ಪುಟ:ಶ್ರೀಮದ್ಭಾಗವತವು ಪ್ರಥಮ ದ್ವಿತೀಯ ಸ್ಕಂಧಗಳು.djvu/೩೨೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

to೪ ಶ್ರೀಮದ್ಭಾಗವತವು [ಅಧ್ಯಾ. ೯. ನನ್ನ ವಶವಾಗಿರುವುದರಿಂದ,ನನ್ನನ್ನು ಬಿಟ್ಟು ಬೇರೆ ವಸ್ತುವಿಲ್ಲವೆಂದು ಮೊದ ಲೇ ಹೇಳಿದೆನಷ್ಟೆ? ಈ ರಹಸ್ಯವನ್ನು ಮಾತ್ರ ನೀನು ಯಾವಾಗಲೂ ಮರೆ ಯದೆ ಮನಸ್ಸಿನಲ್ಲಿ ಶ್ರದ್ಧೆಯಿಂದ ಭಾವಿಸಿಕೊಂಡು ಬರುತಿದ್ದ ಪಕ್ಷದಲ್ಲಿ ನಿನಗೆ ಸೃಷ್ಟಿಕಾಲದಲ್ಲಿ, ಯಾವ ವಸ್ತುವಿನಲ್ಲಿಯೂ ಮೋಹವಾಗಲಿ, ಮಮತೆಯಾ ಗಲಿ, ಅಹಂಕಾರವಾಗಲಿ, ಉಂಟಾಗಲಾರದು. ಈ ನನ್ನ ಶಾಸನವನ್ನನುಸರಿಸಿ ಸೃಷ್ಟಿಕಾರ್ಯವನ್ನು ನಡೆಸು ! ನಿನಗೆ ಮೋಹಾದಿಗಳೊಂದೂ ಉoಟಾಗ ದಂತೆ ವರವನ್ನು ಕೊಟ್ಟಿರುವೆನು. ನನ್ನನ್ನು ಬಿಟ್ಟು ಬೇರೆ ವಸ್ತುವಿಲ್ಲವೆಂಬ ಇ ದೇ ಅಭಿಪ್ರಾಯವನ್ನು ರುದ್ರನೂಕೂಡ ತನ್ನ ಮನಸ್ಸಿನಲ್ಲಿ ಮರೆಯದೆ ದೃಢ ವಾಗಿಟ್ಟುಕೊಂಡಿದ್ದ ಪಕ್ಷದಲ್ಲಿ ಅವನೂ ತಾನು ನಡೆಸಬೇಕಾದ ಸಂಹಾರ ಕಾರ್ಯದಲ್ಲಿ ಅಹಂಕಾರವಿಲ್ಲದಂತಿರುವನು”, ಎಂದನು. ಕರ್ಮಸಂಬಂಧ ಗಳಾದ ಉತ್ಪತ್ತಿ ವಿನಾಶಗಳಿಲ್ಲದವನಾಗಿಯೂ, ಆಶ್ರಿತರ ಪಾಪಗಳನ್ನು ನೀ ಗಿಸತಕ್ಕವನಾಗಿಯೂ ಇರುವ ಭಗವಂತನು ಸೃಷ್ಠಿರೂಪಗಳಾದ ದೇವಾದಿ ಭೂತಗಳಿಗೆ ಮುಖ್ಯಾಧಿಪತಿಯಾದ ಬ್ರಹ್ಮದೇವನನ್ನು ಕುರಿತು ಈ ವಿಧವಾ ಗಿ ಉಪದೇಶಿಸಿ, ಆ ಬ್ರಹ್ಮನು ನೋಡುತ್ತಿರುವಹಾಗೆಯೇ ತನ್ನ ನಿವಾ ಸಸ್ಥಾನವಾದ ವೈಕುಂಠಲೋಕದೊಡನೆ ಕಣ್ಮರೆಯಾಗಿ ಬಿಟ್ಟನು. ಆಗ ಬ್ರಹ್ಮದೇವನು ಅತ್ಯಂತ ಭಕ್ತಿವಿಶಿಷ್ಟನಾಗಿ ಆ ನಾರಾಯಣನ ಮಹಿಮೆ ಯನ್ನು ಮನಸ್ಸಿನಲ್ಲಿ ಬಾರಿಬಾರಿಗೂ ಕೊಂಡಾಡಿ ಹಿಗ್ಗುತ್ತ,ಸ್ವಲ್ಪ ಹೊತ್ತಿನವ ರೆಗೆ ಕೈಜೋಡಿಸಿದಂತೆಯೇ ಸ್ತಬ್ಬನಾಗಿನಿಂತಿದ್ದನು. ಮುಂದೆ ತಾನು ಸೃಷ್ಟಿಸಬೇಕಾದ ದೇವಮನುಷ್ಯಾದಿ ಸಮಸ್ತಪ್ರಾಣಿಗಳನ್ನೂ, ಮನಸ್ಸಿನ ಭಾವಿಸಿಕೊಂಡಿದ್ದುದರಿಂದ ಸಮಸ್ತಭೂತಸ್ವರೂಪನಾದ ಆ ಬ್ರಹ್ಮದೇ ವನು ಪೂರ್ವಕಲ್ಪದಲ್ಲಿದ್ದಂತೆಯೇ ಸಮಸ್ತ ಪ್ರಪಂಚವನ್ನೂ ಸೃಷ್ಟಿಸಿ ದನು. ಎಲೈ ಪರೀಕ್ಷಿದ್ರಾಜನೆ ! ಆಮೇಲೆ ಬ್ರಹ್ಮನು ತಾನು ಸೃಷ್ಟಿಸಿದ ಪ್ರಪಂಚಕ್ಕೆ ಯಾವವಿಧದಿಂದ ಹಿತವನ್ನುಂಟುಮಾಡಬಹುದೆಂದು ಮನಸ್ಸಿ ನಲ್ಲಿ ಆಲೋಚಿಸುತ್ತಿದ್ದು ಒಮ್ಮೆ ಇದಕ್ಕಾಗಿ ಯಮನಿಯಮರೂಪವಾದ ತಪಸ್ಸನ್ನು ತೊಡಗಿದನು. ಈ ಸಮಯಕ್ಕೆ ಸರಿಯಾಗಿ ಆತನ ಪುತ್ರನಾದ ನಾರದನು ಅಕಸ್ಮಾತ್ತಾಗಿ ಅಲ್ಲಿಗೆ ಬಂದು ಸೇರಿದನು. ಆ ನಾರದಮಹ