ಪುಟ:ಶ್ರೀಮದ್ಭಾಗವತವು ಪ್ರಥಮ ದ್ವಿತೀಯ ಸ್ಕಂಧಗಳು.djvu/೨೪೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೨೩o ಶ್ರೀಮದ್ಭಾಗವತವು [ಅಧ್ಯಾ, ೨. ಥೆಯಾಗಲಿ ಯಾವುದೆಂದೂ ಇರುವುದಿಲ್ಲ. ಈ ಸ್ಥಾನವು ಯಾವಾಗಲೂ ಅನೇಕಯೋಗೀಶ್ವರರಿಂದೊಪ್ಪತ್ತಿರುವ ದಿವ್ಯವಿಮಾನಗಳಿಂದ ಶೋಭಿತವಾ ಗಿರುವುದು. ಆದರೆ ಅಲ್ಲಿನವರು ಈ ಪ್ರತ್ಯಕ್ಷಪ್ರಪಂಚಕ್ಕಿಂತಲೂ ವಿಲಕ್ಷಣ ವಾದ ಪರಬ್ರಹ್ಮಸ್ವರೂಪವನ್ನು ಬಲ್ಲವರಾದರೂ, ಅವರಿಗೆ ತಾವು ನಡೆಸಿದ ಕರಬಂಧದ ಮೂಲಕವಾಗಿ, ತಮಗೆ ಅಪಾರದುಃಖಕಾರಣವಾದ ಸಂಸಾರ ವು ತಿರುಗಿ ಸಂಭವಿಸಬಹುದೆಂಬ ಭಯವೊಂದುಮಾತ್ರ ಮನಸ್ಸನ್ನು ಆಗಾಗ ಕಳವಳಹೊಂದಿಸುತ್ತಿರುವುದು. ಈ ನ್ಯೂನತೆಯನ್ನು ನೋಡಿ ಅಲ್ಲಿಯೂ ನಿಲ್ಲ ದೆ ಮುಂದೆ ಹೊರಡುವನು, ಪೃಥಿವಿ, ಅಪ್ಪ, ತೇಜಸ್ಸು, ವಾಯು, ಆಕಾಶ, ಮಹತ, ಅಹಂಕಾರಗಳೆಂಬ ಏಳುಬಗೆಯ ಆವರಣಗಳುಂಟು. ಆದುದರಿಂದ ಚತುರುಖಲೋಕದಿಂದ ಪರಮಪದಕ್ಕೆ ಹೋಗಲುದ್ದೇಶಿಸಿದವನು, ಅಸ್ಲಿಂ ದ ಹೊರಟಕೂಡಲೆ ಪೃಥಿವೀಯಮವಾದ ಆವರಣವನ್ನು ಪ್ರವೇಶಿಸಿ ಅಲ್ಲಿ ನಿರ್ಭಯನಾಗಿರುತ್ತಿದ್ದು, ಅದೇಸ್ವರೂಪದೊಡನೆ ಆ ಆವರಣವನ್ನೂ ದಾಟಿ, ಜಲಾವರಣವನ್ನು ಹೊಂದುವನು. ಅದರಿಂದಾಚೆಗೆ ಆವರಣಗ್ರಿ ಯನ್ನ ಹೊಂದಿ, ಅಗ್ನಿ ಸ್ವರೂಪನಾಗಿ, ಅಲ್ಲಿ ತನಗೆ ಅಗ್ನಿ ಸಂಬಂಧವಾದ ಉರಿ, ಬೇಗೆ, ಮುಂತಾದ ಬಾಧೆಯೊಂದೂ ತೋರದುದರಿಂದ, ಆತುರವಿಲ್ಲದೆ ಮೆಲ್ಲಗೆ ಆದ ತಿಕ್ರಮಿಸಿ ಹೋಗಿ ಆವರಣವಾಯುವನ್ನು ಸೇರುವನು. ವಾಯುಸ್ತರೂಪ ದಿಂದ ಅದನ್ನೂ ದಾಟಿದಮೇಲೆ, ಹಿಂದೆ ಹೇಳಿದ ವಾಯು ಮೊದಲಾದ ಎ ಲ್ಲಾ ಭೂತಗಳಿಗೂ ಉತ್ಪತ್ತಿ ಕಾರಣವಾಗಿ, ಅವೆಲ್ಲಕ್ಕಿಂತಲೂ ದೊಡ್ಡದಾಗಿ, ಶಬ್ದವೆಂಬ ಅಸಾಧಾರಣಗುಣವುಳ್ಳ ಆವರಣಾಕಾಶವನ್ನು ಸೇರುವನು, ಎಲೈ ರಾಜನೆ!ಮುಮುಕ್ಷುವಾದವನು ಹೀಗೆ ತನ್ನ ಸೂಕ್ಷ್ಮದೇಹದಲ್ಲಿರುವ ಇಂದ್ರಿಯ ಗಳಿಂದ, ಆಯಾಭೂತಗಳಲ್ಲಿರುವ ಗುಣಗಳನ್ನು ಗ್ರಹಿಸುತ್ತ ಹೋಗುವನು. ಫಣೇಂದ್ರಿಯದಿಂದ ಭೂಮಾವರಣಗುಣವಾದ ಗಂಧವನ್ನೂ , ಜಿ ಹೇಂದ್ರಿಯದಿಂದ ಜಲಾವರಣದಲ್ಲಿರುವ ರಸವನ್ನೂ , ನೇತೇಂದ್ರಿಯದಿಂದ ಅಗ್ನಿ ಗತವಾದ ರೂಪವನ್ನೂ, ತೂಗಿಂದ್ರಿಯದಿಂದ ವಾಯುಗತವಾದ ಸ್ಪರ್ಶ ವನ್ನೂ, ಶ್ರವಣೇಂದ್ರಿಯದಿಂದ ಆಕಾಶಗುಣವಾದ ಶಬ್ದವನ್ನೂ, ಅಂತಃಕ ರಣದಿಂದ ಅಭಿಪ್ರಾಯವನ್ನೂ ಗ್ರಹಿಸುವನು. ಒಂದೊಂದು ಭೂತಾವರ