ಪುಟ:ಶ್ರೀಮದ್ಭಾಗವತವು ಪ್ರಥಮ ದ್ವಿತೀಯ ಸ್ಕಂಧಗಳು.djvu/೨೭೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೨೫e ಅಧ್ಯಾ. ೬.] ದ್ವಿತೀಯಸ್ಕಂಧವು. ಕ್ರಿಯಾಕಲಾಪಗಳೂ, ವಿಷ್ಣುಕ್ರಮವೇ ಮೊದಲಾದ ಗತಿಗಳೂ, ದೇವ ತಾಧ್ಯಾನಗಳೂ, ಶ್ರದ್ಧೆಯೂ, ಪ್ರಾಯಶ್ಚಿತ್ತಗಳೂ, ಕರ್ಮಸಮರ್ಪಣ ವೂ, ಇನ್ನೂ ಯಾಗಕ್ಕೆ ಯಾವಯಾವ ಅಂಗಗಳುಂಟೋ ಅವೆಲ್ಲವನ್ನೂ, ನಾನು ಆ ಭಗವಂತನ ಅವಯವಗಳಿಂದಲೇ ಕಲ್ಪಿಸಿಕೊಂಡೆನು, ಹೀಗೆ ನಾ ನು ಆ ವಿರಾಟ್ಟುರುಷನ ಅವಯವಗಳಿಂದ ಸಮಸ್ತಯಾಗಸಾಧನಗಳನ್ನೂ ಕಲ್ಪಿಸಿಟ್ಟುಕೊಂಡು, ಅವುಗಳಿಂದ ಆತನ ಪ್ರೀತಿಗಾಗಿ ಯಾಗಗಳನ್ನು ನಡೆಸಿ ಅವನನ್ನಾ ರಾಧಿಸಿದೆನು. ಆಗ ನಿನ್ನ ಒಡಹುಟ್ಟಿದವರಾದ ಮರೀಚಿ ಮೊದಲಾದ ಈ ಒಂಭತ್ತು ಮಂದಿ ಪ್ರಜಾಧಿಪತಿಗಳೂ, ನಾನು ಮಾಡಿದ ಯಾಗವನ್ನು ನೋಡಿ, ಬಹಳ ಭಕ್ತಿಯುಕ್ತರಾಗಿ, ನಿಜಸ್ವರೂಪದಿಂದ ಕಣ್ಣಿಗೆ ಕಾಣದಿದ್ದರೂ,ಇಂದ್ರಾಹರೂಪದಿಂದ ಗೋಚರಿಸುತ್ತಿದ್ದ ಆ ಪರಮಪುರುಷ ನನ್ನು ಯಾಗಗಳಿಂದಾರಾಧಿಸಿದರು ಆಮೇಲೆ ಮನುಗಳೂ ಕೂಡ ಅದನ್ನು ನೋಡಿ ತಮತಮಗೆ ಅನುಕೂಲವಾದ ಕಾಲಗಳಲ್ಲಿ ಯಾಗಗಳನ್ನು ನಡೆಸಿ ಸರಾಂತರಾಮಿಯಾದ ಆ ಭಗವಂತನನ್ನಾ ರಾಧಿಸಿದರು. ಅದರಂತೆಯೇ ದೇವದಾನವರೂ, ರಾಜರೂ, ಮುನೀಶ್ವರರೂ, ದೃಢವಾದ ನಿಯಮದಿಂದ ಭಗವದಾರಾಧನಗಳನ್ನು ನಡೆಸಿದರು. ಹಾಗೆಯೇ ವಿಷ್ಟು ಪ್ರೀತಿಗಾಗಿ ಇನ್ನೂ ಅನೇಕರು ಯಜ್ಞವನ್ನು ನಡೆಸುತ್ತಿರುವರು. ಪ್ರಕೃತಿಸಂಬಂಧವಾದ ಗುಣ ಗಳಿಲ್ಲದ ಪರಮಾತ್ಮನು, ತನ್ನಲ್ಲಿ ಸೂಕ್ಷ್ಮರೂಪದಿಂದ ಸೇರಿದ್ದ ಜಗತ್ತನ್ನು ಸೃಷ್ಟಿಸುವುದಕ್ಕಾಗಿಯೇ, ಮಾಯಾಗುಣಗಳಾದ ಸತ್ವರಜಸ್ತಮೋಗುಣಗ ಳನ್ನು ಸ್ವೀಕರಿಸಿ,ಸೃಷ್ಟಿ ಕಾರ್ಯಕ್ಕಾಗಿ ನನ್ನನ್ನು ನಿಯಮಿಸಲು, ನಾನು ಆತನ ಅನುಮತಿಯಿಂದ ಲೋಕಗಳನ್ನು ಸೃಷ್ಟಿಸುತ್ತಿರುವೆನು. ರುದ್ರನೂಕೂಡ ನನ್ನಂತೆಯೇ ಆತನ ಆಜ್ಞಾಧೀನನಾಗಿ ಈ ಪ್ರಪಂಚದ ಸಂಹಾರಕಾರ್ಯ ವನ್ನು ನಡೆಸುತ್ತಿರುವನು. ಆ ಭಗವಂತನು ತಾನೇ ವಿಷ್ಣುವಾಗಿ ಅವತರಿಸಿ ಈ ಪ್ರಪಂಚವನ್ನು ರಕ್ಷಿಸುತ್ತ ಬರುವನು. ಬ್ರಹ್ಮ ರುದ್ರರಲ್ಲಿ ಅಂತರ್ಯಾ ಮಿಯಾಗಿದ್ದು ಸೃಷ್ಟಿಸಂಹಾರಗಳನ್ನೂ ,ನಿಜಸ್ವರೂಪದಿಂದ ರಕ್ಷಣಕಾರ್ಯ ವನ್ನೂ ಆ ಪರಮಪುರುಷನು ತಾನಾಗಿಯೇ ನಡೆಸುತ್ತಿರುವನು.ಹೀಗೆ ಸೃಷ್ಟಿ ಸ್ಥಿತಿಸಂಹಾರಗಳೆಂಬ ಈ ಮೂರು ಕಾರ್ಯಗಳನ್ನು ನಡೆಸತಕ್ಕವರು ಶಕ್ತಿ 1?