ಪುಟ:ಶ್ರೀಮದ್ಭಾಗವತವು ಪ್ರಥಮ ದ್ವಿತೀಯ ಸ್ಕಂಧಗಳು.djvu/೨೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಶ್ರೀಮದ್ಭಾಗವತಮಾಹಾತ್ಮವು. ಥಿಗಳಿಂದಲೂ ಲಭ್ಯವಾಗದ ಮಹಾಫಲಗಳೆಲ್ಲವೂ ಈ ಕಲಿಕಾಲದಲ್ಲಿ ಭಗವ ರ್ತನವೊಂದರಿಂದಲೇ ಲಭಿಸುವುವು. ಇತರಸತ್ಕರ್ಮಸಾರವೆಲ್ಲವೂ ಈ ಕಲಿಕಾಲದಲ್ಲಿ ಕೆಟ್ಟು ಹೋಗಿರುವುವು. ಮನೆಮನೆಗಳಲ್ಲಿಯೂ ಬಾಹ್ಮಣರು ಧನಧಾನ್ಯಗಳ ಆಸೆಯಿಂದಲೇ ಪುರಾಣಕಥೆಗಳನ್ನು ಹೇಳಲಾರಂಭಿಸಿರುವರು. ಇದರಿಂದ ಕಥಾಸಾರವೂ ಕೆಟ್ಟು ಹೋಯಿತು. ಕೇವಲ ನಾಸ್ತಿಕರಾದ ಕ್ರೂರ ಕರ್ಮಿಗಳ ಪುಣ್ಯತೀರ್ಥಗಳಲ್ಲಿ ಸೇರಿರುವರು. ಇದರಿಂದ ತೀರ್ಥಸ್ತಾರವು ಕೆಟ್ಟಿತು. ಕೇವಲದುರಾಶಾಗ್ರಸ್ತರಾಗಿ, ಕಾಮಕ್ರೋಧವಶರಾದವರೂ ಡ ತಪೋನಿರತರಾದುದರಿಂದ, ತಪಸ್ಸಿನ ಸಾರವೂ ಕೆಟ್ಟಿತು. ಹೀಗೆಯೇ ಅಪಾ ತ್ರಸಂಬಂಧದಿಂದ ಕಲಿಕಾಲದಲ್ಲಿ ಸತ್ಕರ್ಮಗಳ ಸಾರವೆಲ್ಲವೂ ನಷ್ಟವಾಯಿ ತು, ಇದು ಕಲಿಕಾ ಲದ ಸಹಜಧರ್ಮವಾದುದರಿಂದ, ಈ ಏಷಯದಲ್ಲಿ ಬೇರೆ ಯಾರನ್ನೂ ಅಪರಾಧಿಗಳೆಂದು ಹೇಳುವುದಕ್ಕಿಲ್ಲ. ಇದರಿಂದಲೇ ಪಂಡರೀ ಆಕ್ಷತ್ರಕೂಡ ಸಹಿಸಿಕೊಂಡಿರುವನು” ಎಂದನು. ಇದನ್ನು ಕೇಳಿ ಭಕ್ತಿಯು ನಾವಿದನ ಮಹಾಮಹಿಮೆಯನ್ನು ನೋಡಿ ಆಶ್ಚ ಭರಿತಳಾಗಿ, ಅವನಿಗೆ ನಮ ಸ್ಕರಿಸಿ, ಈ ಕೊರವ ದ ಕಲಿಕಾಲದಲ್ಲಿ ತನ್ನನ್ನು ದರಿಸುವುದಕ್ಕೆ ಉಪಾಯ ದೇವದೆಂದು ಚಿಂತಾಕಲೆಯಾಗಿ ನಿಂತಿದ್ದಳು. ಆಗ ನಾರದನು ತಿರುಗಿ ಆ ಭಕ್ತಿಯನ್ನು ನೋಡಿ ಎಲೆ ಭದ್ರೆ ! ನೀನೇಕೆ ಚಿಂತಿಸುವೆ ? ಶ್ರೀಕೃಷ್ಣನ ಪಾದಕಮಲನ್ನು ಸ್ಮರಿಸುತ್ತಿರು ! ನಿನ್ನ ದುಃಖವು ಸೀಗುವುದು. ಯಾವನು ಪೂರ್ವದಲ್ಲಿ ದಾಪದಿಯ ಮಾವ ಸಂರಕ್ಷಣವನ್ನು ಮಾಡಿದನೋ, ಯಾವನು ಗೋಪಸ್ತ್ರೀಯರನ್ನು ದರಿಸಿದ ನೋ, ಆ ಪರಮಾತ್ಮನು ನಿನ್ನ ಭಾಗಕ್ಕೆ ಇಲ್ಲದೆಹೋಗುವನೇ? ದಯಾಸಮುದ್ರ ನಾದ ಆತನಿಗೆ ನೀನೇ ಪ್ರಾಣಕ್ಕಿಂತಲೂ ಪ್ರಿಯತಮಳು ನೀನು ಮನಃಪೂ ರ್ವಕವಾಗಿ ಒಂದಾವರ್ತಿ ಕರೆದಪಕ್ಷದಲ್ಲಿ, ಆತನು ಕೇವಲ ನೀಚರ ನಿವಾಸಗಳಿ ಗಾದರೂ ಬಂದು ಸೇರದಿರಲಾರನು. ಕೃತ ತ್ರೇತಾ ದ್ವಾಪರಗಳೆಂಬ ಹಿಂದಿನ ಮೂರುಯುಗಗಳಲ್ಲಿಯೂ, ಜ್ಞಾನವೈರಾಗ್ಯಗಳೆರಡೂ ವೆಕ್ಷಸಾಧಕಗಳಾಗಿ ದ್ದುವು. ಈ ಕಲಿಕಾಲದಲ್ಲಿಯೂ ಕೇವಲಭಕ್ತಿಯೊಂದೇ ಬ್ರಹ್ಮಸಾಯುಜ್ಯವ ನುಂಟುಮಾಡತಕ್ಕದು. ಈನಿಶ್ಚಯದಿಂದಲೇ ಸಚ್ಚಿದಾನಂದಸ್ವರೂಪನಾದ