ಪುಟ:ಶ್ರೀಮದ್ಭಾಗವತವು ಪ್ರಥಮ ದ್ವಿತೀಯ ಸ್ಕಂಧಗಳು.djvu/೨೩೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೨೧f ಅಧ್ಯಾ, ೨.] ದ್ವಿತೀಯಸ್ಕಂಧವು. ಮತ್ತು, ಆ ಸ್ಪಷ್ಟ ಕಾಲದಲ್ಲಿ ಮಾತ್ರವೇ ಇದ್ದು ನಾಶಹೊಂದತಕ್ಕವುಗ ಳಾದ ಪದಾರ್ಥಗಳೊಡನೆ : ಸೇರಿ, ರಾಜ್ಯಾಭೀಕ, ಶಿರಚ್ಛೇದ ಮೊದ ಲಾದ ಸುಖದುಃಖಗಳನ್ನನುಭವಿಸುವಂತೆ, ಭಗವಂತನೂಕೂಡ ಪ್ರತ್ಯಕ್ಷಾನು ಮಾನಗಳೇ ಮೊದಲಾದ ಸರ್ವವಿಧಜ್ಞಾನಗಳಿಂದಲೂ ಅನುಭವಿಸಲ್ಪಡುವ ಎಲ್ಲಾ ವಸ್ತುಗಳಲ್ಲಿಯೂ ನೆಲಸಿರುವನು. ಹೀಗೆ ಸರ್ವಶರೀರನಾಗಿದ್ದರೂ, ಆ ಶರೀರಗತವಾದ ದೋಷಗಳನ್ನು ಹೊಂದದೆ,*ನಿರ್ವಿಕಾರನಾಗಿ, ಆನಂದಾ ಶ್ರಯನಾಗಿಯೂ ಆನಂದಸ್ವರೂಪನಾಗಿಯೂಇರುವನು,ಇಂತಹ ಭಗವಂ ತನನ್ನು ಮಾತ್ರ ಉಪಾಸನೆಮಾಡಬೇಕಹೊರತು, ಈ ಬ್ರಹ್ಮಕ್ಕಿಂತಲೂ ಬೇರೆಯಾದ ಸ್ವತಂತ್ರವಸ್ತುವೊಂದನ್ನು ಕಲ್ಪಿಸಿ, ಅದರಲ್ಲಿ ಆಸಕ್ತಿಯಿಡು ವವನಿಗೆ,ಸಂಸಾರರೂಪವಾದ ಅಧೋಗತಿಯು ಎಂದಿದ್ದರೂ ತಪ್ಪದು.ಇಲ್ಲಿ ಗೆ ಮೊದಲನೆಯ ಅಧ್ಯಾಯವು. ( ಭಕ್ತಿಯೋಗದ ಮಹಿಮೆ. ಧೂಮಾದ್ಯರ್ಚಿರಾದಿಗತಿ | . ಗಳ ವಿವರಣವು. ಎಲೈ ಪರೀಕ್ಷಿದ್ರಾಜನೇ ಕೇಳು ! #ಸೃಷ್ಟಿಗೆ ಮೊದಲು ಬ್ರಹ್ಮದೇವ ನೂಕೂಡ ಹಿಂದೆ ಹೇಳಿದ ಧಾರಣಾ ಯೋಗದಿಂದಲೇ ಭಗವಂತನನ್ನು ಸಂ

  • ಇಲ್ಲಿ ಸ್ವರೂಪದಿಂದಲೂ, ಗುಣಗಳಿಂದಲೂ ನಿರಿಕಾರನೆಂಬುದರಿಂದ ಅಚಿ ತ್ರಿಗೆ ವ್ಯಾವೃತ್ತಿಯು ಸೂಚಿತವಾಗುವುದು.

+ ಇಲ್ಲಿ ಭಗವಂತನು ಆನಂದಾಶ್ರಯನೆಂದೂ, ಆನಂದರೂಪನೆಂದೂ ಹೇಳಿ ರುವುದರಿಂದ ಜೀವಾತ್ಮನಿಗೆ ವ್ಯಾವೃತ್ತಿಯು ಸೂಚಿತವಾಗುವುದು. + ಇಲ್ಲಿ “ ನಷ್ಟಾಂ ಸ್ಮತಿಂ ಪ್ರವರುಧ್ಯ” ಎಂದು ಮೂಲವು. ಇದರಿಂದ ಪೂರೈಕಲ್ಪದಲ್ಲಿದ್ದ ಚತುರುಬನೇ ಪ್ರತಿಮಹಾಕಲ್ಪದಲ್ಲಿಯೂ ಇದ್ದು, ಹಿಂದೆ ನಷ್ಟವಾ ಗಿದ್ದ ಸೃಷ್ಟಿ ವಿಷಯಕಜ್ಞಾನವನ್ನು ಪುನಃ ಪುನಃ ಪಡೆದು ಸೃಷ್ಟಿಕಾರವನ್ನು ನಡೆಸುವ ಹಾಗೆ ಅರವಾಗುವುದು.ಹಾಗಿದ್ದರೂ ಪ್ರತಿಕಲ್ಪದಲ್ಲಿಯೂ ಬೇರೆಬೇರೆ ಚತುರು ಖನಿರ ಬೇಕೆಂದು ಭೇದವನ್ನೊ ಓವುದೇ ನ್ಯಾಯ್ಯವೆಂದು ತೋರುವುದು, “ಬ್ರಹ್ಮಣಾ ಸಹ ತೇ ಸರೈ ಸಂಪ್ರಾಪ್ತ ಪ್ರತಿಸಂಚರೇ” ಶ್ರೀ ಬ್ರಹ್ಮಲೋಕೇತು ಪರಾಂತಕಾಲೇ ಪರಾ ಮೃತಾತ್ಪರಿಮುಚ್ಯ೦ತಿ ಸರೋ” ಇತ್ಯಾದಿಪ್ರಮಾಣಗಳಿಂದ ಆಯಾಕಲ್ಪದಲ್ಲಿದ್ದ ಚತು