ಪುಟ:ಶ್ರೀಮದ್ಭಾಗವತವು ಪ್ರಥಮ ದ್ವಿತೀಯ ಸ್ಕಂಧಗಳು.djvu/೨೮೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೨೩೨ ಶ್ರೀಮದ್ಭಾಗವತವು [ಅಧ್ಯಾ. ೭. ಇರುವ ಆ ಭಗವಂತನ ಅವತಾರಚರಿತ್ರಗಳಲ್ಲಿ, ಪ್ರಧಾನವಾದ ಕೆಲವನ್ನು , ಮಾತ್ರ ಮಹರ್ಷಿಗಳು ಹೇಳಿರುವರು. ಅವುಗಳನ್ನು ನಿನಗೂ ಕ್ರಮವಾಗಿ ಹೇಳುವೆನು. ಆ ಕಥಾಮೃತಗಳನ್ನು ನೀನೂ ಪಾನಮಾಡುವನಾಗು! ಇಲ್ಲಿಗೆ ಆರನೆಯ ಅಧ್ಯಾಯವು. ( ಬ್ರಹ್ಮ ದೇವನು ನಾರದನಿಗೆ ಭಗವದವತಾರಗಳನ್ನೂ). 3 ಆಯಅವತಾರಗಳಲ್ಲಿ ನಡೆದ ಕಾರ್ಯಗಳನ್ನೂ, ( ಅವತಾರಪ್ರಯೋಜನಗಳನ್ನೂ ತಿಳಿಸಿದುದು) - wವರಾಹಾವತಾರವvw ನಾರದಾ ! ಎಣೆಯಿಲ್ಲದ ಮಹಾಮಹಿಮೆಯುಳ್ಳ ಆ ಭಗವಂತನ ಅವತಾರಚರಿತ್ರಗಳನ್ನು ಕ್ರಮವಾಗಿ ಹೇಳುವೆನು ಕೇಳು! ಪೂರ್ವದಲ್ಲಿ ದಿತಿಗೆ ಹಿರಿಯಮಗನಾದ ಹಿರಣ್ಯಾಕ್ಷನೆಂಬ ರಾಕ್ಷಸನು ಮದೋನ್ಮತ್ತನಾಗಿ, ಈ ಭೂಮಂಡಲವನ್ನು ಚಾಪೆಯಂತೆ ಸುತ್ತಿಕೊಂಡು, ಸಮುದ್ರದೊಳಗೆ ಪ್ರವೇಶಿಸಲು, ಇದನ್ನು ಕಂಡು, ದಯಾಸಾಗರನಾದ ಭಗವಂತನು, ಆ ಭೂಮಿಯನ್ನು ದರಿಸಬೇಕೆಂಬುದಕ್ಕಾಗಿ, ಸಮಸ್ತ ಯಜ್ಞಸ್ವರೂಪವಾದ ವರಾಹಾಕೃತಿಯನ್ನು ತಾಳಿ,ಇಂದ್ರನು ಪರ್ವತವನ್ನು ಭೇದಿಸುವಂತೆ, ತನ್ನ ಕೋರೆದಾಡೆಯಿಂದ ಆ ದೈತ್ಯನನ್ನು ಕೊಂದು, ನೀರಿನಲ್ಲಿ ಮುಳುಗಿದ್ದ ಭೂಮಿ ಯನ್ನುದ್ಧರಿಸಿದನು. ಇದನ್ನು ವರಾಹಾವತಾರವನ್ನು ವರು. +ಸುಯಜ್ಞಾವತಾರವು++ ಆಮೇಲೆ ಮತ್ತೊಂದುಕಾಲದಲ್ಲಿ, ರುಚಿಯೆಂಬ ಪ್ರಜಾಧಿಪತಿಗೆ ಆಕೂತಿಯೆಂಬ ಭಾರ್ಯೆಯಲ್ಲಿ ಸುಯಜ್ಞನೆಂಬ ಹೆಸರಿಂದ ಹುಟ್ಟಿದನು. ಈ ಅವತಾರದಲ್ಲಿ ತನಗೆ ಭಾರ್ಯೆಯಾದ ದಕ್ಷಿಣಾದೇವಿಯಲ್ಲಿ (ಯಮವೆಂಬ ಇಂದ್ರಿಯನಿಗ್ರಹಶಕ್ತಿಯುಳ್ಳವರಾದುದರಿಂದ) ಯಾಮರೆಂದು ಪ್ರಸಿದ್ಧಿ ಗೊಂಡ ಹನ್ನೆರಡುಮಂದಿ ದೇವತೆಗಳನ್ನು ಹಡೆದನು. ಆಕೂತಿಪುತ್ರನಾದ ಈತನೇ, ಆಮೇಲೆ ಇಂದ್ರನೆನಿಸಿಕೊಂಡು, ಸಮಸ್ತಲೋಕಗಳ ಬಾಧೆಗಳ