ಪುಟ:ಶ್ರೀಮದ್ಭಾಗವತವು ಪ್ರಥಮ ದ್ವಿತೀಯ ಸ್ಕಂಧಗಳು.djvu/೨೮೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅಭ್ಯಾ. ೬.] ದ್ವಿತೀಯಸ್ಕಂಧವು. ೨೩೫ ರಾಯಣರೆಂಬ ಸ್ವರೂಪದಿಂದ ಬದರಿಕಾಶ್ರಮದಲ್ಲಿ ಮಹಾತಪಸ್ಸನ್ನು ಹಿಡಿ ದು ಕುಳಿತಿದ್ದ ಕಾಲದಲ್ಲಿ, ದೇವೇಂದ್ರನು ಭಯಪಟ್ಟು, ಇವರ ತಪೋಭಂಗ ಕ್ಯಾಗಿ ಅಪ್ಪರಸ್ತ್ರೀಯರನ್ನು ಪ್ರೇರಿಸಿದನು. ಇಂದ್ರಾಳ್ಮೆಯನ್ನು ಕೇಳಿ ರಂಭೆ, ಮೇನಕೆ, ಮೊದಲಾದ ಅಪ್ಪರಸ್ತ್ರೀಯರು ಮನ್ಮಥನನ್ನು ಮುಂದಿ ಟ್ಟುಕೊಂಡು ಬಂದು, ತಮ್ಮ ಹಾವಭಾವವಿಲಾಸಗಳಿಂದ ಮೋಹಗೊಳಿಸು ವುದಕ್ಕೆ ತೊಡಗಿದರು. ಅವರಲ್ಲಿ ಕೆಲವರು ದೃಢಮನಸ್ಸಿನಿಂದ ಕುಳಿತಿದ್ದ ಆ ಮುನಿಗಳಮುಂದೆ ಕಾಮೋದ್ರೇಕವನ್ನುಂಟುಮಾಡುವ ಹಾಸ್ಯವಾಕ್ಯಗಳ ನಾಡುತಿದ್ದರು. ಕೆಲವರು ಇಂಪಾದ ಗಾನವನ್ನಾರಂಭಿಸಿದರು. ಕೆಲವರು ನರ್ತಿಸುವುದಕ್ಕೆ ತೊಡಗಿದರು. ಇಷ್ಟಾದರೂ ಆ ಮಹರ್ಷಿಗಳ ಮನಸ್ಸು ಸ್ವಲ್ಪ ಮಾತ್ರವೂ ಚಲಿಸಲಿಲ್ಲ. ಒಂದುವೇಳೆ ಕೋಪದಿಂದ ಶಾಪವನ್ನು ಕೊಟ್ಟರೂ, ತಮ್ಮ ತಪಸ್ಸಿಗೆ ಭಂಗವುಂಟಾಗುವುದೆಂಬ ಭಾವದಿಂದ ಮನಸ್ಸಿ ನಲ್ಲಿ ಕೋಪವನ್ನಾದರೂ ವಹಿಸದೆ, ಮನಸ್ಸನ್ನೂ , ಇಂದ್ರಿಯಗಳನ್ನೂ ನಿ ಗ್ರಹಿಸಿಟ್ಟುಕೊಂಡರು. ನಾರದಾ ! ಕೇವಲಸತ್ವಗುಣಪ್ರಧಾನನಾದ ಆ ಭಗವಂತನಲ್ಲಿ ಕೊಪಪ್ರಸಕ್ತಿಯೆಲ್ಲಿಯದು ? ಹಿಂದೊಮ್ಮೆ ಮನ್ಮಥನು ಇದೇರೀತಿಯಲ್ಲಿ ತಪೋನಿರತನಾಗಿದ್ದ ರುದ್ರನನ್ನು ಮೋಹಗೊಳಿಸುವುದಕ್ಕೆ ಪ್ರಯತ್ನಿಸಿದಾಗ, ರುದ್ರನು ಕೋಪವನ್ನು ತಡೆಯಲಾರದೆ, ತನ್ನ ಹಣೆಗಣ್ಣಿಂ ದ ಆ ಕಾಮನನ್ನು ದಹಿಸಿದನು. ಹೀಗೆ ರುದ್ರಾದಿಗಳೂಕೂಡ ತಮ್ಮ ದೇಹವನ್ನೇ ತಪಿಸತಕ್ಕ ಕೋಪವನ್ನು ತಾವು ದಹಿಸಲಸಮರರಾಗಿರುವರು. ಕಾಮವನ್ನು ಜಯಿಸಬಲ್ಲವರಾದರೂ ಕೋಪವನ್ನು ನಿಗ್ರಹಿಸಲಾರರು. ಅಂ ತಹ ದುರ್ಜಯವಾದ ಕೋಪವನ್ನು ಜಯಿಸಬೇಕೆಂದರೆ, ಕೇವಲ ಸತ್ವಗು ಣಪ್ರಧಾನನಾದ ಆ ಮಹಾವಿಷ್ಣುವಿಗೊಬ್ಬನಿಗೆ ಕೊರತು ಬೇರೆ ಯಾರಿಗೆ ತಾನೇ ಈ ಶಕ್ತಿಯುಂಟು? ಹೀಗೆ ಕಾಮಕ್ರೋಧಗಳೊಂದಕ್ಕೂ ಈಡಾಗದೆ ಜಿತೇಂದ್ರಿಯನಾಗಿದ್ಯ ನಾರಾಯಣನು, ಆ ಅಪ್ಪರಗಿಯರೆಲ್ಲರೂ ನೋ ಡುತಿದ್ದ ಹಾಗೆಯೇ ತನ್ನ ತೊಡೆಯಿಂದ ಲೋಕಮೋಹನೆಯಾದ ಒಬ್ಬ ಸ್ತ್ರೀಯನ್ನು ಹುಟ್ಟಿಸಿದನು ತನ್ನ ತೊಡೆಯಲ್ಲಿ ಹುಟ್ಟಿದುದರಿಂದ ಅವಳಿಗೆ ಊರೂತಿಯೆಂಬ ಹೆಸರನ್ನು ಕೊಟ್ಟು, ಮುಂದಿದ್ದ ಅಪ್ಪರಸಿಯರನ್ನು ನೋಡಿ