ಪುಟ:ಶ್ರೀಮದ್ಭಾಗವತವು ಪ್ರಥಮ ದ್ವಿತೀಯ ಸ್ಕಂಧಗಳು.djvu/೨೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೧೪ ಶ್ರೀಮದ್ಭಾಗವತ ಮಾಹಾತ್ಮವು. ಒಂದು ಘಟ್ಟವಿರುವುದು. ಅದು ಅನೇಕಋಷಿಗಳಿಂದಲೂ, ದೇವಗಂಧರಾ ಗಳಿಂದಲೂ ಸೇವಿತವಾಗಿ, ಏಕಾಂತವಾಗಿಯೂ, ಅತಿಪವಿತ್ರವಾಗಿಯೂ ಮನೋಹರವಾಗಿಯೂ ಇರುವುದು. ನೀನು ಈ ಜ್ಞಾನಯಜ್ಞವನ್ನು ನಡೆಸ ವುದಕ್ಕೆ ಅದೇ ಸರ್ವೋತ್ತಮವಾದ ಸ್ಥಳವು. ಅಲ್ಲಿ ಶ್ರವಣಮಾಡುವುದರಿಂದ ಆ ಕಥೆಗೂ ಅಪೂರ್ವವಾದ ಒಂದು ರುಚಿಯುಂಟಾಗುವುದು.ಭಾಗವತಕಥಾ ಪ್ರಸಂಗವು ಎಲ್ಲಿ ನಡೆಯುವುದೋ, ಅಲ್ಲಿಗೆ ಭಕ್ತಿಯು ತಪ್ಪದೆ ಬಂದು ಸೇರು ವಳು. ಅಲ್ಲಿ ನೀನು ಕಥಾರಂಭವನ್ನು ಮಾಡಿದೊಡನೆ, ಭಕ್ತಿಯು ಜೀರ್ಣದೇ ಹವುಳ್ಳ ತನ್ನ ಮಕ್ಕಳೊಡನೆ ತಾನಾಗಿಯೇ ಬಂದು ಸೇರುವುದರಲ್ಲಿ ಸಂದೇ ಹವಿಲ್ಲ. ಅಲ್ಲಿಗೆ ಬಂದು ಸೇರಿದಾಗ ಆ ಮೂವರಿಗೂ ಹೊಸಯೌವನವುಂಟಾ ಗುವುದು” ಎಂದರು. ಈ ಮಾತನ್ನು ಕೇಳಿ, , ಆ ಋಷಿಕಮಾರರೂ ನಾರದನೊಡಗೂಡಿ ಗಂಗಾತೀರಕ್ಕೆ ಬಂದು ಸೇರಿದರು. ಅವರೆಲ್ಲರೂ ಇಲ್ಲಿಗೆ ಬಂದ ವೃತ್ತಾಂತವ್ರ ಸಮಸ್ತಲೋಕಗಳಿಗೂ ವ್ಯಾಪಿಸಿತು ಭಾಗವತಕಥಾಮೃತವನ್ನು ಪಾನ ಮಾಡಿ , ಎಬ ಆತುರದಿಂದ ಅನೇಕ ವೈಷ್ಣವರೂ, ಮಹರ್ಷಿಗಳೂ, ವೇ ವಾಂತಿಗಳೂ, ಮಂತ್ರದೇವತೆಗಳೂ, ಷಟ್ಟಾಸಗಳೂ, ಇತರ ಪುರಾಣಗಳೂ ಸಮಸ್ತಪ್ರಣ್ಯತೀರ್ಥಗಳೂ ಆತುರದಿಂದ ಬಂದ ಸೇರಿದುವು. ಆಗ ನಾರದನು ಆ ಋಷಿಕುಮಾರರಿಗೆ ಉತ್ತಮವಾದ ಆಸನಗಳನ್ನು ಕೊಟ್ಟು, ಅವರನ್ನು ಕುಳ್ಳಿರಿಸಿದಮೇಲೆ, ಅಲ್ಲಿ ನೆರೆದಿದ್ದವರೆಲ್ಲರೂ ಕ್ರಮವಾಗಿ ಮತ್ತು ಋಷಿಕುಮಾ ರರಿಗೆ ವಂದಿಸಿ,ಭಾಗವತಕಥಾಮೃತವನ್ನು ಕೇಳಬೇಕೆಂಬ ಉತ್ಸಾಹದಿಂದ ಕೆಲ ವರು ಜಯಶಬ್ದಗಳನ್ನೂ ಕೆಲವರು ನಮಶ್ಯಬ್ದಗಳನ್ನೂ ಹೇಳುತಿದ್ದರು. ಶಂಖ, ಭೇರಿ, ಮೊದಲಾದ ಮಂಗಳವಾದ್ಯಗಳೆಲ್ಲವೂ ನುಡಿಸಲ್ಪಡುತ್ತಿದ್ದುವು. ನಾನಾ ಕಡೆಗಳಿಂದ ಪುಷ್ಪಾಂಜಲಿಗಳು ಎರಚಲ್ಪಡುತ್ತಿದ್ದುವು. ದೇವತೆಗಳು ಅಂತ ರಿಕ್ಷದಲ್ಲಿ ವಿಮಾನವನ್ನೇರಿಬಂದು, ಕಲ್ಪವೃಕ್ಷದಹೂಗಳನ್ನು ವರ್ಷಿಸುತಿದ್ದರು. ಹೀಗೆ ಎಲ್ಲರೂ ತಮ್ಮ ತಮ್ಮ ಉತ್ಸಾಹಗಳನ್ನು ತೋರಿಸಿ, ಏಕಾಗ್ರಚಿತ್ತರಾ! ಕುಳಿತಮೇಲೆ, ಋಷಿಕುಮಾರರು ನಾರದನಿಗೆ ಭಾಗವತಮಹಿಮೆಯನ್ನು ತೀ ಸುವುದಕ್ಕೆ ತೊಡಗಿದರು. 11 ಭಕ್ತಾಗ್ರಣೀ! ಕೇಳು! ಮೊದಲು ಶುಕಶಾಸ್ತ್ರ