ಪುಟ:ಶ್ರೀಮದ್ಭಾಗವತವು ಪ್ರಥಮ ದ್ವಿತೀಯ ಸ್ಕಂಧಗಳು.djvu/೨೮೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಶ್ರೀಮದ್ಭಾಗವತವು [ಅಧ್ಯಾ, ೬. ಲಾಢವಾಗಿಯೂ, ಭಯಂಕರವಾಗಿಯೂ ಇದ್ದ ಒಂದಾನೊಂದು ಮೊಸಳೆ ಯು ಆ ಆನೆಯ ಕಾಲನ್ನು ಹಿಡಿಯಿತು. ಆ ಗಜಯೂರಪವು ಬಹಳ ಹೊತ್ತಿ ನವರೆಗೆ ಆ ಮೊಸಳೆಯೊಡನೆ ಹೋರಾಡುತ್ತಿದ್ದರೂ, ತಪ್ಪಿಸಿಕೊಂಡು ಬರು ವುದಕ್ಕೆ ಸಾಧ್ಯವಿಲ್ಲದೆ, ಕ್ರಮಕ್ರಮವಾಗಿ ಶಕ್ತಿಗುಂದುತ್ತಬಂದಿತು. ಕೊನೆಗೆ ಮುಂದೆ ಮಾಡಬೇಕಾದ ಪ್ರಯತ್ನ ವೊಂದೂ ತೋರದೆ, ತನ್ನ ಪ್ರಯತ್ನ ವನ್ನು ಬಿಟ್ಟು, ಆ ಕೊಳದಲ್ಲಿ ಒಂದಾನೊಂದು ಕಮಲವನ್ನು ತನ್ನ ಸುಂಡಿ ಲಿನಿಂದ ಮೇಲಕ್ಕೆತ್ತಿ ಹಿಡಿದು, ಭಕ್ತಿಯಿಂದ ಭಗವಂತನನ್ನು ಕುರಿತು, <ಎಲೈ ಕಾರಣಪುರುಷನೆ ! ಓ ವಿಶುದ್ದ ಕೀರ್ತಿ! ಕಿವಿಯಿಂದ ಕೇಳಿದ ಮಾ ಇಕ್ಕೇ ಸಮಸ್ಯಕಲ್ಯಾಣಗಳನ್ನೂ ಕೈಗೂಡಿಸತಕ್ಕ ನಾಮಧೇಯವುಳ್ಳವನೆ ! ಓ ಲೋಕನಾಯಕಾ ! ನನ್ನನ್ನು ರಕ್ಷಿಸು” ಎಂದು ದೈನ್ಯದಿಂದ ಮೊರೆಯಿ ಟೈತು, ಹೀಗೆ ತನ್ನಲ್ಲಿ ಮರೆಹೊಕ್ಕು ಮೊರೆಯಿಡುತ್ತಿರುವ ಗಜೇಂದ್ರನಲ್ಲಿ ಶ್ರೀಹರಿಯು ದಯಾದ್ರ್ರಹೃದಯನಾಗಿ, ಗರುಡಾರೂಢನಾಗಿ ಬಂದು ತನ್ನ ಚಕ್ರಾಯುಧದಿಂದ ಆನಕ್ರವನ್ನು ಸೀಳಿ,ಗಜೇಂದ್ರನನ್ನು ಬಿಡಿಸಿ, ಅದಕ್ಕೆ ಮೋಕ್ಷವನ್ನೂ ಕೊಟ್ಟನು. ಇದೇ ಆ ಭಗವಂತನ ಗಜೇಂದ್ರ ವರದಾವತಾ ರವು. ಇದನ್ನು ಹರವತಾರವೆಂದೂ ಹೇಳುವರು. - ++ ವಾಮನಾವತಾರವು. • ಯಜ್ಞಾರಾಧ್ಯನಾದ ಆ ಪರಮಪುರುಷನು ಮತ್ತೊಮ್ಮೆ ಅಹಿತಿಪು ತನಾಗಿ ಹುಟ್ಟಿದನು. ಆ ಅದಿತಿಯಲ್ಲಿ ಜನಿಸಿದ ದ್ವಾದಶಾದಿತ್ಯರೆಂಬ ಹನ್ನೆ ರಡು ಮಕ್ಕಳಲ್ಲಿ ಈತನೇ ಕಿರಿಯವನಾಗಿದ್ದರೂ, ಗುಣಗಳಲ್ಲಿ ಮಾತ್ರ ಅವರೆ ಲ್ಲರಿಗಿಂತಲೂ ಹಿರಿಯನೆನಿಸಿಕೊಂಡು,ಲೋಕವಿಖ್ಯಾತಿಯನ್ನು ಹೊಂದಿದನು. ಈತನು ಆಕಾರದಲ್ಲಿ ಬಹಳಚಿಕ್ಕವನಂತೆ ತೋರಿದರೂ, ಈ ಚತುರ್ದಶಭುವ ನಗಳನ್ನೂ ತನ್ನ ಎರಡಡಿಗಳಿಂದಲೇ ಅಳೆದುಬಿಟ್ಟನು. ಇದಕ್ಕೆ ಕಾರಣವನ್ನು ಹೇಳುವೆನು ಕೇಳು!ಪೂರದಲ್ಲಿ ಬಲಿಯೆಂಬ ದಾನವನ್ನು ಇಂದ್ರನನು, ಜಯಿ ಸಿ, ತ್ರೈಲೋಕ್ಯವನ್ನೂ ತನಗಧೀನವಾಗಿ ಮಾಡಿಕೊಂಡಿದ್ದನು. ಆಗ ಭಗ ವಂತನು ದೇವತೆಗಳ ಕಷ್ಟವನ್ನು ನೀಗಿಸುವುದಕ್ಕಾಗಿ ಒಂದು ವಾಮನ (ಗುಜ್ಜಾರಿಯ) ರೂಪವನ್ನು ಧರಿಸಿ, ಆ ಬಲಿಯು ಯಾಗಮಾಡುತಿದ್ದ ಕಾಲ