ಪುಟ:ಶ್ರೀಮದ್ಭಾಗವತವು ಪ್ರಥಮ ದ್ವಿತೀಯ ಸ್ಕಂಧಗಳು.djvu/೨೯೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೨೭೨ ಶ್ರೀಮದ್ಭಾಗವತವು (ಅಧ್ಯಾ, ೭, ವನು. ಇದರಿಂದಲೇ ಆತನು,ಆ ಕಾಲದಲ್ಲಿ ಶುಕ್ರನ ಕೋಪವನ್ನೂ ಲಕ್ಷಿಸದೆ, ಆತನ ಶಾಪಕ್ಕೂ ಭಯಪಡದೆ, ತನ್ನ ಪ್ರತಿಜ್ಞಾ ಪೂರ್ತಿಗಾಗಿ, ತನ್ನ ತಲೆ ಯನ್ನೇ ಆ ಶ್ರೀಮಹಾವಿಷ್ಣುವಿನ ಪಾದಾರವಿಂದಕ್ಕೊಪ್ಪಿಸಿ ಬಿಟ್ಟನು. ನಾ ರದಾ! ಆ ಬಲಿಯು ಎಂತಹ ಮಹಾತ್ಮನೋ ನೋಡು ! ಹೀಗೆ ಬಲಿಯನ್ನು ನಿಗ್ರಹಿಸುವ ವ್ಯಾಯದಿಂದ ಅವನನ್ನು ದರಿಸಿದುದೇ ಆ ಭಗವಂತನ ತ್ರಿವಿಕ್ರ ಮಾವತಾರದ ಕಾರವು. -••• ಹಂಸಾವತಾರವು. www ಓ ನಾರದಾ ! ನೀನೊಮ್ಮೆ ಅತಿಸ್ನೇಹವಶನಾಗಿ, ಭಗವಂತನನ್ನು ಕುರಿತು ಯೋಗಾದಿವಿಷಯಗಳನ್ನು ಸಂಪೂರ್ಣವಾಗಿ ವಿವರಿಸಬೇಕೆಂದು ಪ್ರಾರ್ಥಿಸಲು, ಆತನು ಹಂಸಾವತಾರವನ್ನೆ ಅವೆಲ್ಲವನ್ನೂ ನಿನಗೆ ವಿವರಿ ಸಿದನು. ಅದರಲ್ಲಿ ಫಲಾಪೇಕ್ಷೆಯಿಲ್ಲದ ಕರ್ಮಯೋಗವನ್ನೂ , ಭಗವದುಪಾ ಸನಾತ್ಮಕವಾದ ಭಕ್ತಿಯನ್ನೂ,ದೀಪವು ಇತರವಸ್ತುಗಳನ್ನು ಪ್ರಕಾಶಗೊಳಿ ಸುವಂತೆ ಆತ್ಮತತ್ವವನ್ನು ಪ್ರಕಾಶಗೊಳಿಸುವ ಜ್ಞಾನಯೋಗವನ್ನೂ ಉಪ ದೇತಿಸಿದನು, ಹಂಸರೂಪಿಯಾದ ಆ ಭಗವಂತನು ಉಪದೇಶಿಸಿದ ಯೋಗ ಸ್ವರೂಪವನ್ನವಲಂಬಿಸಿಯೇ, ಈಗಲೂ ಮಹಾತ್ಮರು, ಭಗವಂತನಾದ ವಾಸುದೇವನಲ್ಲಿ ಶರಣಹೊಂದಿ, ಆತನ ಕೃಪೆಗೆ ಪಾತ್ರರಾಗುವರು. ಇದೇ ಆ ಭಗವಂತನ ಹಂಸಾವತಾವು. { ಆಯಾಮನ್ವಂತರಗಳಲ್ಲಿ ಬೇರೆಬೇರೆಯಾಗಿ ಕೈಕೊಂ * **1 * ಡ ಅವತಾರಗಳು. ! ಭಗವಂತನು ಆಯಾಮನ್ವಂತರಗಳಲ್ಲಿ ಆಯಾ ಮನುಗಳ ವಂಶಗ ಳನ್ನು ರಕ್ಷಿಸುವುದಕ್ಕಾಗಿ ಪ್ರಯತ್ನಿಸಿ, ದಶದಿಕ್ಕುಗಳಲ್ಲಿಯೂ ಅಪ್ರತಿಹತ ವಾದ ಪರಾಕ್ರಮದಿಂದ ಕೂಡಿದವನಾಗಿ,ನಿರಂಕುಶವಾಗಿರುವತನ್ನ ಆಜ್ಞಾ ರೂಪವಾದ ಚಕ್ರವನ್ನು ಧರಿಸಿರುವನು. ಮತ್ತು ಅವನು ಮೂರನೆಯ ಲೋಕವಾದ ಸತ್ಯಲೋಕದವರೆಗೂ ತನ್ನ ಕೀರ್ತಿಯನ್ನು ವಿಸ್ತರಿಸಿ, ಆಗಾಗ ಮದೋನ್ಮತ್ತರಾದ ರಾಜರನ್ನು ನಿಗ್ರಹಿಸಿ, ಸಾಧುಗಳನ್ನು ರಕ್ಷಿಸುತ್ತಿಲುವನು