ಪುಟ:ಶ್ರೀಮದ್ಭಾಗವತವು ಪ್ರಥಮ ದ್ವಿತೀಯ ಸ್ಕಂಧಗಳು.djvu/೭೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅಧ್ಯಾ: ೧.] ಪ್ರಥಮಸ್ಕಂಧವು. RE ಸುವವರನ್ನು ಪವಿತ್ರರನ್ನಾಗಿ ಮಾಡುವುದಲ್ಲವೆ ? ಪುಣ್ಯಶ್ಲೋಕನಾಗಿಯೂ, ದೇವಾದಿದೇವತೆಗಳಿಂದ ಸ್ತುತಿಸಲ್ಪಟ್ಟವನಾಗಿ ಇರುವ ಆ ಭಗವಂ ತನ ಕೀರ್ತಿಯು, ಕಲಿಕಲ್ಮಷಗಳೆಲ್ಲವನ್ನೂ ಸಿಗಿಸುವಾಗ, ಮನಶುದ್ಧಿಯನ್ನ ಪೇಕ್ಷಿಸತಕ್ಕೆ ಯಾವ ಮನುಷ್ಯನತಾನೇ ಅವನ ಚರಿತ್ರೆಗಳನ್ನು ಕೇಳದೆಬಿಡು ವನು! ಎಲೈ ಸೂತನೆ! ಅತಿವಿಸ್ತರಗಳಾದ ಆ ಭಗವಲ್ಲೀಲೆಗಳು, ನಾರದಾದಿ ಮಹರ್ಷಿಗಳಿಂದಲೂ ಸ್ತುತಿಸಲ್ಪಡುವುವು ಆದುದರಿಂದ ಆತನ ಚರಿತ್ರವನ್ನು ಕೇಳಬೇಕೆಂಬ ಅಭಿರುಚಿಯು ನಮಗೂ ಬಹಳವಾಗಿರುವುದು ತನ್ನ ಮಾಯೆ ಯಿಂದ ಸೃಷ್ಣಲೀಲೆಗಳನ್ನು ನಡೆಸುತ್ತಿರುವ ಆ ಭಗವಂತನ ಅವತಾರಕ Sಿಗಳೆಲ್ಲವನ್ನೂ ವಿವರಿಸು ! ಆ ಮಹಾತ್ಮನ ಚರಿತ್ರೆಗಳನ್ನು ಕೇಳುವು ದರಲ್ಲಿ ಎಷ್ಟಾದರೂ ತೃಪ್ತಿಯುಂಟಾಗುವುವಲ್ಲ. ಕೇಳುತಿದ್ದಷ್ಟೂ ಅದು ಮೇಲೆಮೇಲೆ ಹೊಸರುಚಿಯನ್ನು ಹುಟ್ಟಿಸುತ್ತಿರುವುದು ಪೂರ್ವದಲ್ಲಿ ಲೀಲಾ ಮಾನುಷವಿಗ್ರಹವನ್ನು ಧರಿಸಿದ ಶ್ರೀಕೃಷ್ಣನು ಬಲರಾಮಸಮೇತನಾಗಿ ಈ ಲೋಕದಲ್ಲಿ ಅತಿಮಾನುಷಕೃತ್ಯಗಳನ್ನು ನಡೆಸಿದನಲ್ಲವೆ! ಮನೋಹರಗಳಾಗಿ ಯೂ, ಮುಕ್ತಿದಾಯಕಗಳಾಗಿಯೂ ಇರುವ ಆ ಶ್ರೀಕೃಷ್ಣನ ಚರಿತ್ರಗಳು ಕೇವಲಮೂಢರಿಗೂಕೂಡ ಮನಸ್ಸನ್ನು ಕರಗಿಸುವುವು.ಹೀಗಿರುವಾಗ, ಜ್ಞಾ ಸಿಗಳಾಗಿಯೂ, ರಸಜ್ಞರಾಗಿಯೂ ಇರುವವರ ಮನಸ್ಸಿಗೆ ರುಚಿಯನ್ನು ಹು ಟೈಸುವುದರಲ್ಲಿ ಸಂದೇಹವೇನಿದೆ ? ಆದುದರಿಂದ ಎಲೈ ಮಹಾತ್ಮನೆ! ನೀನು ಆ ಕೃಷ್ಣಾವತಾರಕಥೆಗಳನ್ನು ನಮಗೆ ತಪ್ಪದೆ ತಿಳಿಸಬೇಕು. ಈಗಲಾದ ರೋ ನಮ್ಮ ತಪಸ್ಸಿಗೆ ವಿಘ್ನು ಕರವಾದ ಕಲಿಕಾಲವು ಪ್ರಾಪ್ತವಾಯಿತು ಯಾವುದಾದರೂ ಉಪಾಯದಿಂದ ಆ ಕಲೆಯನ್ನು ಜಯಿಸಬೇಕೆಂದುದ್ದೇಶಿಸಿ ನಾವು ಎಷ್ಟೆಷ್ಟೋ ಪ್ರಯತ್ನಗಳನ್ನು ಮಾಡಿದೆವು. ಯಾವುದರಿಂದಲೂ ಆ ದು ಸಾಧ್ಯವಾಗುವಂತೆ ತೋರಲಿಲ್ಲ! ಆದರಿಂದ ಈಗ ನಾವು ಈ ವಿಷ್ಟು ಕ್ಷೇತ್ರ ದಲ್ಲಿ ಮಹಾವಿಷ್ಟು ಪ್ರೀತಿಗಾಗಿ, ಸಹಸ್ರಸಂವತ್ಸರಗಳವರೆಗೆ ನಡೆಸಬೇಕಾದ ದೀರ್ಘಸತ್ರವೆಂಬ ಯಾಗವನ್ನು ನಡೆಸುತ್ತಿರುವೆವು. ನಡುನಡುವೆ ಭಗವಚ್ಚರಿ ತ್ರವನ್ನು ಕೇಳುವುದಕ್ಕೂ ನಮಗೆ ಬೇಕಾದಷ್ಟು ಅವಕಾಶವಿರುವುದು. ಬೇರೆ ಯಾವ ಉಪಾಯದಿಂದಲೂ ಈ ಕಲೆಯನ್ನು ದಾಟುವುದು ನಮ್ಮಿಂದಸಾಧ್ಯ