ಪುಟ:ಶ್ರೀಮದ್ಭಾಗವತವು ಪ್ರಥಮ ದ್ವಿತೀಯ ಸ್ಕಂಧಗಳು.djvu/೩೨೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅಧ್ಯಾ. ೧೦-] ದ್ವಿತೀಯಸ್ಕಂಧವು. ೩of ನು ತನಗೆ ಆಶ್ರಯಸ್ಥಾನವಾಗಿ ಮಾಡಿಕೊಂಡಿದ್ದುದರಿಂದ, ಅವನು ನಾ ರಾಯಣನೆನಿಸಿಕೊಂಡನು. ಮಹತ್ತತ್ವದಿಂದ ಹಿಡಿದು ಹೃಥಿವಿಯವರೆಗಿರತಕ್ಕ ದ್ರವ್ಯವು ಎಂದರೆ, ಭೂತಗರ್ವವೂ, ಜೀವಾತ್ಮನ ಪುಣ್ಯಪಾಪರೂಪವಾದ ಕರ್ಮವೂ, ಸತ್ಯಾದಿಗುಣಗಳ ಹೆಚ್ಚು ಕಡಿಮೆಗೆ ಕಾರಣವೆನಿಸಿದ ಕಾಲವೂ, ಪ್ರಕೃತಿಯಲ್ಲಿರುವ ವಿಕಾರಹೊಂದುವ ಸ್ವಭಾವವೂ, ಇವೆಲ್ಲವೂ ಆ ಪರಮ ಪುರುಷನ ಅನುಗ್ರಹದಿಂದಲೇ ಆಗಿರುವುವು. ಆತನು ಉಪೇಕ್ಷಿಸಿದ ಪಕ್ಷದಲ್ಲಿ ಇವೊಂದಕ್ಕೂ ಸತ್ತೆಯೇ ಇಲ್ಲವು. ಪ್ರವಾದಿಗಳ ಸ್ಥಿತಿ, ಪ್ರವೃತ್ತಿ ಮುಂತಾ ದುವುಗಳೆಲ್ಲಾ ಭಗವಂತನ ಸಂಕಲ್ಪವನ್ನನುಸರಿಸಿಯೇ ಬರುವುವು. ಇಂತಹ ನಾರಾಯಣನು ಸೃಷ್ಟಿಗೆ ಮೊದಲು ಬೇರೆ ಬೇರೆಯಾಗಿ ವಿಭಾಗಿಸಿ ನೋಡುವು ದಕ್ಕಾಗಲಿ, ಹೇಳುವುದಕ್ಕಾಗಲಿ ಸಾಧ್ಯವಿಲ್ಲದೆ ಏಕಾಕಾರವಾಗಿಯೂ, ಸೂ ಕಗಳಾಗಿಯೂ ಇದ್ದ ಚೇತನಾಚೇತನಗಳೆಲ್ಲವನ್ನೂ ತನಗೆ ಶರೀರವನ್ನಾಗಿ ಮಾಡಿಕೊಂಡು, ತಾನೊಬ್ಬನೇ ಇರುತಿದ್ದನು, ಆಮೇಲೆ ದೇವಮನುಷ್ಯಾದಿ ಗಳಾದ ಬೇರೆಬೇರೆ ನಾಮರೂಪಗಳನ್ನು ಹೊಂದಬೇಕೆಂಬ ಉದ್ದೇಶವು ಆತನಿಗೆ ಹುಟ್ಟಿತು. ಆಗ ತನ್ನನ್ನೇ ತಾನು ಅನುಭವಿಸುತ್ತ ಮಲಗಿದ್ದ ತನ್ನ ಯೋಗತಲ್ಪದಿಂದ ಮೇಲೆದ್ದು,ತನಗೆ ಶರೀರಭೂತವಾಗಿಯೂ, ಚೇತನಾಡೇ ತನ ಸ್ವರೂಪವುಳ್ಳದಾಗಿಯೂ ಇದ್ದ ಕಾರಣದ್ರವ್ಯವನ್ನೇ ಹಿಡಿದು ಪ್ರಕೃತಿ ಯ ತ್ರಿಗುಣಗಳಲ್ಲಿ ಒಂದಾದ ರಜೋಗುಣವನ್ನೆ ಪ್ರಧಾನವಾಗಿ ಹೊಂದಿದ ಚತುರುಖನನ್ನು ತನ್ನ ಸಂಕಲ್ಪದಿಂದ ಪಡೆದು, ಆತನಿಗೆ ತಾನು ಅಂತರಾ ತ್ಯನಾಗಿದ್ದು, ಜ್ಞಾತೃ, ಜ್ಞಾನ, ಜೋಯರೂಪವಾದ ಮೂರುವಿಧದಿಂದ ಆ ಚಿದಚಿದಾತ್ಮಕ ಕಾರಣದ್ರವ್ಯವನ್ನೇ ವ್ಯಷ್ಟಿರೂಪವಾಗಿ ಸೃಷ್ಟಿಸಿದನು. ಅವುಗಳಲ್ಲಿ ದಿಕ್ಕು ಮೊದಲಾದ ದೇವತೆಗಳಿಂದ ಅಧಿಷ್ಟಿತವಾದ ಏಕಾದಶೇಂದ್ರಿ ಯವರ್ಗವು ಆಥಿದೈವವೆನಿಸುವುದು, ಜ್ಞಾತೃವೆನಿಸಿಕೊಂಡ ಆತ್ಮವರ್ಗವೇ ಆ ಧ್ಯಾತ್ಮವೆನಿಸುವುದು. ಪೃಥಿವ್ಯಾದಿಗಳಲ್ಲಿರುವ ಗಂಧಾದಿಗುಣಗಳೇಅಥಭೂತವೆ ನಿಸುವುದು.ಹೀಗೆ ಭಗವಂತನು ಮೊದಲು ಪುರುಷಾಥಿಮಿತವಾಗಿಸಮಷ್ಟಿರೂ ಪದಿಂದಒಂದೇ ಆಗಿದ್ದ ಕಾರಣದ್ರವ್ಯವನ್ನೇ,ಅಥಭೂತವೆಂದೂ, ಆಧ್ಯಾತ್ಮವೆಂ ದೂ,ಆಧಿದೈವವೆಂದೂ ಮೂರುವಿಭಾಗಗಳಿಂದ ಸೃಷ್ಟಿಸಿದನು. ಎಲೈ ರಾಜೇಂ