ಪುಟ:ಶ್ರೀಮದ್ಭಾಗವತವು ಪ್ರಥಮ ದ್ವಿತೀಯ ಸ್ಕಂಧಗಳು.djvu/೨೮೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅಧ್ಯಾ, ೬.] ದ್ವಿತೀಯಸ್ಕಂಧವು. ವ್ಯರೂ,ಅಸುರಶ್ರೇಷ್ಠರೂ ಉಭಯಪಾರ್ಶ್ವದಲ್ಲಿಯೂನಿಂತುಕಡೆಯುವಾಗ ಆ ಪರತವು ಭಾರದಿಂದ ಸಮುದ್ರದಲ್ಲಿ ಮುಳುಗಿಹೋಗುವಸಂಭವವು ತೋ ರಿತು, ಆಗ ಆದಿದೇವನಾದ ಭಗವಂತನು ಕೂರ್ಮಾವತಾರವನ್ನೆತ್ತಿ, ಆ ಪರೂತವನ್ನು ಬೆನ್ನ ಮೇಲೆ ಹೊತ್ತನು, ತನ್ನ ಮೈನವೆಯನ್ನಾ ರಿಸುವಂತೆ ಆ ಪಕ್ವತವು ಸುತ್ತುವುದರಿಂದುಂಟಾದ ಘರ್ಷಣದಿಂದ ಕೂರ್ಮರೂಪಿಯಾದ ಆ ಭಗವಂತನು, ಆ ಕಾಲದಲ್ಲಿ ನಿದ್ರಾ ಸುಖವನ್ನೆ ನುಭವಿಸುತಿದ್ದನು, ನಾರ ದಾ! ಭಗವಂತನ ನಿದ್ರೆಯೆಂಬುದು ಪ್ರಜಾಕ್ಷೇಮಚಿಂತನೆಯಿಂದ ಶಯನಿಸು ವುದೇ ಹೊರತು ಬೇರೆಯಲ್ಲ. ಪ್ರಾಕೃತಜನಗಳಲ್ಲಿ ಕಾಣುವ ತಮೋಗುಣ ಕಾರವಾದ ನಿದ್ರೆಯೆಂಬುದು, ಆಪ್ರಾಕೃತ ಹವ್ಯಮಂಗಳವಿಗ್ರಹವುಳ್ಳ ಮ ತ್ತು ಗುಣಸಂಪರ್ಕವಿಲ್ಲದ ಆ ಭಗವಂತನಲ್ಲಿ ಸಂಭವಿಸದು, ಇದೇ ಅವನ ಕೂರ್ಮಾವತಾರವು. ಈ ನೃಸಿಂಹಾವತಾರವ, v++ ನಾರದಾ! ಆ ಭಗವಂತನು ದೇವತೆಗಳ ಭಯವನ್ನು ನೀಗಿಸುವುದಕ್ಕಾ ಗಿ, ಲೋಕಭಯಂಕರವಾದ ನಾರಸಿಂಹಸ್ವರೂಪವನ್ನು ಸ್ವೀಕರಿಸಿದನು. ಪೂ ಶ್ವದಲ್ಲಿ ಹಿರಣ್ಯಕಶಿಪುವೆಂಬ ರಾಕ್ಷಸನು, ತನ್ನ ಹುಬ್ಬುಗಂಟುಗಳಿಂದ ಲೂ, ತೀಕ್ಷವಾದ ಕೋರೆದಾಡೆಗಳಿಂದಲೂ ಘೋರವಾದ ಮುಖವುಳ್ಳ ವನಾಗಿ ಗದೆಯನ್ನು ಹಿಡಿದು ತನಗಿದಿರಾಗಿ ಬರುವುದನ್ನು ನೋಡಿ ಅವನಿಗೂ ಭಯವನ್ನು ಹುಟ್ಟಿಸುವಂತೆ ಭಗವಂತನು ಈ ಸಿಂಹಸ್ವರೂಪವನ್ನು ಧರಿಸಿ ಬಂದು, ಆ ರಾಕ್ಷಸನನ್ನೆಳೆದು ತನ್ನ ತೊಡೆಯಮೇಲೆ ಮಲಗಿಸಿಕೊಂಡು, ತನ್ನ ನಖಾಗ್ರಗಳಿಂದಲೇ ಅವನನ್ನು ಸೀಳಿಬಿಟ್ಟನು. ಇದೇ ಆ ಭಗವಂತನ ನೃಸಿಂ ಹಾವತಾರವು. - ಗಜೇಂದ್ರವರದಾವತಾರವು, xw ಪೂತ್ವದಲ್ಲಿ 1 ಯೂಥಪತಿಯೆನಿಸಿಕೊಂಡ ಒಂದಾನೊಂದು. ಮಹಾ ಗಜವು, ತನ್ನ ಸ್ವಜಾತಿಯ ಆನೆಗಳೊಡನೆ ಕಾಡಿನಲ್ಲಿ ಸುತ್ತುತ ಬಹಳ ಆಯಾಸಪಟ್ಟು, ಬಾಯಾರಿಕೆಯಿಂದ ಪೀಡಿತವಾಗಿ, ಸಮೀಪದಲ್ಲಿದ್ದ ಒಂದು ಮಗುವನ್ನು ನೋಡಿ, ಅಲ್ಲಿ ನೀರನ್ನು ಕುಡಿಯುತ್ತಿದ್ದಿತು. ಆಗ ಅತಿಬ