ಪುಟ:ಶ್ರೀಮದ್ಭಾಗವತವು ಪ್ರಥಮ ದ್ವಿತೀಯ ಸ್ಕಂಧಗಳು.djvu/೩೧೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅಥ್ಯಾ. ೯.] ದ್ವಿತೀಯಸ್ಕಂಧವು. ೨೯೬ ಯಿಂದ ನನ್ನ ನ್ನಾರಾಧಿಸಿದುದಕ್ಕಾಗಿ ನಿನ್ನಲ್ಲಿ ನಾನು ಪೂರ್ಣಾನುಗ್ರಹವ ನ್ನು ತೋರಿಸುವೆನು. ಹೀಗಿಲ್ಲದೆ ಕೇವಲ ಡಂಭಕ್ಕಾಗಿ ಕಪಟವೇಷವನ್ನು ಹಿ ಡಿದ ಕುತ್ತಿತಯೋಗಿಗಳು ನನ್ನನ್ನು ಕುರಿತು ಎಷ್ಟು ದಿನಗಳವರೆಗೆ ತಪಸ್ಸು ಮಾಡಿದರೂ ನಾನು ಸಂತೋಷಿಸುವನಲ್ಲ. ವತ್ಸ ಚತುರುಖಾ ! ನಾನು ನಿನ್ನನ್ನು ಅನುಗ್ರಹಿಸಿರುವೆನು! ನಿನಗೆ ಇಷ್ಟವಾದ ವರವನ್ನು ಕೇಳು!ತಪ್ಪದೆ ಕೊಡುವೆನು! ನಿನಗೆ ಕ್ಷೇಮವುಂಟಾಗಲಿ! ಬ್ರಹ್ಮಾ! ಲೋಕದಲ್ಲಿ ಪ್ರಾಣಿ ಗಳು ತಮತಮಗೆ ಬೇಕಾದ ಕೋರಿಕೆಗಳನ್ನು ಈಡೇರಿಸಿಕೊಳ್ಳುವುದಕ್ಕಾಗಿ, ನಡೆಸತಕ್ಕ ಪ್ರಯಾಸಗಳೆಲ್ಲವೂ ನನ್ನ ದರ್ಶನವನ್ನು ಪಡೆಯುವವರೆಗೆ - ಮಾ ತ್ರವೇ ಅಲ್ಲದೆ ಇದಕ್ಕಿಂತಲೂ ಮೇಲಿನ ಅಭೀಷ್ಟ್ರಗಳೆಂದೂ ಇರುವುದಿಲ್ಲ ! ಆ ವಿಧವಾದ ಕೋರಿಕೆಯೇ ಈಗ ನಿನಗೆ ಲಭಿಸಿದಮೇಲೆ, ಇನ್ನು ನಿನಗೆ ಬೇ ಕಾದುದೇನು? ಇದರಿಂದ ನಿನಗೆ ಸಮಸ್ಯಕಲ್ಯಾಣಗಳೂ ಸಿದ್ಧಿಸುವುವು! ಓ ಕುಮಾರಾ!ನಿನಗೆ ಈಗ ಈ ನನ್ನ ಲೋಕವನ್ನು ಕಣ್ಣಾರೆ ಕಾಣತಕ್ಕ ಭಾಗ್ಯ ವು ಲಭಿಸಿದುದು, ನಿನ್ನ ತಪಃಪ್ರಭಾವದಿಂದಲೇ ಎಂದು ತಿಳಿಯಬೇಡ! ನಿನಗೆ ಈ ಭಾಗ್ಯವು ಲಭಿಸಿದುದೂ ನನ್ನ ಸಂಕಲ್ಪ ಪ್ರಭಾವದಿಂದಲ್ಲದೆ ಬೇರೆಯಲ್ಲ ! ಇದನ್ನು ನೀನು ನಿಸ್ಸಂಶಯವಾಗಿ ನಂಬು! ವತ್ಪಾ! ಇದಕ್ಕೆ ಬೇರೆ ನಿದರ್ಶನ ವೇಕೆ ? ನಾನು ಮೊದಲು ನಿನ್ನ ಕಣ್ಣಿಗೆ ಕಾಣಿಸದಂತೆ, ಏಕಾಂತಸ್ಯ ಳದಲ್ಲಿದ್ದು, ಈ ತಪ " ( ತಪ ” ಎಂದು ನುಡಿದ ವಾಕ್ಯವನ್ನು ಕೇ ಆದಮೇಲಲ್ಲವೇ ನಿನಗೆ ಈಬುದ್ಧಿಯು ಹುಟ್ಟಿತು ? ಆದುದರಿಂದ ನಿನಗೆ ಯಾವವಿಧದಲ್ಲಿಯೂ ಸ್ವಾತಂತ್ರವಿಲ್ಲ.ಇದಲ್ಲದೆ ನೀನು ಕೇವಕರ್ಮಪ್ರವ ನಾಗಿ, ಅದಕ್ಕೆ ಸಾಧನಗಳನ್ನು ಕಾಣದೆ ಚಿಂತಿಸುತಿದ್ಯಾಗಲೂ ನನ್ನ ಪ್ರೇರ ಣೆಯಿಂದಲ್ಲವೇ ನಿನಗೆ ಈ ತಪಸ್ಸಿನಲ್ಲಿ ಬುದ್ಧಿಯು ಹುಟ್ಟಿತು? ಆದುದರಿಂದ ನನ್ನ ಪ್ರೇರಣೆಯಿಲ್ಲದೆ ಯಾರೂ ಯಾವ ಕಾರ್ಯವನ್ನೂ ನಡೆಸಲಾರರು. ಮತ್ತು ನನ್ನ ಆಜ್ಞೆಯನ್ನನುಸರಿಸಿ ನೀನು ನಡೆಸಿದ ತಪಸ್ಸಿಗಾಗಿ ನಾನು ಪ್ರಸನ್ನ ನಾದೆನೇಹೊರತು ನಿನ್ನ ನಿಯಮಗಳಿಗೆ ಮೆಚ್ಚಿ ನಿನಗೆ ಗೋಚರಿಸಿ ದವನಲ್ಲ. ಆದುದರಿಂದ ಕಾರ್ಯಸಾಧನೆಗಳಿಗೆ ತಪಸ್ಸಿಗಿಂತಲೂ ಉತ್ತಮ ಸಾಧನವು ಬೇರೊಂದಿಲ್ಲ! ಎಲೈ ವತ್ಸನೆ ! ಮುಖ್ಯವಾಗಿ ತಪಸ್ಸೆಂಬುದೇ