ಪುಟ:ಶ್ರೀಮದ್ಭಾಗವತವು ಪ್ರಥಮ ದ್ವಿತೀಯ ಸ್ಕಂಧಗಳು.djvu/೧೮೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೧೭೪ ಶ್ರೀಮದ್ಭಾಗವತವು (ಅಧ್ಯಾ, ೧೫, ಬಂಧುಗಳ ಕ್ಷೇಮವನ್ನು ಕೇಳಿದೆಯಲ್ಲವೆ? ಆ ವೃತ್ತಾಂತವನ್ನೂ ತಿಳಿಸಿಬಿಡು ವೆನು ಕೇಳು ! ಈನಡುವೆ ಒಂದಾನೊಂದುದಿನದಲ್ಲಿ,!ಯಾದವವೀರರೆಲ್ಲರೂ ಮೈತಿಳಿಯದೆ, ಕಂಠಪೂರ್ತಿಯಾಗಿ ಮದ್ಯವನ್ನು ಕುಡಿದು, ಪ್ರಜ್ಞೆ ತಪ್ಪಿ, ತಮ್ಮಲ್ಲಿಯೇ ತಾವು ಒಬ್ಬರನ್ನೊಬ್ಬರು ಮುಷ್ಟಿಗಳಿಂದ ಹೊಡೆದಾಡಿ ಸತ್ತರು. ಹೀಗೆ ಯಾದವರು ಮೈತಿಳಿಯಿದೆ ಹೊಡೆದಾಡಿ ಸಾಯುವುದಕ್ಕೆ ಹಿಂದೆ ಅವರಿಗೆ ತಗುಲಿದ ಬ್ರಾಹ್ಮಣಶಾಪವೇ ಕಾರ ಣವು. ಈಗ ಯಾದವರಲ್ಲಿ ನಾಲೈದುಂಬಮಾತ್ರವೇ ಉಳಿದಿರುವರು. ಅಣ್ಣಾ ! ಇವೆಲ್ಲವೂ ಆ ಸರೇಶ್ವರನ ವ್ಯಾಪಾರಗಳಲ್ಲದೆ ಬೇರೆಯಲ್ಲ! ಯಾ ವನ ಸಂಕಲ್ಪದಿಂದ ಸಮಸ್ತಭೂತಗಳೂ ವೃದ್ಧಿ ಹೊಂದುವುವೋ, ಆ ಭಗ ವಂತನ ಸಂಕಲ್ಪದಿಂದಲೇ ಇವೆಲ್ಲವೂ ನತಿಸುವುವು. ಯಾದವಕುಲನಾಶಕ್ಕೂ ಆತನ ಸಂಕಲ್ಪವೇ ಮೂಲವು. ಎಲೈ ರಾಜೇಂದ್ರನೆ ! ಆಷ್ಟೇಕೆ ? ದೊಡ್ಡ ಮೀನು ಸಣ್ಣ ಮೀನುಗಳನ್ನು ಹೇಗೆ ನುಂಗುವುವೋ, ಪ್ರಬಲಜಂತುಗಳುದುರ್ಬ ಲಜಂತುಗಳನ್ನು ಹೇಗೆ ಕೊಂದು ತಿನ್ನು ವುವೋ, ಪ್ರಬಲಜಂತುಗಳೇ ಆಗಾಗ ಒಂದಕ್ಕೊಂದುಹೋರಾಡಿ ಹೇಗೆ ಸಾಯುವುವೋ, ಹಾಗೆಯೇ ಶ್ರೀಕೃಷ್ಣನು, ಮೊದಲು ಬಲಿಷ್ಟವಾದ ಯಾದವರಿಂದ ದುರ್ಬಲರಾದ ಇತರರನ್ನು ಕೊಲ್ಲಿ ಸಿ, ಆಮೇಲೆ ಆ ಯಾದವರ ಕೈಯಿಂದಲೇ ಯಾದವರನ್ನು ಕೊಲ್ಲಿಸಿ, ಭೂ ಭಾರವನ್ನ ಪಹರಿಸಿಬಿಟ್ಟನು. ಆ ಭಗವಂತನ ಉದ್ದೇಶವನ್ನು ಹೀಗೆಂದು ನಿರ್ಣಯಿಸುವುದು ಯಾರಿಗೂ ಸಾಧ್ಯವಲ್ಲ! ಅಣ! ಏನಾದರೇನು? ಹಿಂದೆ ಶ್ರೀಕೃಷ್ಣನು ನನ್ನೊಡನೆ ಕಲೆತಿದ್ದಾಗೆ, ಕಾಲದೇಶಕ್ಕೆ ತಕ್ಕ ಪ್ರಯೋ ಜನಗಳನ್ನು ತೋರಿಸುವಂತೆಯೂ, ಎಂತಹ ಹೃದಯದುಃಖವನ್ನಾದರೂ ಅಡಗಿಸಿ ಆನಂದವನ್ನುಂಟುಮಾಡುವಂತೆಯೂ ಅವನು ನನಗೆ ಉಪ ದೇತಿಸುತಿದ್ದ ವಾಕ್ಯಗಳು, ಈಗಲೂ ನನ್ನ ನೆನಪಿಗೆ ಬಂದಹಾಗೆಲ್ಲಾ ನನ್ನ ಮನಸ್ಸನ್ನು ಸೆಳೆಯುತ್ತಿರುವುವು.” ಎಂದನು. ಅರ್ಜುನನು ತನ್ನಣ್ಣನಾದ ಧರರಾಜನಿಗೆ ಹೀಗೆಂದು ಹೇಳಿ, ಆ ಕೃಷ್ಣನಲ್ಲಿ ತನಗಿದ್ದ ದೃಢವಾದ ಸ್ನೇಹದಿಂದ ಆತನ ಪಾದಕಮಲಗಳನ್ನು ಬಿಡದೆ ಧ್ಯಾನಿಸುತ್ತ, ಸ್ವಲ್ಪ ಕಾಲದವರೆಗೆ ಮೌನದಿಂದಿದ್ದನು. ಈ ಕೃಷ್ಣಧ್ಯಾನದಿಂದಲೇ ಅವನ ಮನ