ಪುಟ:ಶ್ರೀಮದ್ಭಾಗವತವು ಪ್ರಥಮ ದ್ವಿತೀಯ ಸ್ಕಂಧಗಳು.djvu/೩೦೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

970 ಶ್ರೀಮದ್ಭಾಗವತವು [ಅಧ್ಯಾ. ೮. ಡುತ್ತ ಸುಮ್ಮನಿರುವಕ್ರಮವನ್ನೂ,ನನಗೆ ವಿಶದವಾಗಿ ತಿಳಿಸಬೇಕು. ( ಎಲೆ ಮಹಾತ್ಮನೆ ! ನೀನು ಸತ್ವಜ್ಞನಾದುದರಿಂದ ಇವೆಲ್ಲವನ್ನೂ ವಿವರಿಸಿ ತಿಳಿಸು ವುದಕ್ಕೆ ನೀನು ಸಮರ್ಥನೆಂಬುದರಲ್ಲಿ ಸಂದೇಹವಿಲ್ಲ. ಮಹಾವಿಪತ್ತಿನ ಬಾ ಯಿಯಲ್ಲಿ ಸಿಕ್ಕಿ ಬಿದ್ದಿರುವ ನನಗೆ ಈಗ ನಿನ್ನನ್ನು ಬಿಟ್ಟರೆ ಬೇರೆ ದಿಕ್ಕಿಲ್ಲ : ಓ ಮುನೀಂದ್ರಾ!ನನ್ನಲ್ಲಿ ಕರುಣೆಯಿಟ್ಟು ಇವೆಲ್ಲವನ್ನೂ ನನಗೆ ವಿವರವಾಗಿ ತಿಳಿಸಿ ನನ್ನನ್ನು ಕೃತಾರ್ಥನನ್ನಾಗಿ ಮಾಡಬೇಕು. ಹಿಂದೆ ಬ್ರಹ್ಮನಾರದಸಂವಾದ ದಲ್ಲಿ ವಿದಿತವಾದ ಸಂಪ್ರದಾಯಾರ್ಥಗಳೆಲ್ಲವೂ ನಿನಗೆ ತಿಳಿದಂತೆ ಮತ್ತೊ ಬೃರಿಗೆ ತಿಳಿಯವು. ಆದುದರಿಂದ ಈ ನನ್ನ ಪ್ರಶ್ನೆಗಳೆಲ್ಲಕ್ಕೂ ತಕ್ಕ ಉತ್ತರವ ನ್ನು ಕೊಡುವುದಕ್ಕೆ ನೀನೊಬ್ಬನೇ ಸಮದ್ಧನು. ಬ್ರಾಹ್ಮಣಶಾಪದಿಂದ ಬೆಂ ದು, ಅನ್ನ ಪಾನಗಳನ್ನು ಬಿಟ್ಟು,ತತ್ತಳಿಸುತ್ತಿರುವ ನಾನು, ಈ ನಿನ್ನ ತತ್ತೋ ಪದೇಶಗಳೆಲ್ಲವನ್ನೂ ಸಾವಧಾನದಿಂದ ಹೇಗೆ ಕೇಳಬಲ್ಲೆನೆಂದು ಸಂದೇಹಿಸ ಬೇಡ ! ಓ ಮಹಾತ್ಮಾ! ನಾನು ಬ್ರಾಹ್ಮಣಶಾಪದಿಂದ ಬೆಂದವನಾದರೂ, ನಿರಾಹಾರನಾಗಿದ್ದರೂ, ಈಗ ನಿನ್ನ ಮಖಪದ್ಯದಿಂದ ಹೊರಟ ಹರಿಕಥಾ ಮೃತವನ್ನು ಕುಡಿದಮೇಲೆ, ನನ್ನ ಪ್ರಾಣಿಗಳು ನನ್ನನ್ನು ಬಿಟ್ಟು ಹೋಗಲಾ ರದೆ ಉತ್ಸಾಹವಿತಿಷ್ಯವಾಗಿಯೇ ಇರುವುವು. ನನ್ನ ಇಂದ್ರಿಯಗಳು ವ್ಯಾ ಕುಲತೆಯಿಲ್ಲದೆ ಪ್ರಸನ್ನ ವಾಗಿಯೇ ಇರುವುವು. ! ಆದುದರಿಂದ ನೀನು ನನ್ನ ಮನಸ್ಸಿನ ಸಂದೇಹಗಳೆಲ್ಲವೂ ನೀಗುವಂತೆ, ನಾನು ಕೇಳಿದ ಪ್ರಶ್ನೆಗಳಿಗೆಲ್ಲಕ್ಕೂ ಉತ್ತರವನ್ನು ಕೊಟ್ಟು ನನ್ನನ್ನು ಕೃತಾರ್ಥವನ್ನಾಗಿ ಮಾಡಬೇಕು.” ಎಂದನು. ಹೀಗೆ ಪರೀಕ್ಷಿದ್ರಾಜನು ಪ್ರಶ್ನೆ ಮಾಡಿದುದನ್ನು ಕೇಳಿ, ತತ್ತೋಪದೇಶದಲ್ಲಿ ನಿಪುಣನಾದ ಶುಕಮುನಿಯ) ಬಹಳ ಸಂತೋಷಗೊಂಡು, ಆ ಮಹಾಸಭೆಯ ಕ್ಲಿ, ವೇದತುಲ್ಯವಾದ ಭಾಗವತವೆಂಬ ಪುರಾಣವನ್ನು ಪರೀಕ್ಷಿದ್ರಾಜನಿಗೆ ಈ ಪದೇಶಿಸತೊಡಗಿದನು. ಮೊದಲು ಸೃಷ್ಟಾರಂಭದಲ್ಲಿ ಭಗವಂತನೇ ಬ್ರಹ್ಮ ದೇವನಿಗೆ ಉಪದೇಶಿಸಿದುದರಿಂದ, ಭಾಗವತವೆನಿಸಿದ ಪುರಾಣರತ್ನವನ್ನು, ಅದೇ ಕ್ರಮದಲ್ಲಿಯೇ ಪಾಂಡುಕುಲತಿಲಕನಾದ ಪರೀಕ್ಷಿತಿಗೆ ಕ್ರಮವಾಗಿ ತಿಳಿಸಿ ಲಾರಂಭಿಸಿದನು. ಇಲ್ಲಿಗೆ ಎಂಟನೆಯ ಅಧ್ಯಾಯವು.