ಪುಟ:ಶ್ರೀಮದ್ಭಾಗವತವು ಪ್ರಥಮ ದ್ವಿತೀಯ ಸ್ಕಂಧಗಳು.djvu/೨೨೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೨೦೪ ಶ್ರೀಮದ್ಭಾಗವತವು [ಅಧ್ಯಾ, ೧೯. ದಂತಾಗುವುದರಿಂದ, ಯಾವ ವಿಪತ್ತು ಬಂದರೂ ಬರಲಿ! ಕುಪಿತನಾದ ಆ ಮಹರ್ಷಿಯ ಶಾಪವೆಂಬ ಕಾಲಾಗ್ನಿ ಯು ಈಗಲೇ ನನ್ನ ಕುಲವನ್ನೂ , ನನ್ನ ರಾಜ್ಯವನ್ನೂ , ನನ್ನ ಧನವನ್ನೂ ದಹಿಸಿದರೂ ದಹಿಸಲಿ! ಇದರಿಂದಲಾದರೂ ನನ್ನ ಬುದ್ಧಿಯು ತಿರುಗಿ ಗೋಬ್ರಾಹ್ಮಣರಿಗೂ, ದೇವತೆಗಳಿಗೂ ಅಪಕಾರವನ್ನು ಮಾಡುವುದರಲ್ಲಿ ಪ್ರವರ್ತಿಸದಿರಲಿ!” ಎಂದು ಮನಸ್ಸಿನಲ್ಲಿ ಚಿಂತಿಸುತ್ತಿದ್ದನು. ಇಷ್ಟರಲ್ಲಿ ಆತನಿಗೆ ಆ ಮಹರ್ಷಿಯ ಶಾಪದಿಂದ ಏಳನೆಯ ದಿನದಲ್ಲಿ ತಕ್ಷಕನ ವಿಷಾಗ್ನಿ ಯಿಂದ ಮರಣವು ಪ್ರಾಪ್ತವಾಗುವುದೆಂಬ ಸಂಗತಿಯು ತಿಳಿದುಬಂ ಡಿತು. ಇದನ್ನು ಕೇಳಿಯಕೂಡ ಪರೀಕ್ಷಿದ್ರಾಜನು ವಿಷಯಾಸಕ್ತನಾದ ತನಗೆ ಈ ವಿಪತ್ತೆ ವಿರಕ್ತಿಕಾರಣವಾಗುವುದೆಂದು ಸಂತೋಷಿಸುತ್ತಲೇ ಇದ್ದನು. ಇದನ್ನೇ ಮನಸ್ಸಿನಲ್ಲಿಟ್ಟುಕೊಂಡು ಪರೀಕ್ಷಿದ್ರಾಜನು ಇಹಲೋಕ ಸುಖವಾಗಲಿ, ಸ್ವರ್ಗಸುಖವಾಗಲಿ, ಆಶಾಶ್ವತಗಳೆಂದು ನಿಶ್ಚಯಿಸಿಕೊಂಡು, ಆಗಲೇ ತನ್ನ ರಾಜ್ಯವನ್ನು ಬಿಟ್ಟು ಶ್ರೀಹರಿಯ ಪಾದಭಜನವೊಂದೇ ಸಿರತಿಶ ಯಪುರುಷಾರ್ಥಕ್ಕೆ ಸಾಧನವೆಂದು ನಿರ್ಧರಿಸಿ ಹೊರಟುಬಿಟ್ಟನು. ರಾಜ್ಯವನ್ನು ಬಿಡನೆ ನೆಟ್ಟಗೆ ಗಂಗಾತೀರಕ್ಕೆ ಹೋದನು. ತುಲಸೀಮಿಶ್ರವಾದ ಶ್ರೀ ವಿಷ್ಣುಪಾದಧೂಳಿಯಿಂದ ಪ್ರಶಸ್ತವಾದ ಜಲಪ್ರವಾಹವುಳ್ಳದಾಗಿ, ಲೋಕ ಪಾಲಕರು ಮೊದಲುಗೊಂಡು ಸಮಸ್ತ ಜಗತ್ತನ್ನೂ ಪಾವನಮಾಡತಕ್ಕ ಗಂ ಗಾನದಿಯ ತೀರಕ್ಕೆ ಹೋಗಿ, ಅಲ್ಲಿ ಪ್ರಾಯೋಪವೇಶವನ್ನು ಮಾಡಬೇಕೆಂ ದು ನಿಶ್ಚಯಿಸಿಬಿಟ್ಟನು. ಇದೇ ಮೋಕ್ಷಸಾಧನವೆಂದೂ ತಿಳಿದು, ತನ್ನ ದೇಹ ದಲ್ಲಿಯೂ, ದೇಹಸಂಬಂಧಿಗಳಲ್ಲಿಯೂ ಅಭಿಲಾಷೆಯನ್ನು ಬಿಟ್ಟು, ಬೇರೆಯಾವ ವಸ್ತುಗಳಲ್ಲಿಯೂ ಮನಸ್ಸನ್ನಿ ಡದೆ, ಕೇವಲಮೌನದಿಂದ ಶ್ರೀಕೃಷ್ಣನ ಪಾ ದಾರವಿಂದಗಳನ್ನು ಧ್ಯಾನಿಸುತ್ತಿದ್ದನು. ಇಷ್ಟರಲ್ಲಿ, ತೀರ್ಥಯಾತ್ರೆಯೆಂಬ ನೆವ ದಿಂದ ಅನೇಕಪುಣ್ಯತೀರ್ಥಗಳಿಗೂ ತಮ್ಮ ಸಂಬಂಧದಿಂದ ಪವಿತ್ರತೆಯನ್ನುಂಟು ಮಾಡತಕ್ಕ ಎಷ್ಟೋ ಮಂದಿ ಮಹರ್ಷಿಶ್ರೇಷ್ಠರು ತಮ್ಮ ತಮ್ಮ ಶಿಷ್ಯರೊಡ ಗೂಡಿ ಆ ಸ್ಥಳಕ್ಕೆ ಬಂದು ಸೇರಿದರು. ಅತ್ರಿಮುನಿ, ವಸಿಷ್ಠರು, ಚ್ಯವನರು, ಶರದ್ವಂತರು, ಅರಿಷ್ಟನೇಮಿ, ಭ್ರಗು, ಆಂಗಿರಸ್ಸು, ಪರಾಶರರು, ಮುಂತಾ ದ ಮುನಿಶ್ರೇಷ್ಠರೆಲ್ಲರೂ ಬಂದರು. ಹಾಗೆಯೇ ವಿಶ್ವಾಮಿತ್ರರು, ಪರಶುರಾ