ಪುಟ:ಶ್ರೀಮದ್ಭಾಗವತವು ಪ್ರಥಮ ದ್ವಿತೀಯ ಸ್ಕಂಧಗಳು.djvu/೨೦೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

06 ಆಧ್ಯಾ, ೧೭ || ಪ್ರಥಮ ಸ್ಕಂಧವು. ಅವರಿಗೆ ದೂತನಾಗಿ ನಿಂತು ಕಾರ್ಯವನ್ನು ನಡೆಸುತಿದ್ದನು! ಎಲೈ ರಾಜೇಂ ದ್ರನೆ ! ಈಗ ನೀನು ಈ ನನ್ನ ಕಷ್ಟಕ್ಕೆ ಕಾರಣವೇನೆಂದು ಕೇಳಿದೆಯಲ್ಲವೆ ? ಲೋಕದಲ್ಲಿ ಪ್ರಾಣಿಗಳ ವಿಪತ್ತಿಗೆ ಒಬ್ಬೊಬ್ಬರು ಒಂದೊಂದು ವಿಧವಾದ ಕಾರಣಗಳನ್ನು ಹೇಳುತ್ತಿರುವರು. ಈ ವಾಕ್ಯಭೇದಗಳಿಂದ ನಮಗೆ ಇದೇ ದುಃಖಕಾರಣವೆಂದು ನಿಶ್ಚಯವಾಗಿ ತಿಳಿಯುವುದು ಸಾಧ್ಯವಲ್ಲ. ಆದುದರಿಂದ ನಮಗೆ ಯಾವನಿಂದ ಈ ದುಃಖವು ಪ್ರಾಪ್ತವಾಯಿತೋ ಆ ಪುರುಷನನ್ನು ನಾವು ಕಾಣಲಾರೆವು.ಕೆಲವರು ನಾನಾವಿಧವಿಕಲ್ಪಗಳಿಂದ ದುಃಖಕಾರಣವೇ ನೆಂಬುದನ್ನೂ ಹಿಸಿ, ತನ್ನ ದುಃಖಕ್ಕೆ ಸ್ವಾತ್ಮವೇ ಕಾರಣವೆಂದು ಹೇಳುವರು. ಬೇರೆ ಕೆಲವರು ಅದೃಷ್ಟವು ಕಾರಣವೆನ್ನುವರು. ಮತ್ತೆ ಕೆಲವರು ಪೂರ ಕರ್ಮಗಳೇ ಭುಃಖಕಾರಣವೆನ್ನುವರು. ಇನ್ನು ಕೆಲವರು ಪ್ರಕೃತಿಪರಿಣಾಮ ರೂಪವಾದ ಸ್ವಭಾವವೇ ಕಾರಣವೆಂದು ಹೇಳುವರು ಮತ್ತೂ ಕಲವರು. ಈಶ್ವರನೇ ಕಾರಣವೆಂದು ಹೇಳುವರು. ಇನ್ನು ಕೆಲವರು, ಊಹಿಸುವದ ಕ್ಲಾಗಲಿ, ಬಾಯಿಂದ ಕೇಳುವುದಕ್ಕಾಗಿ ಸಾಧ್ಯವಲ್ಲದ ಒಂದಾನೊಂದು ಕಾರ ಣದಿಂದ ಈ ದುಃಖಗಳುಂಟಾಗುವುವೆಂದು ಹೇಳುವರು. ಇವುಗಳಲ್ಲಿ ಯಾವು * ನಿತ್ಯಯವೆಂಬುದನ್ನು ನಾವು ನಿರ್ಧರಿಸಿ ತಿಳಿಯಲಾರವು. ಅವರವರ ನಂ ಬಿಕೆಯಿದ್ದಂತೆಯೇ ನಿಶ್ಚಯಿಸಿಕೊಳ್ಳಬೇಕಾಗಿದೆ, ಆದುದರಿಂದ ಎಲೈ ರಾಜ ಸೆ! ಈಗ ನಮಗೆ ಸಂಭವಿಸಿರುವ , ಕಷ್ಟಕ್ಕೆ ಕಾರಣವೇನೆಂಬುದನ್ನು ನೀನೇ ನಿನ್ನ ಬುಟ್ಟಿಯಿಂJಲೋಚಿಸಿ ತಿಳಿದುಕೊಂಡು, ತಕ್ಕ ಪ್ರತಿಕ್ರಿಯೆಯನ್ನು ಮಾಡ.” ಎಂದನು. ಈ ಮಾತನ್ನು ಕೇಳಿ ಪರೀಕ್ಷಿದ್ರಾಜನು, ಆ ವಾಕ್ಯದ ಅಭಿಪ್ರಾಯವೇನೆಂಬುದನ್ನು ತನ್ನಲ್ಲಿ ತಾನು ನಿಶ್ಚಲವಾದ ಬುದ್ಧಿಯಿಂದ ಸ್ವಲ್ಪ ಹೊತ್ತಿನವರೆಗೆ ಆಲೋಚಿಸಿ, ಅದರ ಅಭಿಪ್ರಾಯವನ್ನು ತಿಳಿದುಕೊo ಡು, ತನಗಿದ್ದ ಮನೋವ್ಯಥೆಯನ್ನು ಬಿಟ್ಟು, ಸಂತೋಷಯುಕ್ತವಾಗಿ ತಿರುಗಿ ಆ ವೃಷಭವನ್ನು ಕರಿತು ಹೇಳುವನು. ಎಲೆ ವೃಷಭರಾಜನೆ ! ನೀನು ಸಮ ಸ್ವಧರಗಳನ್ನೂ ಬಲ್ಲವನು. ಈ ನಿನ್ನ ಮಾತುಗಳನ್ನು ನೋಡಿದರೆ ವೃಷಭ ರೂಪದಿಂದಿರುವ ಧರ್ಮಪುರುಷನೇ ನೀನೆಂದು ನಿಶ್ಚಿತವಾಗುವುದು. ಸೀನು. ಧರ್ಮಪುರುಷನಾದುದರಿಂದಲೇ ಇಂತಹ ಆಪತ್ತಿನಲ್ಲಿಯೂ ನೀನು ದುಃಖಕಾ