಪರಿಹಾಸ ವಾಕ್ಯಗಳನ್ನಾಡುತ್ತ, «ಓ ಪಾರಾ ! ಓ ಅರ್ಜುನಾ ! ಓ ಪ್ರಿಯಸಖಾ ! ಓ ಕುರುನಂದನಾ!” ಎಂದು ಬಾಯಿತುಂಬ ನನ್ನನ್ನು ಕೂಗಿ ಕರೆಯುತಿದ್ದಾಗ,