ಪುಟ:ಶ್ರೀಮದ್ಭಾಗವತವು ಪ್ರಥಮ ದ್ವಿತೀಯ ಸ್ಕಂಧಗಳು.djvu/೩೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

9 ಶ್ರೀಮದ್ಭಾಗವತಮಾಹಾತ್ಮವು. ಇದರಿಂದ ಆ ಬ್ರಾಹ್ಮಣನಿಗೆ ಮೇಲೆಮೇಲೆ ಚಿಂತೆಯು ಹೆಚ್ಚಿತು. ಹೀಗೆ ಚಿಂ ತಾಕುಲನಾದ ಬ್ರಾಹ್ಮಣನು, ಜಿಹಾಸೆಯಿಂದ ದೇಶಭಷ್ಯನಾಗಿ, ಅರಣ್ಯ ಕ್ಕೆ ಹೋಗಿ, ಅಲ್ಲಲ್ಲಿ ಸುತ್ತುತ್ತಾ, ಬಹಳ ದಾಹದಿಂದ ಪೀಡಿತನಾಗಿ ಒಂ ದು ಕೆರೆಯಬಳಿಗೆ ಬಂದನು. ಅಲ್ಲಿ ನೀರನ್ನು ಕುಡಿದು ಸಂತಾನಚಿಂತೆಯಿಂದ ಲೇ ಕೊರಗುತ್ತ ಕುಳಿತನು. ಇಷ್ಟರಲ್ಲಿ ಆ ಕಡೆಗೆ ಒಬ್ಬ ಸನ್ಯಾಸಿಯು ಬಂದುಸೆರಿದನು. ಆ ಸನ್ಯಾಸಿಯನ್ನು ಕಂಡೊಡನೆ ಈ ಬ್ರಾಹ್ಮಣನು, ಆ ವನಬಳಿಗೆ ಹೋಗಿ, ಅವನ ಪಾದಗಳನ್ನು ಹಿಡಿದು ನಮಸ್ಕರಿಸಿ, ದುಃಖದಿಂದ ಸಿಟ್ಟುಸಿರು ಬಿಡುತ್ತ ಅವನಮುಂದೆ ನಿಂತನು. ಆಗ ಆ ಯತಿಯು, ಬ್ರಾ ಹ್ಮಣನನ್ನು ಕುರಿತು ದುಃಖ ಕಾರಣವನ್ನು ವಿಚಾರಿಸಲು ಆ ಬ್ರಾಹ್ಮಣನು, (ಎಲೈ ಯತೀಶ್ವರನೆ? ನಾನೇನು ಹೇಳಲಿ? ಇದು ನನ್ನ ಪಾಪಶೇಷವ. ಸಂ ತಾನವಿಲ್ಲವೆಂಬ ದುಃಖಕ್ಕಾಗಿ ನಾನು ಪ್ರಾಣತ್ಯಾಗವನ್ನು ಮಾಡಬೇಕೆಂದು ನಿಶ್ಚಯಿಸಿ ಇಲ್ಲಿಗೆ ಹೊರಟುಬಂದೆನು. ಸಂತಾನವಿಲ್ಲದ ಮನುಷ್ಯನ ಬದುಕಿ ದರೇನು ? ಸತ್ತರೇನು ? ಮಕ್ಕಳಿಲ್ಲದ ಮನೆಯ , ಸಂತತಿಯಲ್ಲದ ಕುಲವೂ ಕೇವಲಶೂನ್ಯಪ್ರಾಯವಲ್ಲದೆ ಬೇರೆಯ'ಎಲೈ ಮಹಾತ್ಮನ ! ಪಾಪಿಯಾದ ನಾನು ಮನೆಗೆ ತಂದು ಸಾಕಿದ ಹಸಿವು ಬಂಜೆಯಾಯಿತು. ನಾನು ನಮ್ಮ ಗಿಡವೂ ಫಲಿಸಬೆಹೋಯಿತು. ನಾನು ಮನೆಯಲ್ಲಿ ತಂಬೈ ... ಹೆಣ್ಣು ಕಾಯಿ ಗಳೂ ಒಣಗಿಹೋಗುವುವು. ಸಂತಾನವಿಲ್ಲದ ನೀವು ಎಷ್ಟೇ ಪ್ರೀತಿಯಿಂದ ಕೊಟ್ಟ ಹವ್ಯಕವ್ಯಗಳನ್ನು ಕೊಡ ದೇವತೆಗೆ ತಾಗಲಿ, Jಹ್ಮಣರಾಗಲಿ, ಆದ ರದಿಂದ ಗ್ರಹಿಸಲಾರರು. ಇಂತಹ ನಾನು ಲೋಕದಲ್ಲಿ ಬದುಕಿ ಫಲವೇನು ಎಂದು ಗಯಾಗಿ ಅಳುವುದಕ್ಕೆ ತೊಡಗಿದನು. ಇದನ್ನು ನೋಡಿ ಯ ತಿಗೆ, ಆ ಬ್ರಾಹ್ಮಣನಲ್ಲಿ ಕರುಣೆ ಹುಟ್ಟಿತು. `ತನ್ನ ಧ್ಯಾನದೃಷ್ಟಿಯಿಂದ ಆ ಬ್ರಾಹ್ಮಣನ ಅದೃಷ್ಟವು ಹೇಗಿರಬಹುದೆಂಬುದನ್ನು ಕಂಡುಕೊಂಡು, ಅವ ನನ್ನು ಕುರಿತು (ಬ್ರಾಹ್ಮಣಾ! ಇನ್ನು ಮೇಲೆ ನೀನು ಈ ಸಂತಾನಚಿಂತೆಯಂ ಬ ಅಜ್ಞಾನವನ್ನು ತೊರೆದುಬಿಡು ! ಅವರವರ ಕರ್ಮಗತಿಯನ್ನು ಮೀರಿ ಹೋಗುವುದು ಯಾರಿಗೂ ಸಾಧ್ಯವಲ್ಲ. ಈ ಸಂಸಾರವಾಸನೆಯನ್ನು ಬಿಟ್ಟು, ಮನಸ್ಸಿನಲ್ಲಿ ವಿವೇಕವನ್ನು ತಂದುಕೊಳ್ಳುವನಾಗು ! ನಿನ್ನ ಹಣೆಯ ಬರಹ