ಪುಟ:ಶ್ರೀಮದ್ಭಾಗವತವು ಪ್ರಥಮ ದ್ವಿತೀಯ ಸ್ಕಂಧಗಳು.djvu/೨೪೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೨೨೨ ಶ್ರೀಮದ್ಭಾಗವತವು [ಅಧ್ಯಾ, ೨. ಆದುದರಿಂದಲೇ ವೇದಗಳು ಈ ಮೂವರಿಗೂ ಬೇಕಾದ ಫಲೋಪಾಯಗಳ ನ್ನು ತಿಳಿಸುತ್ತಿರುವುವು. ಆದರೇನು ! ಬುದ್ದಿಶಾಲಿಯಾದವನು ಮೋಕ್ಷಾಪೇಕ್ಷೆ ಯುಳ್ಳ ಕೇವಲಸಾತ್ವಿಕನಿಗೆ ಈ ಕರ್ಮಗಳೆಲ್ಲವೂ ಪರಿತ್ಯಾಜ್ಯಗಳೆಂಬುದನ್ನೂ, ಒಂದುವೇಳೆ ಆ ಕರ್ಮಗಳನ್ನು ನಡೆಸಿದರೂ ಅವುಗಳಿಗೆ ಮೋಕ್ಷವೊಂದೇ ಫಲವೆಂಬ ಭಾವದಿಂದ ಅನುಮಿಸಬೇಕೆಂಬುದನ್ನೂ ತನ್ನ ವಿವೇಕಜ್ಞಾನ ದಿಂದ ತಾನೇ ನಿಶ್ಚಯಿಸಿಕೊಳ್ಳಬೇಕು. ಸ್ವರ್ಗಾದಿಗಳೆಲ್ಲವೂ ಆಶಾಶ್ವತಗ ಳಾದ ಅಲ್ಪ ಸುಖಗಳೆಂಬುದನ್ನೂ ತಿಳಿದು, ಎಚ್ಚರತಪ್ಪದೆ ಆ ಮೋಕ್ಷಸಾ ಧನೆಗಾಗಿಯೇ ಪ್ರಯತ್ನಿಸಬೇಕು. ವೇದಗಳಲ್ಲಿ ನಾನಾವಿಧಫಲಗಳೂ ಆದ ಕ್ಕೆ ಸಾಧನಗಳಾಗಿ ಅನೇಕಕರ್ಮಗಳೂ ಹೇಳಲ್ಪಟ್ಟಿದ್ದರೂ, ತನ್ನ ದೇಹ ಥಾರಣೆಗೆ ಬೇಕಾಗುವ ಭೋಗ್ಯವಸ್ತುಗಳನ್ನು ಮಾತ್ರವೇ ಪರಿಗ್ರಹಿಸಿ, ಉಳಿದುವುಗಳನ್ನು ನಿಸ್ಸಾರಗಳಂದು ತ್ಯಜಿಸಬೇಕು. ಆದರೆ ದೇಹಧಾರಣ ಕ್ಯಾಗಿಯಾದರೂ ಕ್ಷುದ್ರಫಲಗಳಲ್ಲಿ ಪ್ರಯತ್ನಿ ಸಬೇಕಾಗುವುದಲ್ಲವೆ ? ” ಎಂ ದರೆ, ಈ ದೇಹಧಾರಣಕ್ಕೆ ಬೇಕಾದ ಕೋರಿಕೆಗಳೂಕೂಡ, ಪೂರ್ವಕರ್ಮಾ ನುರೂಪವಾಗಿಯೋ, ಅಥವಾ ಬೇರೆ ಯಾವವಿಥದಿಂದಲೋ ಸಿದ್ದಿಸುವಪಕ್ಷ ದಲ್ಲಿ ಅದನ್ನು ಮತ್ತೊಂದುವಿಧದಿಂದ ಸಾಧಿಸುವುದಕ್ಕಾಗಿ ಪ್ರಯತ್ನಿ ಸು ವುದೂ ವೃಧಾಶ್ರಮವೆಂಬುದನ್ನು ತಿಳಿದು, ಆ ಪ್ರಯತ್ನವನ್ನು ಬಿಟ್ಟುಬಿಡು ವುದೇ ಮೇಲು. ನಾವು ಎಷ್ಟೆಷ್ಟೇ ಶ್ರಮಪಟ್ಟರೂ ನಮಗೆ ಲಭ್ಯವಾದುದೆ ಷೋ ಅಷ್ಮೆಸಿಕ್ಕುವುದು. ನಮಗೆ ಕೇವಶ್ರಮವೊಂದೇ ಫಲವಾಗುವುದು ಎಲೈ ರಾಜನೆ ! ಈ ದೇಹಧಾರಣೆಗೆ ಬೇಕಾದ ಪರಿಕರಗಳು ಪ್ರಯತ್ನ ವಿಲ್ಲದೆ ಹೇಗೆ ಲಭಿಸುವುದೆಂದು ನೀವು ಕೇಳಬಹುದು. ಆ ವಿಷಯವನ್ನೂ ತಿಳಿಸು ವೆನು ಕೇಳು ! ಮಲಗುವುದಕ್ಕೆ ವಿಶಾಲವಾದ ಈ ಭೂಮಿಯು ಸರ್ವಸುಲಭ ವಾಗಿರುವಾಗ ಸುಪ್ಪತಿಗೆ, ಮಂಚ, ಮೊದಲಾದ ಸಾಧನಗಳನ್ನು ಹುಡುಕುವು ದೇಕೆ? ತನ್ನ ತಲೆದೆಸೆಗೆ ತನ್ನೊಡನೆ ಸಹಜವಾಗಿ ಹುಟ್ಟಿರುವ ತೋಳುಗಳಿರು ವಾಗ, ದಿಂಬುಗಳನ್ನು ಹುಡುಕುವುದಕ್ಕಾಗಿ ಪ್ರಯತ್ನಿಸುವುದೇಕೆ?ಆಹಾರವ ನ್ನಿಟ್ಟುಕೊಂಡು ತಿನ್ನುವುದಕ್ಕೆ ತಮ್ಮ ತಮ್ಮ ಕೈಬೊಗಸೆಗಳಿರುವಾಗ, ಬೇರೆ ಬೇರೆ ಬಗೆಯ ಭೋಜನಪಾತ್ರಗಳನ್ನು ಸಂಗ್ರಹಿಸಿಡುವ ಪ್ರಯತ್ನವೇಕೆ ?