ಪುಟ:ಶ್ರೀಮದ್ಭಾಗವತವು ಪ್ರಥಮ ದ್ವಿತೀಯ ಸ್ಕಂಧಗಳು.djvu/೨೪೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅಧ್ಯಾ, ೨.] ದ್ವಿತೀಯಸ್ಕಂಧವು. ೨೨೩ ದಿಕ್ಕುಗಳೇ ನಮಗೆ ಮೇಲುಬಟ್ಟೆಯಂತಿರುವಾಗ, ಬೆಲೆಯುಳ್ಳ ಪಟ್ಟಿ ಮಡಿಗಳ ನೈ ಸಂಗ್ರಹಿಸಬೇಕೆಂಬ ಚಂತೆಯೇಕೆ ? ದಾರಿಯಲ್ಲಿ ಬಿದ್ದ ಒಂದೆರಡು ಹರು ಕುಬಟ್ಟೆಗಳನ್ನು ಕೌಪೀನವಾಗಿ ಕಟ್ಟಿಕೊಂಡು ಕಾಲವನ್ನು ಕಳೆಯಬಾರದೇಕೆ? ಎಲೈ ಪರೀಕ್ಷಿದ್ರಾಜನೆ ! ನಮ್ಮ ಉದರಭರಣಕ್ಕಾಗಿಯೂ ನಾವು ಶ್ರಮಪಡ ಬೇಕಾದುದಿಲ್ಲ. ವೃಕ್ಷಗಳೆಲ್ಲವೂ ಇತರರ ಪೋಷಣೆಗಾಗಿಯೂ ಫಲವನ್ನು ಬಿ ಡುವುವಲ್ಲವೆ ? ಆ ಫಲವನ್ನೇ ತಿಂದು ನಾವೇಕೆ ಜೀವಿಸಬಾರದು. ಲೋಕದ ಕ್ಲಿರುವ ನರಗಳೆಲ್ಲವೂ ಒಣಗಿ ಹೋಗಿವೆಯೆ? ಇಲ್ಲವಷ್ಟೆ? ಆ ನದೀಜಲವನ್ನೇ ಕುಡಿದು ನಾವೇಕೆ ತೃಪ್ತರಾಗಬಾರದು ? ನಾವು ವಾಸ ಮಾಡುವುದಕ್ಕಾಗಿ ಪತಗುಹೆಗಳ ಬಾಗಿಲನ್ನು ತಡೆದು ನಿಲ್ಲುವವರೊಬ್ಬರೂ ಇಲ್ಲವ ಹೈ ? ಅಂತಹ ಸ್ವತಗುಹೆಗಳಲ್ಲಿಯೇ ನಾವೇಕೆ ವಾಸಮಾಡಬಾರದು ? ರಾಜೇಂದ್ರಾ ? ಒಂದುವೇಳೆ ಇವೆಲ್ಲವೂ ಕಾಲವಶದಿಂದ ದುರ್ಲಭವಾದರೂ, ಶುಣಾಗತರಕ್ಷಣೆಗಾಗಿ ದೀಕ್ಷೆಯನ್ನು ವಹಿಸಿರುವ ಆ ಭಗವಂತನೊಬ್ಬನಿಲ್ಲವೆ? ಹೀಗಿರುವಾಗ ಧನಮದದಿಂದಲೂ, ಅಧಿಕಾರಮದದಿಂದಲೂ ಕೊಬ್ಬಿ, ಹಿಂದು ಮುಂದುತಿಳಿಯದೆ ಉನ್ಮಾರ್ಗದಲ್ಲಿ ವರ್ತಿಸುತ್ತಿರುವ ತುಚ್ಛಜನರನ್ನು ಸೇವಿ ಸಿ ಬದುಕಬೇಕೆಂಬುದು ಕೇವಲಮೌಡ್ಯವಲ್ಲವೆ ? ನಮಗೆ ಬೇಕಾದ ವಸ್ತುಗ ಳು ಹೇಗೋ ಒಂದುವಿಧದಿಂದ ನಮಗೆ ಸಿಕ್ಕ ಬಹುವಾಗಿರುವಾಗ, ಅವುಗಳಿಗಾ ಗಿ ನಾವು ಚಿಂತಿಸಿ ಶ್ರಮಪಡುವುದುಚಿತವೆ ? ಇವುಗಳಲ್ಲಿ ವಿರಕ್ತನಾಗಿ ಭಗ ವಂತನನ್ನು ಭಜಿಸಬೇಕಾದುದೇ ನಮ್ಮ ಕೃತ್ಯವು ಆತನನ್ನು ಭಜಿಸಿದಪಕ್ಷದಲ್ಲಿ ಸಂಸಾರಬಂಧಕ್ಕೆ ಕಾರಣವಾದ ಅವಿದ್ಯೆಯೆಂಬುದು ಬಿಟ್ಟು ಹೋಗುವುದು. ಭಗವಂತನೇ ಜೀವಾತ್ಮಗಳಲ್ಲಿ ಪ್ರವೇಶಿಸಿ ಅವುಗಳಿಗೆ ಧಾರಕನಾಗಿರುವನು,

  • ಇಲ್ಲಿ ದಿಗ್ನಲ್ಮಲಾದ್ ಸತಿ ಕಿಂ ದುಕೂಲೈ” ಎಂದು ಮೂಲತ, ಈ ವಾ ಕದಿಂದ ದುಕೂಲಗಳನ್ನು ಬಿಟ್ಟು ದಿಗಂಬರನಾಗಿರಬೇಕೆಂಬ ಅರವು ತೋರುತ್ತಿದೆ ರೂ,ಹಾಗೆ ಗ್ರಹಿಸಬಾರದು. ಇಲ್ಲಿ ವಲ್ಕಲಶಬ್ದಕ್ಕೆ ಉತ್ತರೀಯಮಾತ್ರವೆಂದೇ ಗ್ರಹಿಸ ಬೇಕಾದುದುಚಿತವು. ಏಕೆಂದರೆ, 'ಅಪವಿತ್ರಕಗೊ ನಗ್ನ” ಎಂಬ ಸ್ಮೃತಿವಾಕ್ಯ ದಿಂದ ಮುಮುಕ್ಷುವಾದವನು ನಗ್ನನಾಗಿದ್ದ ಪಕ್ಷದಲ್ಲಿ, ಕಲ್ಯಾರ್ಹತೆಯಿಲ್ಲದೆ ಅಪವಿತ್ರ ನೆನಿಸುವನು. ಆದುದರಿಂದ ಇಲ್ಲಿ ಕೇವಲನಗ್ನತ್ಯವನ್ನು ಹೇಳಬಾರದು. .