ಪುಟ:ಶ್ರೀಮದ್ಭಾಗವತವು ಪ್ರಥಮ ದ್ವಿತೀಯ ಸ್ಕಂಧಗಳು.djvu/೩೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

m ಶ್ರೀಮದ್ಭಾಗವತಮಾಹಾತ್ಮವು. ಚಾಜಗಳೂ ಕೂಡ ಇದರಿಂದ ವಿಮೋಚನಹೊಂದುವುವು. ಈ ವಿಷ ಯದಲ್ಲಿ ನಿನಗೊಂದು ಇತಿಹಾಸವನ್ನು ಹೇಳುವೆನು ಕೇಳು. - wದುಂಧುಕಾರಿವೃತ್ತಾಂತವು.•ww ಪೂತ್ವದಲ್ಲಿ ತುಂಗಭದ್ರಾ ತೀರದಲ್ಲಿ ಉತ್ತಮವಾದ ಒಂದು ಪಟ್ಟಣ ವಿದ್ದಿತು. ಅಲ್ಲಿನ ನಿವಾಸಿಗಳೆಲ್ಲರೂ ವರ್ಣಾಶ್ರಮಧರ್ಮನಿರತರಾಗಿದ್ದರು. ಅದರಲ್ಲಿ ಆತ್ಮದೇವನೆಂಬ ಒಬ್ಬ ಬ್ರಾಹ್ಮಣನಿದ್ದನು. ಅವನು ನಾಲ್ಕು ವೇದ ಗಳನ್ನೂ ತಿಳಿದವನು. ಶಾತಸ್ಮಾರ್ತ ಕರಗಳಲ್ಲಿ ನಿರತನಾದವನು. ಎರಡ ನೆಯ ಸೂರನಂತೆ ತೇಜಸ್ವಿಯು, ಆತನು ಭಿಕಾವೃತ್ತಿಯಿಂದಲೇ ಬಹಳ ಧನ ವನ್ನು ಸಂರಾಧಿಸುತ್ತಿದ್ದನು ಅವನ ಪತ್ನಿಗೆ ದುಂಧುಲಿಯೆಂದು ಹೆಸರು. ಆಕೆಯು ಬಹಳ ರೂಪವತಿ!ಸತ್ಯುಲರಲ್ಲಿ ಹುಟ್ಟಿದವಳು. ಆದರೆ ತಾನು ಹಿಡಿ ದ ಹಟವನ್ನು ಮಾತ್ರ ಎಂದಿಗೂ ಬಿಡದೆ, ತನ್ನ ಮಾತನ್ನೆ ಸಾಧಿಸುವ ಸ. ಭಾವವುಳ್ಳವಳು. ಊರುಮಾತುಗಳನ್ನಾಡುವುದರಲ್ಲಿಯೇ ವಿಶೇಷವಾಗಿ ಕಾಲ ವನ್ನು ಕಳೆಯುತ್ತ, ಬಹಳ ಬಾಯಾಳಿಯೆನಿಸಿಕೊಂಡಿದ್ದಳು. ಅವಳ ಮನಸ್ಸಿ ನಲ್ಲಿ ದಯೆಯೆಂಬುದು ಸ್ವಲ್ಪ ಮಾತ್ರವೂ ಇರಲಿಲ್ಲ. ಮಾತಿಗೆ ಮೊದಲೇ ಕಲ ಹವನ್ನು ತೆಗೆಯುವಳು. ಗೃಹಕೃತ್ಯವನ್ನು ಬಹಳ ಒಪ್ಪಂದ ನಡೆಸುತ್ತ, ಬಹಳ ಜಿಪುಣತನದಿಂದ ಕಾಲವನ್ನು ಕಳೆಯುತಿದ್ದಳು. ಹೀಗೆ ಆ ದಂಪತಿ ಗಳಿಬ್ಬರೂ ಪರಸ್ಪರ ಪ್ರೀತಿಯಿಂದಿದ್ದರೂ, ಅವರಲ್ಲಿದ್ದ ಹಣವಾಗಲಿ, ಭೋಗ ಸಾಮಗ್ರಿಗಳಾಗಲಿ ಯಾವುದೂ ಅವರ ಸುಖಕ್ಕೆ ಒದಗಲಿಲ್ಲ. ಅಷ್ಟು ಹಣವಿ ದ್ದರೂ ಕಷ್ಟದಿಂದಲೇ ಕಾವಲನ್ನು ಕಳೆಯುತ್ತಿದ್ದರು. ಬಹುಕಾಲದವರೆಗೆ ಅವರಿಗೆ ಸಂತಾನವೂ ಉಂಟಾಗಲಿಲ್ಲ. ಆ ಸಂತಾನಪ್ರಾಪ್ತಿಗಾಗಿ ಅವರಿಗೆ ಕೊನೆಕೊನೆಗೆ ಧರ್ಮಕಾರಗಳನ್ನು ನಡೆಸಬೇಕೆಂಬ ಬುದ್ದಿಯು ಹುಟ್ಟಿತು. ಬಡಬಗ್ಗರಿಗೂ, ಬ್ರಾಹ್ಮಣರಿಗೂ, ಗೋದಾನಗಳನ್ನೂ, ಭೂದಾನಗಳನ್ನೂ, ಸುವರ್ಣ ದಾನಗಳನ್ನೂ ಮಾಡುತ್ತ ಬಂದರು. ಈ ನೆವದಿಂದ ಅವರಲ್ಲಿದ್ದ ಹಣದಲ್ಲಿ ಅರ್ಧಭಾಗವು ಕಳೆದುಹೋಯಿತು. ಇಷ್ಟಾದರೂ ಆ ದಂಪತಿಗಳಿಗೆ ಒಂದು ಗಂಡುಕೂಸಾಗಲಿ, ಹೆಣ್ಣು ಕೂಸಾಗಲಿ ಯಾವುದೂ ಹುಟ್ಟಲಿಲ್ಲ.