ಪುಟ:ಶ್ರೀಮದ್ಭಾಗವತವು ಪ್ರಥಮ ದ್ವಿತೀಯ ಸ್ಕಂಧಗಳು.djvu/೩೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಶ್ರೀಮದ್ಭಾಗವತಮಾಹಾತ್ಮವು. ಆದರಮೇಲೆ ಇವಳಿಗೆ ಆ ಸುಳ್ಳನ್ನು ದಕ್ಕಿಸಿಕೊಳ್ಳುವುದಕ್ಕೆ ಈ ಪಾಯವೇನೆಂಬ ಚಿಂತೆಯು ಹುಟ್ಟೆತು. ಒಮ್ಮೆ ಅವಳ ತಂಗಿಯು ಆಕಸ್ಮಾ ತಾಗಿ ಮನೆಗೆ ಬಂದಾಗ ಅವಳೊಡನೆ ಈ ರಹಸ್ಯಗಳೆಲ್ಲವನ್ನೂ ಹೇಳಿಕೊ೦ ಡು “ಅಯ್ಯೋ!ತಂಗಿ! ನಾನೇನುಮಾಡಲಿ?ನನ್ನ ಪತಿಯು ವರಪ್ರಸಾದದಿಂದ ನನಗೆ ತಂದುಕೊಟ್ಟ ಹಣ್ಣನ್ನು ನಾನು ಭಕ್ಷಿಸಿಬಿಟ್ಟಿರುವುದಾಗಿ ಸುಳ್ಳಾಡಿರು ವೆನು. ನಾನು ಗರ್ಭಿಣಿಯಾಗದಿದ್ದರೆ ನನ್ನ ವಂಚನೆಯು ಹೊರಗೆ ಬೀಳುವುದು. ಮುಂದೇನು ಮಾಡಬೇಕೆಂದು ತೋರಲಿಲ್ಲ. ಇದಕ್ಕಾಗಿ ಆಹೋರಾತ್ರವೂ ಕೊರಗಿ ಸಾಯುತ್ತಿರುವೆನು. ಇದಕ್ಕೇನಾದರೂ ಉಪಾಯವನ್ನು ಹೇಳಬಲ್ಲೆ ಯಾ?” ಎಂದಳು ಅದಕ್ಕ ತಂಗಿಯು, ಆಕಾ! ಚಿಂತಿಸಬೇಡ! ಇದೋ ನಾ ನು ಗರ್ಭಿಣಿಯಾಗಿರುವೆನು ಪ್ರಸವವಾದಮೇಲೆ ಈ ಮಗುವನ್ನೇ ಕೊಡು ವೆನು. ಅದುವರೆಗೆ ನೀನೂ ಗರ್ಭಿಣಿಯಂತೆ ನಟಿಸುತ್ತ, ಹೊರಗೆ ಬಾರದೆ ಸುಖವಾಗಿ ಮನೆಯಲ್ಲಿಯೇ ಇರು. ಆದರೆ ನನ್ನ ಗಂಡನು ಇದಕ್ಕೊಪ್ಪುವನೋ ಇಲ್ಲವೋ ಎಂಬ ಸಂದೇಹವು ನಿನಗಿರಬಹುದು!ಸೀನು ಸ್ವಲ್ಪ ಹಣವನ್ನು ಕೊ ಡುವುದಾದರೆ ಅವನನ್ನೂ ಒಪ್ಪಿಸಿಬಿಡಬಹುದು. ನನ್ನ ಗರ್ಭವೇನಾಯಿತೆಂ ದು ಜನರು ಕೇಳುವಪಕ್ಷದಲ್ಲಿ ಗರ್ಭವು ಚೆನ್ನಾಗಿ ಬೆಳೆಯುವುದಕ್ಕೆ ಮೊದಲ. ಆರುತಿಂಗಳಲ್ಲಿಯೇ ಪ್ರಸವವಾದುದರಿಂದ ಹುಟ್ಟುವಾಗಲೇ ಆ ಶಿಶುವು ಸತ್ತು ಹೊಯಿತೆಂದು ನಾನು ಪ್ರವಾದವನ್ನು ಹುಟ್ಟಿಸುವೆನು. ಪ್ರತಿದಿನವೂ ನಿನ್ನ ಮನೆಗೆ ಬಂದು ಆ ಮಗುವನ್ನೂ ಪೋಷಿಸುತ್ತಿರುವನು. ಈಗ ನೀನು ಬಚ್ಚಿಟ್ಟಿ ರುವ ಹಣ್ಣನ್ನು ತಿನ ಮನೆಯ ಹಸುವಿಗೆ ತಿನ್ನಿಸಿಬಿಡು! ಗರ್ಭವುಂಟಾಗುವು ದೋ ಇಲ್ಲವೋ ಎಂದು ಪರೀಕ್ಷಿಸುವೆವು” ಎಂದಳು. ಸ್ತ್ರೀಯರ ಕರಸ್ಪ ಭಾವಕ್ಕೆ ತಕ್ಕಂತೆ ಆ ಕಾರಗಳೆಲ್ಲವೂ ಹಾಗೆಯೇ ನಡೆಸಲ್ಪಟ್ಟವು. ಕೆಲವು ಕಾಲದಮೇಲೆ ದುಂಧುಲಿಯ ತಂಗಿಯು, ಒಂದುಗಂಡುಮಗುವನ್ನು ಪ್ರಸ ವಿಸಿದಳು. ದ್ರವ್ಯಾಸೆಯಿಂದ ಆಕೆಯ ಪತಿಯೇ ಆ ಮಗುವನ್ನು ತಂದು ರಹ ಸ್ಯವಾಗಿ ದುಂಧುಲಿಗೆ ಒಪ್ಪಿಸಿಬಿಟ್ಟನು. ಆ ದುಂಧುಲಿಯೂಕೂಡ ತನಗೆ ಗಂಡುಮಗುವು ಹುಟ್ಟಿದುದಾಗಿ ಪತಿಗೆ ತಿಳಿಸಿದಳು. ಆತ್ಮದೇವನೆಂಬ ಬ್ರಾ ಹ್ಮಣನು ಪರಮಸಂತೋಷದಿಂದ ಬ್ರಾಹ್ಮಣರಿಗೆ ಬೇಕಾದ ದಾನಗಳನ್ನು