ಪುಟ:ಶ್ರೀಮದ್ಭಾಗವತವು ಪ್ರಥಮ ದ್ವಿತೀಯ ಸ್ಕಂಧಗಳು.djvu/೨೫೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೨೪o ಶ್ರೀಮದ್ಭಾಗವತವು [ಅಧ್ಯಾ. ೪, ಲಾರರು. ಆದುದರಿಂದ ಈ ತಪಸ್ಸು ಮೊದಲಾದುವುಗಳನ್ನು ಭಕ್ತಿಯೋ ಗಕ್ಕೆ ಅಂಗವಾಗಿ ನಡೆಸಿದ ಪಕ್ಷದಲ್ಲಿ, ನಿರತಿಶಯವಾದ ಫಲವನ್ನು ಹೊಂದು ವರು. ಅಂತಹ ಭಕ್ತಿವಿಷಯನಾದ ನಿನಗೆ ನಮಸ್ಕಾರವು. ಕಿರಾತರಾಗಲಿ, ಶಕಯವನಾದಿಗಳಾಗಲಿ, ಆಂಧದೇಶದ ನಿಕೃಷ್ಟಜಾತಿಯವರಾಗಲಿ,ಬೇಡ ರಾಗಲಿ, ಚಂಡಾಲರೇ ಮೊದಲಾದವರಾಗಲಿ, ತುರುಷರಾಗಲಿ, ಇನ್ನೂ ಎಷ್ಟೇನೀಚಕುಲದಲ್ಲಿ ಹುಟ್ಟಿದವರಾದರೂ, ಎಷ್ಟೇ ಪಾಪಾತ್ಮರಾಗಿದ್ದರೂ ನಿನ್ನ ಸ್ನಾಶ್ರಯಿಸುವುದರಿಂದ ತಮ್ಮ ಪಾಪಗಳನ್ನು ನೀಗಿ ಶುದ್ಧರಾಗುವರು ಅಂತಹ ಮಹಾಮಹಿಮೆಯುಳ್ಳ ನಿನಗೆ ನಮಸ್ಕಾರವು. ಎಲೈ ಮಹಾಪುರು ಷನೆ! ಭಕ್ತಿಯೋಗನಿಷ್ಠರಾದವರೆಲ್ಲರಿಗೂ ನೀನೇ ಅಧಿಪತಿಯು, ವೇದದ ಪೂರ್ವಭಾಗದಲ್ಲಿ ಹೇಳಿರುವ ಸಮಸ್ತ ಕರ್ಮಗಳಿಂದಲೂ ಆರಾಧಿಸಲ್ಪಡತಕ್ಕೆ ವನು ನೀನಲ್ಲದೆ ಬೇರೆಯಲ್ಲ. ಅದಕ್ಕೆ ಫಲವನ್ನು ಕೊಡತಕ್ಕವನೂ ನೀನೇ ಹೊರತು ಬೇರೆ ದೇವತೆಗಳಲ್ಲ. ಮತ್ತು ಶ್ರುತಿಗಳಲ್ಲಿ ಹೇಳಲ್ಪಟ್ಟ ಬಾನ ಧರ್ಮಾದಿಗಳಿಂದಲೂ ನೀನೇ ಆರಾಧಿತನಾಗಿ ಅದಕ್ಕೆ ತಕ್ಕ ಫಲವನ್ನು ಕೊಡುತ್ತಿರುವೆ, ಉಪನಿಷದ್ಭಾಗಗಳಲ್ಲಿ ಹೇಳಲ್ಪಡುವ ಉಪಾಸನಾತ್ಮಕವಾ ಜ್ಞಾನಕ್ಕೂ ನೀನೇ ವೇದ್ಯನಾಗಿ, ಅದರ ಫಲಗಳನ್ನು ಕೊಡತಕ್ಕವನು, ನೀನು ದೋಷರಹಿತರಾದ ಬ್ರಹ್ಮ ರುದ್ರಾದಿಗಳಿಗೂ ಅಗೋಚರವಾದ ಚಿಹ್ನೆಗಳು ಳ್ಳವನು, ಇಂತಹ ಸರೆತ್ತಮಗುಣವಿಶಿಷ್ಯನಾದ ನೀನು ನನ್ನಲ್ಲಿ ಪ್ರಸ (ನಾಗಬೇಕು. ಎಲೈ ದೇವನೆ!ನೀನು ಸಾಕ್ಷಾಲಕ್ಷ್ಮಿದೇವಿಗೂ ಅಧಿಪತಿಯು, ನೀನೇ ಸಮಸ್ಯಯಜ್ಞಗಳಿಗೂ ಫಲವನ್ನು ಕೊಡತಕ್ಕವನು, ನೀನೇ ಸಮ ಸಪ್ರಪಂಚಗಳನ್ನೂ ಸೃಷ್ಟಿಸತಕ್ಕವನು, ಮತ್ತು ಸಮಸ್ತಪ್ರಜೆಗಳಿಗೂ ನೀನೇ ಅಧಿಪತಿಯು, ಬುದ್ಧಿಗೂ ನೀನೇ ಅಧಿಪತಿಯು, ಭೂಮಂಡಲಕ್ಕೂ ನೀನೇ ಅಧಿಪತಿಯು, ಯಾದವಕುಲಕ್ಕೂ ನೀನೇ ಅಧಿಪತಿಯು, ನೀನೇ ಆವ ರೆಲ್ಲರಿಗೂ ಮುಖ್ಯಗತಿಯು, ಇಂತಹ ನೀನು ನನ್ನಲ್ಲಿ ಪ್ರಸನ್ನನಾಗಬೇಕು. ಓ ಮಹಾತ್ಮನೆ'ಯೋಗೀಶ್ವರರೆಲ್ಲರೂ ಯಾವ ನಿನ್ನ ಪಾದಪದ್ಮಗಳನ್ನು ಸ್ಮರಿ ಸುವುದರಿಂದ ತಮ್ಮ ಬುದ್ಧಿಯನ್ನು ಪವಿತ್ರವಾಗಿ ಮಾಡಿಕೊಂಡು,ಅದರಿಂದ ತತ್ವಜ್ಞಾನವನ್ನೂ ಸಂಪಾದಿಸಿ, ಅದನ್ನು ಇತರರಿಗೂ ಉಪದೇತಿಸಿ, ಪರಮ