ಪುಟ:ಶ್ರೀಮದ್ಭಾಗವತವು ಪ್ರಥಮ ದ್ವಿತೀಯ ಸ್ಕಂಧಗಳು.djvu/೩೨೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅಧ್ಯಾ, ೯.] ದ್ವಿತೀಯಸ್ಕಂಧವು. ೩೦೧ ಶರೀರವಾಗಿ ಹೊಂದುವವನೂ ನಾನೇ! ಸಮಸ್ತ ಜಗತ್ತನ್ನೂ ಉಪಸಂಹಾರ ಮಾಡಿಕೊಂಡು ಕೊನೆಗೆ ನಿಲ್ಲತಕ್ಕವನೂ ನಾನೊಬ್ಬನೇ ! ಹೀಗೆ ಕಾರಕಾರ ಣಾವಸ್ಥೆಗಳೆರಡರಲ್ಲಿಯೂ ಪ್ರಕೃತಿಪುರುಷರನ್ನೇ ನಾನುಶರೀರವಾಗಿ ಹೊಂದಿ ದ್ದರೂ, ಹಾಗೆ ಶರೀರಭೂತಗಳಾದ ಚೇತನಾಚೇತನಗಳಲ್ಲಿರುವ ಅಜ್ಞಾ ದಿ ದೋಷಗಳುಮಾತ್ರ ನನ್ನಲ್ಲಿ ಅಂಟಲಾರವು. ಶರೀರದ ಕಾರ್ಯಗಳಾದ ಬಾಲ್ಯ, ಯೌವನ, ವಾರ್ಧಕ ಮುಂತಾದ ವಿಕಾರಗಳು ಜೀವನಿಗೆ ಹೇಗೆ ಸಂ ಬಂಧಿಸುವುದಿಲ್ಲವೋ ಹಾಗೆಯೇ, ಜೀವಪ್ರಕೃತಿಗಳೆರಡನ್ನೂ , ಶರೀರರೂಪವಾ ಗಿ ಹೊಂದಿದ ನನ್ನಲ್ಲಿ, ಜೀವನಿಗುಂಟಾಗುವ ಅಜ್ಞತೆಯಾಗಿ, ಶೋಕ ಮೋಹ ಗಳಾಗಲಿ, ಇನ್ನೂ ಇತರ ವಿಧವಾದ ಯಾವದೋಷಗಳಾಗಲಿ ಆಂಟಲಾರವು. ಹಾಗೆಯೇ ಅಚೇತನಗಳಲ್ಲಿರುವ ಜಡತ್ವವಾಗಲಿ, ಪರಿಣಾಮ ಸ್ವಭಾವವಾಗಲಿ ನನ್ನ ಸಂಬಂಧಿಸಲಾರವು. ನಾನು ಕಾಣಿಸತಕ್ಕ ಈ ಕಾರ್ಯಕಾರಣಸ್ವ ರೂಪಗಳೆರಡನ್ನೂ ನನಗೆ ಶರೀರಭೂತಗಳಾದ ಚೇತನಾಚೇತನಗಳ ಮೂ ಲಕವಾಗಿಯೇ ನಡೆಸುವೆನು. ಹೀಗೆ ಚಿದಚಿತ್ತುಗಳಿಗಿಂತಲೂ ವಿಲಕ್ಷಣವಾದ ನನ್ನ ಸ್ವರೂಪವನ್ನು ನಿನಗೆ ತಿಳಿಸಿದೆನಷ್ಟೆ? ಇನ್ನು ಅದಕ್ಕೆ ಅಂಗಭೂತಗಳಾಗಿ ತಿಳಿಯಬೇಕಾದ ಚೇತನಾಚೇತನಗಳ ಸ್ವರೂಪವನ್ನೂ ತಿಳಿಸುವೆನುಕೇಳು. ಜೀ ವಾತ್ಮನು ಜ್ಞಾನಾನಂದಸ್ವರೂಪನಾಗಿರುವನು. ಲೋಕದಲ್ಲಿ ಎಲ್ಲರೂ ಆಶೆ ಪಡತಕ್ಕ ಪುರುಷರಗಳು ಜ್ಞಾನಾನಂದಗಳೆರಡೇ ಹೊರತು ಬೇರೆಯಲ್ಲ. ಹೀಗೆ ಜ್ಞಾನಾನಂದಸ್ವರೂಪನಾದುದರಿಂದ ಉತ್ತಮಪುರುಷಾರವೆನಿಸಿ ಕೊಂಡ ಚೇತನತತ್ತ್ವಕ್ಕಿಂತಲೂ, ಪ್ರಕೃತಿಯೆಂಬುದು ಪ್ರತ್ಯೇಕವಾಗಿ ಬೇರೊಟ್ಟಿರುವುದು. ಪ್ರಕೃತಿಯು ತೋರುವಾಗ ಚೇತನತತ್ವವು ಕಾಣಲಾ ರದು. ಹಾಗೆಯೇ ಚೇತನತತ್ವವು ತೋರುವಾಗ ಪ್ರಕೃತಿತತ್ವವು ತೋರಲಾ ರದು. ಅಂಧಕಾರವಿರುವಾಗ ತೇಜಸ್ಕೂ, ತೇಜಸ್ಸಿರುವಾಗ ಅಂಧಕಾರವೂ ಹೇಗೆ ತೋರಲಾರದೋ, ಹಾಗೆಯೇ ಜೀವಪ್ರಕೃತಿಗಳೆಂಬೆರಡರಲ್ಲಿ ಒಂದು ತೋರುವಾಗ ಮತ್ತೊಂದು ತೋರಲಾರದು. ಹೀಗೆ ಮಾಡುವುದು ನನ್ನ ಮಾಯೆಯ ಕಾರ್ಯವೆಂದೇ ತಿಳಿ.ಈಜೀವಪ್ರಕೃತಿ ತತ್ವಗಳಲ್ಲಿರುವ ಭೇದವನ್ನು ತಿಳಿಸುವೆನು ಕೇಳು. ಚೇತನವಾದ ಆತ್ಮತತ್ವವೆಂಬುದು ಅಣುವಾಗಿಯೂ,