ಪುಟ:ಶ್ರೀಮದ್ಭಾಗವತವು ಪ್ರಥಮ ದ್ವಿತೀಯ ಸ್ಕಂಧಗಳು.djvu/೫೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೪೦ ಶ್ರೀಮದ್ಭಾಗವತಮಾಹಾತ್ಮವು. ಇನ್ನೂ ರುವರುಷಗಳಮೇಲೆ ಆಷಾಢಶುದ್ಧ ನವಮಿಯಲ್ಲಿ, ಗೋಕರ್ಣನು ಈ ಕಥೆಯನ್ನು ಪ್ರವೇಶಿಸಿದನು. ಅದರಿಂದಾಚೆಗೆ ಮೂರುಸಾವಿರವರುಷಗಳಮೇಲೆ ಕಾರ್ತಿಕ ಶುದ್ಧ ನವಮಿಯಲ್ಲಿ ಬ್ರಹ್ಮಪುತ್ರರಾದ ಸನಕಾದಿಗಳು ಇದನ್ನು ನಾ ರದನಿಗೆ ಉಪದೇಶಿಸಿದರು. ಇದೇ ಇದರ ಕಾಲಕ್ರಮವು” ಈ ನಕಾ! ಮುಖ್ಯ ವಾಗಿ ಕಲಿಯುಗದಲ್ಲಿ ಈ ಭಾಗವತವೊಂದೇ ಸತ್ವಪಾಪನಿವಾರಕವು!ಇದೊಂ ಈ ಮುಕ್ತಿಗೆ ಮುಖ್ಯಸಾಧನವು : ಇದೊಂದೇ ಭಗವಂತನಿಗೆ ಪ್ರಿಯವಾದು ದು! ಸಮಸ್ತ ಧರ್ಮಗಳಿಗಿಂತಲೂ ಇದೊಂದೇ ಮೇಲಾದುದು! ವಿಷ್ಣು ಭಕ್ತಿ, ಯುಳ್ಳವರಿಗೆ ಯಾವವಿಧದಿಂದಲೂ ಕೊರತೆಯಿಲ್ಲವು. ಲೋಕಸಂಹಾರಕ ನಾದ ಯಮನೂಕೂಡ ಜೀವರಾಶಿಯನ್ನೆಳೆಯುವುದಕ್ಕಾಗಿ ಪಾಶವನ್ನು ಕೈ ಯಲ್ಲಿ ಹಿಡಿದು ನಿಂತಿರುವ ತನ್ನ ದೂತರನ್ನು ನೋಡಿ, ಅವರ ಕಿವಿಯಲ್ಲಿ 'ಎ ಲೈ ದೂತರೆ! ನೀವು ಭಗವತ್ಕಥಾಶ್ರವಣಪರರಾದವರಲ್ಲಿಮಾತ್ರ ಕೈಯಿಡ ಬೇಡಿರಿ! ಇತರ ಜೀವರಾತಿಗಳಮೇಲೆ ನಮ್ಮ ಅಧಿಕಾರವೇಹೊರತು ವಿಷ್ಣು ಭಕ್ತರಮೇಲಿಲ್ಲವು.” ಎಂದು ಹೇಳಿರುವನು. ಮುಖ್ಯವಾಗಿ ಯಾವನು ಈ ಭಾಗವತಕಥೆಯನ್ನು ಪಠಿಸುವನೋ, ಯಾವನು ಅದನ್ನು ಭಕ್ತಿಯಿಂದಕೇಳು ವನೋ, ಅವನಿಗೆ ಯಾವ ಮನೋರಥವೂ ದುರ್ಲಭವಲ್ಲ” ಎಂದು ಸೂತ ಪೌರಾಣಿಕನು ಶನಕನಿಗೆ ಹೇಳಿದನು. * ಇ - 5

  • ಈ ಭಾಗವತಮಾಹಾತ್ಮವು ಖಾದ್ಯ ಪರಾಣದ ಉತ್ತರಖಂಡದಲ್ಲಿರುವ ಆರ ಜ್ಞಾಯಗಳಿಂದ ಸಂಗ್ರಹಿಸಲ್ಪಟ್ಟಿದೆ.