ಪುಟ:ಶ್ರೀಮದ್ಭಾಗವತವು ಪ್ರಥಮ ದ್ವಿತೀಯ ಸ್ಕಂಧಗಳು.djvu/೨೨೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅಧ್ಯಾ, ೧೯.] ಪ್ರಥಮಸ್ಕಂಧವು. ೨೦. ಪಕಾರವನ್ನು ಮಾಡುವುದಕ್ಕೆ ಸಮ್ಮತಿಸರು ? ಧರ್ಮವನ್ನು ಮೀರಿ ಹೋದ ನನ್ನ ಬಾಲನ ವಿಷಯದಲ್ಲಿ ಅವರಾದರೂ ದಯೆಯನ್ನು ತೋರಿಸಲಿ! ಎಂದು ದೈನ್ಯದಿಂದ ಪ್ರಾರ್ಥಿಸಿದನು. ಹೀಗೆ ಶಮಿಕಮಹರ್ಷಿಯು ತನ್ನ ಮಗನ ಕಾರ್ಯಕ್ಕಾಗಿಯೇ ತಾನು ದುಃಖಿಸುತಿದ್ದನೇ ಹೊರತು, ತನ್ನ ವಿಷಯದಲ್ಲಿ ಪರೀಕ್ಷಿದ್ರಾಜನು ಮಾಡಿದ ಅಪರಾಧಕ್ಕಾಗಿ ಸ್ವಲ್ಪವಾದರೂ ಕೋಪವನ್ನಾ ಗಲಿ, ಅಸಮಾಧಾನವನ್ನಾಗಲಿ ತೋರಿಸಲಿಲ್ಲ. ಎಲೈಶೌನಕಾದಿಗಳೆ ! ಇದ ಲ್ಲವೇ ಸಜ್ಜನರ ಸ್ವಭಾವವು!ಸುರುಷರ ಮನಸ್ಸು ಎಂತಹ ಸ್ಥಿತಿಯಲ್ಲಿಯೂ ರಾಗದ್ವೇಷಾದಿಗಳಿಗೆ ಅವಕಾಶವನ್ನು ಕೊಡುವುದಿಲ್ಲ. ಇದರಿಂದ ಸಾಧುಗಳು ತಮಗೆ ಸುಖವುಂಟಾದಾಗ ಸಂತೋಷವನ್ನಾಗಲಿ, ದುಃಖವುಂಟಾದಾಗ ವ್ಯ ಥೆಯನ್ನಾಗಲಿ ಹೊಂದುವವರಲ್ಲ. ಇದು ಹದಿನೆಂಟನೆಯ ಅಧ್ಯಾಯವು. w+ ಪರೀಕಿನ್ನಹ ರಾಜನು ಚಿಂತಾಕುಲನಾಗಿ ದುಃಖಿಸಿದುದು. ++ ಇತ್ತಲಾಗಿ ಪರಿಕ್ಷಿನ್ಮಹಾರಾಜನು ಪಟ್ಟಣವನ್ನು ಪ್ರವೇಶಿಸಿದಮೇಲೆ ತಾನು ಮಾಡಿಬಂದ ಕಾಠ್ಯಕ್ಕಾಗಿ ಪಶ್ಚಾತ್ತಾಪಗೊಂಡು ದುಃಖಿಸುತ್ತ, ತನ್ನ ನ್ನು ತಾನೇ ನಿಂದಿಸಿಕೊಳ್ಳುತಿದ್ದನು. ಹೀಗೆ ಚಿಂತಾಕುಲನಾದರಾಜನು ತನ್ನ ಲ್ಲಿ ತಾನು “ಅಯ್ಯೋ ! ಕೇವಲಶಾಂತನಾಗಿ, ತನ್ನ ತೇಜಸ್ಸನ್ನು ಗೂಢವಾ ಗಿಟ್ಟುಕೊಂಡು ಸಮಾಧಿಯನ್ನು ಹಿಡಿದಿದ್ದ ನಿರಪರಾಧಿಯಾದ ಆ ಮಹರ್ಷಿ ಯಕಂಠದಲ್ಲಿ ನಿಷ್ಕಾರಣವಾಗಿ ಸತ್ತಹಾವನ್ನು ಸಿಕ್ಕಿಸಿ ಅವಮಾನಪಡಿಸಿ ಬಂ ದೆನಲ್ಲಾ! ಅಕಟಾ ! ನನಗೇಕೆ ಈ ದುರ್ಬುದ್ಧಿಯು ಹುಟ್ಟಿತು ! ಈ ಆಕೃತ್ಯ ದಿಂದ ನನಗೆ ಮಹಾಪಾತಕವು ಸಂಭವಿಸದೆ ಬಿಡದು. ಇದರಿಂದ ನಾನು ಆ ಬ್ರಾಹ್ಮಣನನ್ನು ಮಾತ್ರವೇ ಅವಮಾನಪಡಿಸಿದಂತಾಗಲಿಲ್ಲ. ಸಾಕ್ಷಾತ್ ಭಗ ವಂತನನ್ನೇ ಅವಮಾನಪಡಿಸಿಬಂದತಾಯಿತು. ಇದರಿಂದ ನನಗೆ ಶೀಘ್ನು ಫ್ಲದಯೇ ಮಹಾವಿಪತ್ತು ಬಂದೊದಗದಿರದು. ಆದರೇನು ? ಪಾಪಿಯಾದ ನನಗೆ ಪ್ರಾಯಶ್ಚಿತ್ತರೂಪವಾಗಿ ಆ ದುಃಖವು ಬಂದೇ ತೀರಬೇಕು ! ಅದು ನನಗೆ ಹಿತವಲ್ಲದೆ ಬೇರೆಯಲ್ಲ.ಅದರಿಂದಲೇ ನನಗೆ ಪಾಪಶುದ್ಧಿಯಾಗಿ, ಇನ್ನು ಮೇಲೆಯಾದರೂ ಇಂತಹ ಪಾಪಕಾರಗಳಿಗೆ ನನ್ನ ಬುದ್ಧಿಯು ಪ್ರವರ್ತಿಸ