ಪುಟ:ಶ್ರೀಮದ್ಭಾಗವತವು ಪ್ರಥಮ ದ್ವಿತೀಯ ಸ್ಕಂಧಗಳು.djvu/೩೦೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅಧ್ಯಾ. ೭.] ದ್ವಿತೀಯಸ್ಕಂಧವು, ೨೮೬ ಸಾಧ್ಯಸಾಧನಗಳೇ ಮೊದಲಾದ ವಿಷಯಗಳೊಡನೆ ಕೆವಲ ಕರ್ಮಕಲಾ ಪಗಳನ್ನೇ ವಿಶೇಷವಾಗಿ ಬೋಧಿಸುತ್ತಿರುವ ವೇದದ ಪೂರ್ವಭಾಗವು, ಆ ಪರ ಮಾತ್ಮನ ವಿಷಯವನ್ನು ಪೂರ್ಣವಾಗಿ ತಿಳಿಸಲಾರವು. ಆದುದರಿಂದ ನಾವು ವೇದಾಂತಗಳೆನಿಸುವ ಉಪನಿಷತ್ತುಗಳಿಂದಲೇ ಆ ಪರಮಾತ್ಮ ತತ್ವವನ್ನು ತಿಳಿದುಕೊಳ್ಳಬೇಕಾಗಿರುವುದು. ಆ ಪರಮಾತ್ಮಸ್ವರೂಪವು ಕೇವಲ ಸುಖ ರೂಪವಾದುದು. ಆದರೆ 14 ಜೀವನಿಗೂ ಆ ವಿಧವಾದ ಸುಖಾನುಭವವುಂ ಎಲ್ಲವೆ?” ಎಂದರೆ; ನಾರದಾ! ಜೀವಾತ್ಮ ಪರಮಾತ್ಮರಲ್ಲಿರುವ ಸುಖದಲ್ಲಿ ಬಹಳ ತಾರತಮ್ಯವುಂಟು ! ಜೀವಾತ್ಮನು ಅನುಭವಿಸುವ ಸುಖಕ್ಕೆ ಎಲ್ಲೆ ಯುಂಟು ! ಮತ್ತು ಇವನ ಸುಖವು ದುಃಖಮಿಶ್ರವಾಗಿರುವುದು! ದುಃಖಸಂ ಬಂಧವಿಲ್ಲದೆಯೂ, ಎಲ್ಲೆಯಿಲ್ಲದೆಯೂ ಇರುವ ನಿತ್ಯಾನಂದಸ್ವರೂಪವು ಆ ಪರಮಾತ್ಮನೊಬ್ಬನಿಗೇ ಹೊರತು ಬೇರೊಬ್ಬರಿಗಿದ್ದವು. ಜೀವನಂತೆ ಅವನಿಗೆ ಕರ್ಮಸಂಬಂಧವೂ ಇರುವುದಿಲ್ಲ, ಆ ಸ್ವರೂಪವು ಪ್ರಕೃತಿಪುರುಷರಿಗಿಂತಲೂ ವಿಲಕ್ಷಣವಾಗಿ, ವಿಕಾರವಿಲ್ಲದೆ,ಯಾವಾಗಲೂ ಏಕಸ್ವರೂಪವಾಗಿರುವುದು, ಆ ಪರಮಾತ್ಮನು ಸಮಸ್ಯಚಿದಚಿತ್ತುಗಳಲ್ಲಿಯೂ ಅಂತರಾಮಿಯಾಗಿ ನೆಲೆಗೊಂ ಡಿದ್ದರೂ, ಆಯಾ ವಸ್ತುವಿನಲ್ಲಿರತಕ್ಕ ದೋಷಗಳನ್ನು ತನಗೆ ಆಂಟಿಸಿಕೊಳ್ಳದೆ ಇರಬಲ್ಲನು, ಆತನ ಸ್ವರೂಪವು ಕೇವಲ ಜ್ಞಾನಮಯವಾದುದರಿಂದ, ಯಾ ವಾಗಲೂ ಜಡತ್ವವನ್ನು ಹೊಂದದು. ಅದಕ್ಕೆ ಅತ್ರಿತರ ಸಂಸಾರಬಂಧವನ್ನು ನೀಗಿಸತಕ್ಕ ಶಕ್ತಿಯುಂಟು!ಆ ಭಗವಂತನು ಹಸಿವು, ಬಾಯಾರಿಕೆ ಮುಂತಾದ ವಿಕಾರಗಳಿಗೆ ಈಡಾಗತಕ್ಕವನಲ್ಲ. ಆತನು ತನ್ನನ್ನು ಉಪಾಸನೆಮಾಡತಕ್ಕ ವರಿಗೂ ಆ ಬಗೆಯ ವಿಕಾರಗಳಿಲ್ಲದಂತೆ ತಪ್ಪಿಸಿ ಶಾಂತಿಯನ್ನುಂಟುಮಾಡಬಲ್ಲ ನು. ಯೋಗೀಶ್ವರರುಮಾತ್ರ ಜೀವಾತ್ಮನಿಗೆ ಸಹಚರವಾದ ಮನಸ್ಸನ್ನು ಚೆ ನಾಗಿ ಸಿಗ್ರಹಿಸಿ, ಆ ಭಗವಂತನ ಸ್ವರೂಪದಲ್ಲಿ ಅದನ್ನು ದೃಢವಾಗಿ ನೆಲೆ ಗೊಳಿಸಿ, ಸಮಸ್ಯಸಂಶಯಗಳನ್ನೂ ನೀಗಿಬಿಡುವರು. ತಾನಾಗಿಯೇ ಬೇಕಾ ದಷ್ಟು ಮಳೆಯನ್ನು ಸುರಿಸಬಲ್ಲ ದೇವೇಂದ್ರನು, ಕೊಳ ಬಾವಿ ಮುಂತಾದುವು ಗಳನ್ನು ತೋಡುವುದಕ್ಕೆ ಬೇಕಾದ ಗುದ್ದತಿ, ಮುಂತಾದಸಾಧನಗಳನ್ನು ಲಕ್ಷಿಸದೆ ತೊರೆದುಬಿಡುವಂತೆ,ಅಂತಹ ಭಗವದುಪಾಸಕರು, ಸ್ವರ್ಗಾದಿಸುಖ