ಪುಟ:ಶ್ರೀಮದ್ಭಾಗವತವು ಪ್ರಥಮ ದ್ವಿತೀಯ ಸ್ಕಂಧಗಳು.djvu/೨೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಶ್ರೀಮದ್ಭಾಗವತಮಾಹಾತ್ಮವು, ಸ್ವಪ್ನದಲ್ಲಿಯೂ ನರಕವೆಂಬುದನ್ನು ಕಾಣಲಾರರು.ಪ್ರೇತವಾಗಲಿ, ಪಿಶಾಚವಾ ಗಲಿ,ರಕ್ಷಸ್ಸಾಗಲಿ,ಭಕ್ತಿಯುಕ್ತವಾದಮನಸ್ಸುಳ್ಳವರನ್ನು ಮುಟ್ಟಿಬದುಕಲಾ ರದು.ಶ್ರೀಮನ್ನಾರಾಯಣನು ಭಕ್ತಿಯಿಂದ ಹೇಗೆ ವಶನಾಗುವನೋ ಹಾಗೆ ತಪಸ್ಸಿನಿಂದಲೂ, ವೇದಾಧ್ಯಯನದಿಂದಲೂ,ಜ್ಞಾನದಿಂದಲೂ, ಸತ್ಯದಿಂ ದಲೂ ಸಾಧ್ಯನಾಗಲಾರನು. ಈ ವಿಷಯದಲ್ಲಿ ಗೋಪಸ್ತಿಯರೇ ಪ್ರಮಾ ಇವು ಇತರಯುಗಗಳಲ್ಲಿ ಮನುಷ್ಯರು ಸಾವಿರಾರು ಜನ್ಮವನ್ನೆತ್ತಿದಮೇಲಲ್ಲದೆ ಅವರಿಗೆ ಭಕ್ತಿಯಲ್ಲಿ ಪ್ರೀತಿಯು ಹುಟ್ಟದು. ಮುಖ್ಯವಾಗಿ ಈ ಕಲಿಕಾಲದಲ್ಲಿ ಭಕ್ತಿಯೇ ಪ್ರಧಾನವು. ಈ ಕಾಲದಲ್ಲಿ ಭಕ್ತಿಯುಹೊರತುಬೇರೆ ಉಪಾಯವಿಲ್ಲ ಭಕ್ತಿಯಿಂದ ಶ್ರೀಕೃಷ್ಣನನ್ನು ಕರೆತಂದು ಕಣ್ಣ ಮುಂದೆ ನಿಲ್ಲಿಸಬಹುದು!ಭಕ್ತಿ ದ್ರೋಹಿಗಳಿಗೆ ಮೂರುಲೋಕದಲ್ಲಿ, ಎಲ್ಲಿದ್ದರೂ ದುಃಖವು ತಪ್ಪಿದುದಲ್ಲ.ಇದ ರಿಂದಲೇ ಪೂತ್ವದಲ್ಲಿ ಭಕ್ತಿನಿಂದಕನಾದದೂರ್ವಾಸನು ಮಹಾದುಃಖಕ್ಕೆ ಸಿ ಕ್ಕಿಬಿದ್ದನು. ಎಷ್ಟೇವ್ರತಗಳನ್ನು ನಡೆಸಿದರೂ, ಎಷ್ಮತೀರ್ಥಯಾತ್ರೆಗಳನ್ನು ನಡೆಸಿದರೂ, ಎಷ್ಮೆ ತಪಸ್ಸುಗಳನ್ನಾಚರಿಸಿದರೂ, ಎಷ್ಟೆಯಾಗಗಳನ್ನು ನಡೆಸಿದರೂ ಇಷ್ಟೊಂದು ಫಲವು ಲಭಿಸಲಾರದು. ಈ ಕಾಲದಲ್ಲಿ ಭಕ್ತಿ ಯೊಂದೇ ಮುಕ್ತಿಪ್ರದವು” ಎಂದನು. ಹೀಗೆ ಭಕ್ತಿಯು ನಾರದನ ಮುಖ ದಿಂದ ತನ್ನ ಮಹಿಮೆಯನ್ನು ಕೇಳಿದಮೇಲೆ, ಅವಳಿಗೆ ಸಂತೋಷದಿಂದ ಮೈ ಯೆಲ್ಲವೂ ಉಬ್ಬಿತು. ಸಂತೋಷಪರವಶಳಾದ ಆಕೆಯು ತಿರುಗಿ ನಾರದ ನನ್ನು ಕುರಿತು. ಆಹಾ! ನಾರದಾ! ನೀನಲ್ಲವೇ ಪರಮಭಾಗ್ಯಶಾಲಿಯು ! ನಿನ ಗೊಬ್ಬನಿಗೇ ನನ್ನಲ್ಲಿ ನಿಶ್ಚಲವಾದ ಪ್ರೀತಿಯು! ನಾನೂ ನಿನ್ನನ್ನು ಎಂದೆಂದಿ ಗೂಬಿಟ್ಟಿರದೆ ನಿನ್ನ ಮನಸ್ಸಿನಲ್ಲಿಯೇ ಸ್ಥಿರವಾಗಿ ನಿಲ್ಲುವೆನು.ಪರಮಕ್ಕಪಾಳು ವಾದ ನಿನ್ನಿಂದಲ್ಲವೇ ನನ್ನ ಮನೋವ್ಯಥೆಯಲ್ಲವೂ ಕ್ಷಣಮಾತ್ರದಲ್ಲಿ ನೀಗಿ ತು. ಆದರೇನು? ಈ ನನ್ನ ಮಕ್ಕಳು ಪ್ರಜ್ಞೆಯಿಲ್ಲದೆ ಬಿದ್ದಿರುವರು. ಹೇಗಾ ದರೂ ಮಾಡಿ ನೀನು ಇವರನ್ನೆಚ್ಚರಿಸಬೇಕು” ಎಂದಳು.ಈಮಾತನ್ನು ಕೇಳಿ ನಾರದನು ದಯಾರ್ರಹೃದಯನಾಗಿ,ಆ ವೃದ್ಧರ ದೇಹಗಳನ್ನು ಕೈಗಳಿಂದ ಸವರುತ್ತ, ಅವರ ಕಿವಿಯಲ್ಲಿ ಮುಖವನ್ನಿಟ್ಟು, ಎಲೆ ಜ್ಞಾನವೈರಾಗ್ಯಗಳಿ ರಾ ! ಚೇತರಿಸಿ ಕೊಳ್ಳಿರಿ”ಎಂದು ಉಚ್ಛ ಧ್ವನಿಯಿಂದ ಕೂಗಿದನು. ಬಾರಿಬಾ